fbpx
ಸಿನಿಮಾ

ದರ್ಶನ್ ಎದುರಲ್ಲೇ ಸಿಕ್ಕರೂ ಮಾತನಾಡಿಸದೆ ಹಾಗೆ ಹೊರಟ ಸ್ಯಾಂಡಲ್ವುಡ್ ನಟಿ

ಕನ್ನಡ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎದುರಲ್ಲೇ ಸಿಕ್ಕಿದ್ದರೂ ಚಿತ್ರನಟಿಯೊಬ್ಬರು ಮಾತನಾಡಿಸದೆ ಹೊರಟುಹೋಗಿದ್ದಾರೆ. ಆಕೆ ಬೇರಾರು ಅಲ್ಲ ಕೆಂಡಸಂಪಿಗೆ ಚಿತ್ರದ ನಟಿ ಮಾನ್ವಿತಾ ಹರೀಶ್. ಮಾನ್ವಿತಾ ಹರೀಶ್ ಒಮ್ಮೆ ದರ್ಶನ್‍ರನ್ನು ಖಾಸಗಿಯಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆದರೂ ಕೂಡ ಮಾನ್ವಿತಾ ದರ್ಶನ್‍ರನ್ನ ಗುರುತು ಹಿಡಿಯುವುದರಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಹೋದ ವರ್ಷ ದಸರಾ ಹಬ್ಬದ ಯುವ ದಸರಾ ಸಮಾರಂಭಕ್ಕಾಗಿ ತಾರೆಗಳೆಲ್ಲಾ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ನಟ ದರ್ಶನ್ ಕೂಡ ಅದೇ ಹೊಟೇಲ್‍ನಲ್ಲಿ ಇರುವುದು ನಟಿ ಮಾನ್ವಿತಾಗೆ ತಿಳಿದಿರಲಿಲ್ಲ. ಸಮಾರಂಭಕ್ಕೆ ತೆರಳುವಾಗ ಪ್ರಿನ್ಸ್ ಹೊಟೇಲ್ ಹೊರಗಡೆಯ ಮೆಟ್ಟಿಲಿನಲ್ಲಿ ದರ್ಶನ್ ತಮ್ಮ ಒಂದಿಷ್ಟು ಗೆಳೆಯರ ಜೊತೆ ಕುಳಿತಿದ್ದರು. ಆಗ ಮಾನ್ವಿತಾ ಯಾರೋ ಕುಳಿತಿರಬಹುದು ಎಂದು ಅಲ್ಲಿ ನೋಡದೆ ಕಾರ್ ಹತ್ತಿದ್ದಾರೆ.

 

 

ತದನಂತರ ಅಲ್ಲಿದ್ದ ಒಬ್ಬರು ನಟಿ ಮಾನ್ವಿತಾಗೆ ದರ್ಶನ್ ಅಲ್ಲಿರುವ ವಿಚಾರ ತಿಳಿಸಿದ್ದಾರೆ. ಆ ಕೂಡಲೇ ಮಾನ್ವಿತಾ ಒಂದು ಕ್ಷಣ ತಬ್ಬಿಬ್ಬಾಗಿ ಸುತ್ತಲೂ ನೋಡಿದ್ದು, ನಂತರ ಮಾನ್ವಿತಾ, ದರ್ಶನ್‍ರನ್ನು ಹುಡುಕೋದರಲ್ಲಿ ವಿಫಲರಾದಾಗ ಇನ್ನೊಬ್ಬರು ಬಂದು ದರ್ಶನ್ ಮೆಟ್ಟಿಲ ಮೇಲೆ ಕುಳಿತಿದ್ದಾರೆ ಎಂದು ತಿಳಿಸಿದ್ದಾರೆ.

 

 

ಚಿತ್ರರಂಗದ ಒಬ್ಬ ಖ್ಯಾತ ನಟ ನೆಲದ ಮೇಲೆ ಸರಳತೆಯಿಂದ ಕುಳಿತಿರುವುದನ್ನು ನೋಡಿದ ಮಾನ್ವಿತಾಗೆ ಒಂದು ಕ್ಷಣ ಆಶ್ಚರ್ಯವಾಗಿತ್ತು. ದರ್ಶನ್ ಬಳಿ ಬಂದು ಒಬ್ಬ ಬಿಗ್ ಸ್ಟಾರ್ ಮೆಟ್ಟಿಲ ಮೇಲೆ ಹೀಗೆ ಕುಳಿತುಕೊಂಡರೆ, ಯಾರ್ ಗುರುತು ಹಿಡೀತಾರೆ. ಯಾಕೆ ಹೀಗೆ ಕುಳಿತ್ತಿದೀರಿ ಎಂದು ಕೇಳಿದ್ದಾರೆ. ಅದಕ್ಕೆ ದರ್ಶನ್, ನಾನು ಹೀಗೇ ಇರೋದು ಎಂದು ಹೇಳಿದ್ದಾರೆ. ನಂತರ ಮಾನ್ವಿತಾ ಮಾತನಾಡಿಸದೇ ಹೋಗಿದ್ದಕ್ಕೆ ಕ್ಷಮೆ ಕೇಳಿ ಅಲ್ಲಿಂದ ಹೊರಟರು. ಈ ವಿಚಾರವನ್ನ ಮಾನ್ವಿತಾ ಕೆಲವು ದಿನಗಳ ಹಿಂದೆ ಫೇಸ್‍ಬುಕ್ ಲೈವ್‍ನಲ್ಲಿ ಹಂಚಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top