fbpx
ಸಮಾಚಾರ

ಆಸೀಸ್ ಆಟಗಾರರ ಕಳ್ಳಾಟ ಕಂಡು ಹಿಡಿದ ಕ್ಯಾಮೆರಾಮೆನ್ ಈಗ ಹೀರೋ

ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ತಲೆದಂಡವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಗೆ 1 ವರ್ಷ ನಿಷೇಧ ಹೇರಿದೆ. ಕೆಮರೊನ್ ಬ್ಯಾಂಕ್ರೊಫ್ಟ್ ಗೆ 9 ತಿಂಗಳು ಕಾಲಾವಧಿ ವರೆಗೆ ನಿಷೇಧ ವಿಧಿಸಲಾಗಿದೆ.

 

 

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೆಮರೊನ್ ಬ್ಯಾಂಕ್ರೊಫ್ಟ್ ಕ್ರಾಪ್ಟ್ ಚೆಂಡು ವಿರೂಪಗೊಳಿಸುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದ ಕ್ಯಾಮೆರಾಮೆನ್ ಜೋಟಾನಿ ಅಸ್ಕರ್ ಗೆ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಜೋಟಾನಿ ಅಸ್ಕರ್ ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

 

 

ಈ ಕುರಿತು ಮಾತನಾಡಿರುವ ಕ್ಯಾಮರಾಮನ್ ಜೋಟಾನಿ ಅಸ್ಕರ್, ತಾನು ತನ್ನ ಕೆಲಸವನ್ನು ಅಷ್ಟೇ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಪಂದ್ಯದ ವೀಕ್ಷಕ ವಿವರಣೆಗಾರ ನೀಲ್ ಮ್ಯಾಂಥಾರ್ಪ್ ಕೂಡ ಜೋಟಾನಿ ಅಸ್ಕರ್ ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

 

 

 

ಕೆಲವು ದಿನಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚೆಂಡು ವಿರೂಪ ವಿವಾದದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆಸ್ಟ್ರೇಲಿಯದ ಕ್ರಿಕೆಟ್ ತಂಡದ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿಯನ್ನು ಸನ್‌ರೈಸರ್ಸ್ ಆಡಳಿತ ಮಂಡಳಿ ಬುಧವಾರ ಟ್ವಿಟರ್‌ನ ಮೂಲಕ ದೃಢಪಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top