fbpx
ಸಿನಿಮಾ

ದುಬೈನಲ್ಲಿ ಅಸತೋಮ ಸದ್ಗಮಯ ಟ್ರೇಲರ್ ರಿಲೀಸ್!

ರಾಜೇಶ್ ವೇಣೂರು ನಿರ್ದೇಶನದಲ್ಲಿ ಅಶ್ವಿನ್ ಪಿರೇರಾ ನಿರ್ಮಿಸುತ್ತಿರುವ ಅಸತೋಮ ಸದ್ಗಮಯ ಚಿತ್ರದ ಟ್ರೇಲರ್ ದುಬೈನ್ ಹೋಟೇಲ್ ಫಾರ್ಚೂನ್ ಪ್ಲಾಜಾದಲ್ಲಿ ಬಿಡುಗಡೆಗೊಂಡಿದೆ. ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್‌ನ ಮಾಲಕರಾದ ಪ್ರವೀಣ್ ಶೆಟ್ಟಿಯವರು ಈ ಟ್ರೇಲರನ್ನು ಬಿಡುಗಡೆಗೊಳಿಸಿದ್ದಾರೆ.

 

 

ಕನ್ನಡದ ಚಿತ್ರವನ್ನು ದುಬೈಗೆ ತಂದು ಟ್ರೇಲರ್ ರಿಲೀಸ್ ಮಾಡ್ತಾ ಇರೋದು ಕನ್ನಡಿಗರಾದ ನಮಗೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಈ ಚಿತ್ರ ಮನರಂಜನೆ ಜೊತೆಗೆ ಉತ್ತಮ ಮೆಸೇಜ್ ಇರುವಂತಹ ಚಿತ್ರ ಎಂದು ಟ್ರೇಲರ್ ನೋಡುವಾಗ ಅರ್ಥವಾಗುತ್ತದೆ. ಈ ಚಿತ್ರ ಯಶಸ್ವಿಯಾಗಿ, ಕರ್ನಾಟಕದಾದ್ಯಂತ ಮನೆಮಾತಾಗಲಿ ಎಂದು ಪ್ರವೀಣ್ ಶೆಟ್ಟಿ ಅವರು ಹಾರೈಸಿದರು.

 

 

ನಂತರ ಮಾತನಾಡಿದ ಜೈನ್ ಮಿಲನ್ ಅದ್ಯಕ್ಷರಾದ ದೇವ್ ಕುಮಾರ್ ಕಾಂಬ್ಳಿಯವರು, ಚಿತ್ರದ ಹೆಸರು ತುಂಬಾ ಅರ್ಥಗರ್ಬಿತವಾಗಿದೆ, ಟ್ರೇಲರ್ ನೋಡುವಾಗ ಇದರಲ್ಲಿ ಸರಕಾರಿ ಶಾಲೆಗಳ ಅವನತಿ ಬಗ್ಗೆ ಪ್ರಸ್ತಾಪವಿರುವುದು ಗೋಚರಿಸುತ್ತದೆ, ನಾನು ಕೂಡಾ ಸರ್ಕಾರಿ ಶಾಲೆಯಲ್ಲೇ ಓದಿರೋನು ಆದರೆ ದೇವರು ನನಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ, ಈ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಶುಭ ಹಾರೈಸಿದರು.

ಅಸತೋಮ ಸದ್ಗಮಯ ಎನ್ನುವ ಶಬ್ದ ಕೇಳುವಾಗಲೇ ನಮ್ಮ ನೆನಪು ಶಾಲದಿನಗಳೆಡೆಗೆ ಜಾರುತ್ತದೆ. ಯಾಕೆಂದರೆ ಓದುವಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದೇ ಅಸತೋಮ ಸದ್ಗಮಯ ಮಂತ್ರದಿಂದ, ಈ ಚಿತ್ರದಲ್ಲಿ ಕೂಡ ಸರ್ಕಾರಿ ಶಾಲೆಯ ಪ್ರಸ್ತಾಪವಿರುವುದರಿಂದ, ಈ ಟೈಟಲ್ ಸೂಕ್ತವಾಗಿದೆ ಎಂಬುದು ಅರುಣ್ ಮುತುಗಡೂರ್ ಮಾತು.

 

 

ಕಾರ್ಯಕ್ರಮದಲ್ಲಿ ಕೆಸಿವೊ ಅಧ್ಯಕ್ಷರಾದ ಹಾಗೂ ನ್ಯೂಸ್‌ಕರ್ನಾಟಕ ಸಲಹೆಗಾರರಾದ ವಲೇರಿಯನ್ ಅಲ್ಮೇಡ, ಉದ್ಯಮಿ ಜೋಸೇಫ್ ಮಥಾಯಸ್, ಸಂಧ್ಯಾ ಕ್ರಿಯೇಶನ್ಸ್‌ನ ಶೋದನ್ ಪ್ರಸಾದ್ ಅತಿಥಿಗಳಾಗಿ ಬಾಗವಹಿಸಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top