fbpx
ಸಮಾಚಾರ

 ‘ಟೈಮ್‌’ ಪ್ರಭಾವಿಗಳ ಸಮೀಕ್ಷೆ : ವಿಶ್ವದ 100  ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ

ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ

ಟೈಮ್ಸ್ ಮ್ಯಾಗ್ಜಿನ್ ಬಿಡುಗಡೆ ಮಾಡಿರುವ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಪ್ರಧಾನಿ ಮೋದಿ ಸ್ಥಾನ ಪಡೆದುಕೊಂಡಿದ್ದಾರೆ.

 

 

ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಸೇರ್ಪಡೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, 4ನೆ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮೈಕ್ರೋ ಸಾಫ್ಟ್ ಸಂಸ್ಥೆ ಮುಖ್ಯಸ್ಥ ಸತ್ಯ ನಾದೆಲ್ಲಾ, ಚೈನಾ ಅಧ್ಯಕ್ಷ ಜಿಂಗ್ ಪಿಂಗ್ ವಿಶ್ವದ ಪ್ರಭಾವಿ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದಾರೆ.

 

 

ಜಾಗತಿಕ ವಿದ್ಯಮಾನಗಳ ಮೇಲೆ ವಿಶ್ವ ಮುಖಂಡರ ಕೊಡುಗೆಯನ್ನಾಧರಿಸಿ ಈ ಪ್ರಭಾವಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶ್ವದ ಖ್ಯಾತ ಕಲಾವಿದರು, ವಿಜ್ಞಾನಿಗಳು, ಗಣ್ಯರು, ವಾಣಿಜ್ಯೋದ್ಯಮಿಗಳನ್ನು ಒಳಗೊಂಡಿರುವ ವಿಶ್ವ 100 ಪ್ರಭಾವಿಗಳ ಪಟ್ಟಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

 

ಒಂದು ದಶಕಕ್ಕೂ ಹೆಚ್ಚು  ಕಾಲದಿಂದ ದಿ ಟೈಮ್‌ ಮ್ಯಾಗಜೀನ್‌ ವರ್ಷಂಪ್ರತಿ ವಿಶ್ವದ ನೂರು ಅತ್ಯಂತ ಪ್ರಭಾವೀ ವ್ಯಕ್ತಿಗಳನ್ನು ಪಟ್ಟಿ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಮತ್ತು ಪ್ರಭಾವೀ ವಿಜ್ಞಾನಿಗಳನ್ನು, ಕಲಾವಿದರನ್ನು, ನಾಯಕರನ್ನು, ಕಾರ್ಯಕರ್ತರನ್ನು ಮತ್ತು ಉದ್ಯಮಪತಿಗಳನ್ನು ಗುರುತಿಸುತ್ತದೆ.

 

ವಿಶ್ವದ ನೂರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸುವಲ್ಲಿ ಟೈಮ್‌ ಸಂಪಾದಕರ ತೀರ್ಮಾನವೇ ಅಂತಿಮವಾಗಿದೆಯಾದರೂ ನಿಯತಕಾಲಿಕವು ತನ್ನ ಓದುಗರಿಗೆ ಆನ್‌ಲೈನ್‌ನಲ್ಲಿ  ತಮ್ಮ ಅಭಿಪ್ರಾಯದ ಪ್ರಕಾರದ ಪ್ರಭಾವಿ ವ್ಯಕ್ತಿಗೆ ಮತ ಹಾಕುವಂತೆ ಕೇಳಿಕೊಂಡಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top