fbpx
ಆರೋಗ್ಯ

ಈ ಆಯುರ್ವೇದದ ಮನೆಮದ್ದನ್ನು ಬಳಸಿಕೊಂಡು ದಮ್ಮು / ಉಬ್ಬಸ / ಗೂರಲು / ಅಸ್ತಮಾ ರೋಗಕ್ಕೆ ಪರಿಹಾರ ಕಂಡುಕೊಳ್ಳಿ

ದಮ್ಮು / ಉಬ್ಬಸ / ಗೂರಲು / ಅಸ್ತಮಾ ರೋಗಕ್ಕೆ ಆಯುರ್ವೇದದ ಮನೆಮದ್ದುಗಳು..

 

 

ಉಸಿರಾಟದ ವಿವಿಧ ಅಂಗಗಳು ಸಂಕುಚಿತಗೊಂಡು ಕಫ ಸಂಗ್ರಹವಾಗಿ ಉಸಿರಾಟದ ತೊಂದರೆಯೇ ಉಬ್ಬಸ / ಗೂರಲು / ಅಸ್ತಮಾ.

 

ಇದಕ್ಕೆ ಪ್ರಮುಖ ಕಾರಣಗಳು ಅಲರ್ಜಿ , ಧೂಳು , ಹೊಗೆ , ಮಲಬದ್ಧತೆ , ಚಿಂತೆ ಅನುವಂಶೀಯ ಕಾರಣಗಳು , ಋತುಮಾನ ಬದಲಾವಣೆ ,ಮಾಲಿನ್ಯ ,ಆಧುನಿಕ ಜೀವನ ಶೈಲಿ ಮುಂತಾದವು ಈ ಕಫದ ಸಮಸ್ಯೆಗೆ ಕಾರಣಗಳು .

 

 

ಶೀತಕಾಲದಲ್ಲಿ ಈ ಸಮಸ್ಯೆ ಬಹಳ ಹೆಚ್ಚಾಗಿ ಕಾಡುತ್ತದೆ , ಕೆಲವು ಸಲ ಕಫ ಹಳದಿ ಬಣಕ್ಕೆ ತಿರುಗುತ್ತದೆ .

 

ಅಸ್ತಮಾ ರೋಗಕ್ಕೆ ಆಯುರ್ವೇದದ ಮನೆಮದ್ದುಗಳು :

ಒಂದು ವೀಳ್ಯದ ಎಲೆಯಲ್ಲಿ , ಐದು ತುಳಸಿ ಎಲೆ , ಒಂದು ಲವಂಗ , ಸ್ವಲ್ಪ ಪಚ್ಚ ಕರ್ಪೂರ ಇತ್ತು ಮಡಚಿ ದಿನಕ್ಕೆ ಮೂರು ಸಾರಿ ಒಂದರಿಂದ ಎರಡು ವಾರ ತಿನ್ನಬೇಕು .

 

 

ಆಡುಸೋಗೆ ಎಳೆಯ ರಸ ಎರಡು ಚಮಚ ಮತ್ತು ಎರಡು ಚಮಚ ಜೇನು ತುಪ್ಪ , ಜೊತೆಗೆ ಸ್ವಲ್ಪ ಶುಂಠಿ ಪುಡಿ ಸೇರಿಸಿ ದಿನಕ್ಕೆ ಎರಡು ಬಾರಿ ತಿನ್ನಬೇಕು .

 

 

ನಾಲ್ಕು ಚಮಚ ಆಡುಸೋಗೆ ರಸಕ್ಕೆ ನಲ್ಲಿಕಾಯಿ , ತಾರೆ ಕಾಯಿ ಮತ್ತು ಅಳಲೆಕಾಯಿ ಸಮ ಪ್ರಮಾಣದಲ್ಲಿ ಸೇರಿಸಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನನಿತ್ಯ ಎರಡು ಬಾರಿ ಮೂರರಿಂದ ನಾಲ್ಕು ವಾರ ಸೇವಿಸಬೇಕು .

 

 

ಶುಂಠಿ , ಮೆಣಸು , ಹಿಪ್ಪಲಿ ಸಮಪ್ರಮಾಣದಲ್ಲಿ ಚೂರ್ಣ ಮಾಡಿಕೊಂಡು ಅಷ್ಟೇ ಪ್ರಮಾಣದ ಜೇನು ತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿಯಂತೆ ನಾಲ್ಕು ವಾರ ಸೇವಿಸಬೇಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top