fbpx
ಆರೋಗ್ಯ

ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಅನೇಕ ಉತ್ತಮ ಅಂಶಗಳನ್ನೊಳಗೊಂಡಿದೆ ಈ ಸಪೋಟಾ ಹಣ್ಣು

ನಾವು ತಿನ್ನುವ ಹಣ್ಣುಗಳಲ್ಲಿ ಅತ್ಯಂತ ಕಡಿಮೆ ರಾಸಾಯನಿಕ ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ ಬೆಳೆಯುವ ಹಣ್ಣು ಚಿಕ್ಕು ಅಥವಾ ಸಪೋಟಾ. ಚೆನ್ನಾಗಿ ಮಾಗಿದ ಹಣ್ಣು ಬಹು ಸಿಹಿ, ಅಷ್ಟೇ ರುಚಿಕರವೂ ಆಗಿದೆ. ಹಾಗೆಯೇ ತಿನ್ನಲು ಸ್ವಾದಿಷ್ಟ. ಜ್ಯೂಸ್, ಮಿಲ್ಕ್ ಷೇಕ್ ತಯಾರಿಸಿ ಕುಡಿದರೆ ದೇಹಕ್ಕೆ ಇನ್ನೂ ಶಕ್ತಿದಾಯಕ. ಆಹಾರ ತಜ್ಞರು ಇದನ್ನು ಪೌಷ್ಟಿಕಾಂಶಗಳ ಕಣಜವೆಂದೇ ಹೇಳುತ್ತಾರೆ. ಸಪೋಟಾ ಹಣ್ಣುಗಳನ್ನು ತಿನ್ನಲು ಬಿರುಕು, ಸುಕ್ಕು, ಗಾಯಗಳಿಲ್ಲದ ತಾಜಾ ಮಾಗಿದ ಗುಣಲಕ್ಷಣಗಳಿರುವುದನ್ನೇ ಆರಿಸಿಕೊಳ್ಳಬೇಕು.

 

 

ಹೇರಳವಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗು ಅನೇಕ ಉತ್ತಮ ಅಂಶಗಳನ್ನೊಳಗೊಂಡ ಸಪೋಟಾ ಹಣ್ಣಿನ ಸೇವನೆ ರಕ್ತಹೀನತೆಯವರಿಗೆ ಬಹಳ ಉತ್ತಮ. ಬಹಳ ತಂಪು ಗುಣದ ಇದರ ಸೇವನೆಯು ಆ್ಯಸಿಡಿಟಿಯವರಿಗೆ ಹಾಗೂ ಉಷ್ಣದೇಹಿಗಳಿಗೆ ಬಹಳ ಹಿತಕರ.

 

 

* ರಕ್ತದ ಒತ್ತಡ, ರಕ್ತಹೀನತೆ, ರಕ್ತಸ್ರಾವ, ನೋವು, ಸ್ನಾಯು ಸೆಳೆತ ಮುಂತಾದ ಬಾಧೆಗಳಿಗೆ ಮದ್ದೆನಿಸಿದ ಸಪೋಟಾ ಗ್ಯಾಸ್ಟ್ರಿಕ್ ಕಿಣ್ವಗಳ ಸ್ರವಿಕೆಯನ್ನು ನಿಲ್ಲಿಸುತ್ತದೆ. ‘ಎ’ ಜೀವಸತ್ವ ಸಾಕಷ್ಟಿರುವ ಸಪೋಟಾ ಹಣ್ಣುಗಳನ್ನು ನಿತ್ಯ ಆಹಾರದಲ್ಲಿ ಬಳಸುತ್ತಿದ್ದರೆ ದೃಷ್ಟಿದೋಷ ಅಕಾಲಿಕವಾಗಿ ಬಾಧಿಸುವುದು ಪರಿಹಾರವಾಗುತ್ತದೆ. ಚರ್ಮದ ಕಲೆ, ಸುಕ್ಕು, ಬಿರುಕು ಮೊದಲಾದ ದೋಷಗಳನ್ನು ನಿವಾರಿಸುತ್ತದೆ. ಸೂರ್ಯನ ಯುವಿ ಕಿರಣಗಳ ದುಷ್ಪರಿಣಾಮವನ್ನು ತಡೆಯುತ್ತದೆ. ಚರ್ಮ ಕಾಂತಿಯುತವಾಗುತ್ತದೆ.

