fbpx
ಸಮಾಚಾರ

ರಾಜಕೀಯಕ್ಕೆ ಬರಲ್ಲ ಎಂದು ಹೇಳಿ ಬಿಜೆಪಿಗೆ ನಿರಾಸೆ ಮೂಡಿಸಿದ ಯದುವೀರ್ ಒಡೆಯರ್

ಸದ್ಯ ರಾಜ್ಯದಲ್ಲಿ ಚುನಾವಣಾ ಕಾವೇರಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ಸೆಳೆಯಲು ನಾ ಮುಂದು ತಾ ಮುಂದು ಎಂದು ರಾಜಕೀಯ ಪಕ್ಷಗಳು ರಂಗು ರಂಗಿನ ನಾಟಕಗಳನ್ನು ಶುರುವಿಟ್ಟಿದ್ದಾರೆ.. ಪಕ್ಷ ತೊರೆಯುವುದು, ಮತ್ತೊಂದು ಪಕ್ಷವನ್ನು ಸೇರಿಕೊಳ್ಳುವುದು ಸೇರಿದಂತೆ ನನ್ನ ದೊಂಬರಾಟಗಳನ್ನು ನಡೆಸುತ್ತಿರುವ ಕೆಟ್ಟಾ ಕೊಳಕು ರಾಜಕಾರಣಿಗಳು ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟು ಕಚ್ಚಿ ಕಟ್ಟಿ ನಿಂತುಬಿಟ್ಟಿದ್ದಾರೆ.

 

ಇತ್ತೀಚಿಗೆ ಯದುವೀರ್ ಒಡೆಯರ್ ರಾಜಕೀಯಕ್ಕೆ ಸೇರಲಿದ್ದಾರೆ ಹಾಗು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಯದುವೀರ್ ಒಡೆಯರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ. ಯಾವುದೇ ಪಕ್ಷದ ಪ್ರಚಾರ ಕೆಲಸದಲ್ಲೂ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಸೇರ್ಪಡೆ ಸಂಬಂಧಿಸಿದಂತೆ ಬರುತ್ತಿದ್ದ ವದಂತಿ ಸುದ್ದಿಗಳಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೆರೆ ಎಳೆದಿದ್ದಾರೆ.

 

 

ಕೊಡಗು ಜಿಲ್ಲೆಯ ಗೊಣಿಕೊಪ್ಪಲಿನಲ್ಲಿರುವ ಕಾಲೇಜು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಯದುವೀರ್​ ಅವರು ಮಾರ್ಚ್​. 30 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಮೈಸೂರು ನಗರಕ್ಕೆ ಆಗಮಿಸುತ್ತಿರುವ ಮತ್ತು ನಮ್ಮನ್ನು ಭೇಟಿ ಮಾಡುತ್ತಿರುವ ವಿಚಾರ ಗೊತ್ತಿಲ್ಲ. ನಾನು ಯಾವುದೇ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಅವರು ರಾಜಕೀಯಕ್ಕೆ ಸೇರುವ ಸುದ್ದಿಗೆ ತೆರೆ ಬಿದ್ದಂತಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top