fbpx
ಸಿನಿಮಾ

ವಿಷ್ಣು ಅಳಿಯ ಅನಿರುದ್ಧ್‌ಗೆ ಸೀರಿಯಲ್‌ನಲ್ಲಿ ಛಾನ್ಸ್ ಬೇಕಂತೆ!

ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅದೇಕೋ ಸೀರಿಯಲ್ ಜಗತ್ತಿನತ್ತ ಮುಖ ಮಾಡಿದಂತಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ರಾಜಾಸಿಂಹ ಚಿತ್ರದ ಹೀನಾಯ ಸೋಲಿನ ಬಳಿಕ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿಲ್ಲವಾ ಅಥವಾ ಸೀರಿಯಲ್ ಜಗತ್ತಿನಲ್ಲಿಯೂ ಮಾವನವರ ಪ್ರಭೆ ಹೇಗೆ ಕೆಲಸ ಮಾಡುತ್ತದೆಂದು ಟೆಸ್ಟು ಮಾಡುವ ಹಂಬಲವಾ ಗೊತ್ತಿಲ್ಲ. ಆದರೆ ಅನಿರುದ್ಧ್ ಧಾರಾವಾಹಿಗಳಲ್ಲಿ ನಟಿಸಲು ಮುಂದಾಗಿರೋದು ಮಾತ್ರ ನಿಜ.

 

ಹಾಗಂತ ಯಾರೂ ಅವರನ್ನು ಹಾಕಿಕೊಂಡು ಸೀರಿಯಲ್ ಮಾಡೋ ಪ್ರಸ್ತಾಪವಿಟ್ಟಿಲ್ಲ. ಬದಲಾಗಿ ಯಾವುದಾದರೂ ಧಾರಾವಾಹಿ ಶುರುವಾಗೋದಿದ್ದರೆ ಅದರ ಲೀಡ್ ರೋಲ್ ಮಾಡಲು ಸಿದ್ಧನಿದ್ದೇನೆ. ಹೊಸದಾಗಿ ಧಾರಾವಾಹಿ ಶುರು ಮಾಡುವವರೆಲ್ಲರೂ ತನ್ನ ಹೆಸರನ್ನು ಪರಿಗಣಿಸಿ ಅಂತ ಅನಿರುದ್ಧ್ ಸಂಬಂಧಿಸಿದವರಿಗೆ ಮೆಸೇಜು ಬಿಡಲಾರಂಭಿಸಿದ್ದಾರೆ.

 

 

ಯಾರೇ ನಟರಾದರೂ ಹೀಗೆ ಅವಕಾಶಕ್ಕಾಗಿ ಅಂಗಲಾಚುವಂತಾಗೋದು ಸಂಕಟದ ವಿಚಾರ. ಆದರೆ ಬಂದ ಅವಕಾಶವನ್ನೆಲ್ಲ ಸರಿಯಾಗಿ ಬಳಸಿಕೊಳ್ಳದೆ, ಯಾರದ್ದೋ ನೆರಳಿನಲ್ಲಿಯೇ ಸೇಫಾಗಿರುವ ಮೆಂಟಾಲಿಟಿಯಿಂದ. ಎಲ್ಲವನ್ನೂ ವ್ಯಾವಹಾರಿಕವಾಗಿ ಮಾತ್ರ ನೋಡುವ ಬುದ್ಧಿಯಿಂದ ಇಂಥಾ ಸ್ಥಿತಿ ಬಂದರೆ ಬಹುಶಃ ಯಾರೇನೂ ಮಾಡಲಾಗುವುದಿಲ್ಲ. ಇದೀಗ ಅನಿರುದ್ಧ್ ಧಾರಾವಾಹಿಗಳಲ್ಲಿ ನಟಿಸಲು ಮುಂದಾಗಿರೋ ಸುದ್ದಿ ಕೇಳಿ ಕೆಲ ಮಂದಿ ’ಸಿನಿಮಾಗಳನ್ನು ಹಾಳು ಮಾಡಿದ್ದಾಯ್ತು, ಈಗ ಸೀರಿಯಲ್‌ಗಳನ್ನೂ ಹಾಳು ಮಾಡೋ ಮನಸಾಗಿದೆಯೇನೋ’ ಎಂಬಂತೆ ಕುಹಕವಾಡುತ್ತಿರೋದರಲ್ಲಿಯೇ ಅನಿರುದ್ಧ ಅವರ ಅಸಲೀ ವ್ಯಕ್ತಿತ್ವದ ಅರಿವಾಗುತ್ತದೆ.

 

 

ಅಷ್ಟಕ್ಕೂ ಸರಿಯಾಗಿದ್ದಿದ್ದರೆ ಅನಿರುದ್ಧ್ ಖಂಡಿತಾ ವಿಷ್ಣುವರ್ಧನ್ ಅವರ ಉತ್ತರಾಧಿಕಾರಿಯಾಗಿರುತ್ತಿದ್ದರು. ಆದರೆ ವಿಷ್ಣು ಸ್ಮಾರಕದ ವಿಚಾರದಲ್ಲಿಯೇ ಸಾಹಸ ಸಿಂಹನ ಅಭಿಮಾನಿಗಳಿಗೆ ಅಳೀಮಯ್ಯ ಅನಿರುದ್ಧನ ಅಸಲೀಯತ್ತು ಗೊತ್ತಾಗಿದೆ. ಯಾಕೆಂದರೆ, ಅನಿರುದ್ಧ್ ವಿಷ್ಣು ಅಭಿಮಾನಿಗಳ ಭಾವನಾತ್ಮಕ ತುಮುಲವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಬದಲಾಗಿ ಅದನ್ನೂ ಅವರು ವ್ಯಾವಹಾರಿಕವಾಗಿ ನೋಡಿದರೆಂಬ ಸಿಟ್ಟು ಅಭಿಮಾನಿಗಳಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top