 

 

* ‘ಎ’, ‘ಬಿ’ ಸಮೂಹ, ‘ಇ’ ಜೀವಸತ್ವಗಳು ಅದರಲ್ಲಿವೆ. ಹಾಗೆಯೇ ನೂರು ಗ್ರಾಂ ಹಣ್ಣು ತಿಂದರೆ ದೇಹಕ್ಕೆ 25 ಗ್ರಾಂ ‘ಸಿ’ ಜೀವಸತ್ವ ಲಭಿಸುತ್ತದೆ. ಸುಣ್ಣ, ಕಬ್ಬಿಣ, ತಾಮ್ರ, ಸತು, ರಂಜಕ, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ನಿಯಾಸಿನ್, ಪ್ಯಾಂಥೋಟಿಕ್ ಮತ್ತು ನಿಯಾಸಿನ್ ಆಮ್ಲಗಳು, ರೈಬೋಫ್ಲೇವಿನ್, ಥಯಾಮಿನ್, ಸೋಡಿಯಂ, ಪೊಟಾಸಿಯಂ, ಮೆಗ್ನೇಸಿಯಂ, ಫಾಸ್ಫರಸ್ ಹೀಗೆ ಅಸಂಖ್ಯ ಸತ್ವಾಂಶಗಳು ಸಪೋಟಾದಲ್ಲಿವೆ.

 

 

* ಶೇ. 5.6ರಷ್ಟು ನಾರಿನ ಅಂಶವಿರುವ ಸಪೋಟಾ ಉತ್ತಮ ವಿರೇಚಕವೂ ಹೌದು. ರಾತ್ರಿ ಊಟವಾದ ಮೇಲೆ ಸಿಪ್ಪೆಸಹಿತ ಒಂದೆರಡು ಹಣ್ಣುಗಳನ್ನು ತಿನ್ನುವ ಅಭ್ಯಾಸ ಜೀರ್ಣಕ್ರಿಯೆಗೆ ನೆರವಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೂಲ ವ್ಯಾಧಿಯಿಂದ ಬಳಲುವವರಿಗೆ ಸಲೀಸಾಗಿ ಮಲ ವಿಸರ್ಜನೆಯಾಗಲು ಅದು ಉತ್ತಮ ಉಪಾಯ. ಹಣ್ಣಿನ ತಿರುಳನ್ನು ಅರ್ಧ ಚಮಚ ಉಪ್ಪಿನೊಂದಿಗೆ ಹಿಸುಕಿ ತಿಂದರೆ ಮಲಬದ್ಧತೆ ಕೆಲವು ನಿಮಿಷಗಳಲ್ಲಿ ದೂರವಾಗುತ್ತದೆ.

 

 

 

* ಹೃದ್ರೋಗ ತಡೆಯಲು ಶಕ್ತವಾದ ‘ಇ’ ಜೀವಸತ್ವ ಹಾಗೂ ಅಲ್ಫಾಟೋ ಕೋಫೆರಾಲ್ಡ್ ರಾಸಾಯನಿಕವಿರುವ ಸಪೋಟಾ ಹೃದ್ರೋಗಿಗಳಿಗೂ ಸೇವನೆಗೆ ಅರ್ಹವಾಗಿದೆ. ಸೋಯಾ ಹಾಲು ಮತ್ತು ಗೋಡಂಬಿಯೊಂದಿಗೆ ಅದರಿಂದ ತಯಾರಿಸಿದ ಪಾನೀಯವನ್ನು ಸೇವಿಸುವುದು ಮೆದುಳಿನ ಜೀವಕೋಶಗಳಿಗೆ ಆರೋಗ್ಯಕರವಾದ ಪ್ರೊಟೀನ್ ಮತ್ತು ಗ್ಲೂಕೋಸನ್ನು ಪೂರೈಸುತ್ತದೆ.

 

 

 

* ಸಪೋಟಾ ಬೀಜಗಳ ತಿರುಳು ಮತ್ತು ಹರಳೆಣ್ಣೆಯನ್ನು ಸೇರಿಸಿ ಅರೆದು ಕೂದಲಿಗೆ ಹಚ್ಚುವ ಕ್ರಮದಿಂದ ನಯವಾದ, ದೀರ್ಘ ಕೇಶರಾಶಿಯನ್ನು ಗಳಿಸಬಹುದು. ಬೀಜಗಳಿಂದ ತಯಾರಿಸುವ ತೈಲವೂ ಕೂದಲು ಉದುರುವುದು, ಒಣ ಕೂದಲು, ಡ್ಯಾಂಡ್ರಫ್‌ಗಳನ್ನು ತೊಡೆದು ಕಾಂತಿಯುತಗೊಳಿಸುತ್ತದೆ. ಬೀಜದ ತಿರುಳಿನ ಪೇಸ್ಟ್ ಕೀಟಗಳ ಕಡಿತವನ್ನು ಗುಣಪಡಿಸುತ್ತದೆ. ಇದು ಕಿಡ್ನಿಯ ಕಲ್ಲುಗಳನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top