fbpx
ಸಿನಿಮಾ

ಇಂಡಿಯಾದಲ್ಲಿ ಬ್ಯಾನ್ ಆದ್ರು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಫೇಮಸ್ ಆಗಿ ಅವಾರ್ಡ್ ಪಡ್ಕೊಂಡ ಈ ಹಸಿ ಬಿಸಿ ಚಿತ್ರಗಳು ಯಾವ್ಯಾವು ಗೊತ್ತಾ ?

ಹಸಿ ಬಿಸಿ ಸೀನ್ ಗಳಿದ್ದವು ಅಂತ ಇಂಡಿಯಾದಲ್ಲಿ ಬ್ಯಾನ್ ಆಗಿದ್ದ ಈ ಫಿಲಂಗಳು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಫೇಮಸ್ ಆದ್ವು ಯಾಕೆ ಗೊತ್ತಾ

 

ಸಿನಿಮಾ ಅಂದ್ರೆ ಒಂದು ತಂಡದ ಸತತ ಪ್ರಯತ್ನ , ಒಂದು ಕಥಾ ವಸ್ತುವನ್ನು ತೆಗೆದುಕೊಂಡು ಅದರ ಸುತ್ತಲೇ ತನ್ನ ಕಲ್ಪನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ ಚಿತ್ರತಂಡ ,
ಕೆಲವೊಮ್ಮೆ ತನ್ನೆಲ್ಲ ಕಲ್ಪನೆಯನ್ನು ಸೇರಿಸಿ ಕಷ್ಟ ಪಟ್ಟು ಸಿನಿಮಾ ಮಾಡುತ್ತಾರೆ ಆದ್ರೆ ಸೆನ್ಸರ್ ಬೋರ್ಡ್ ಆ ಚಿತ್ರಕ್ಕೆ ತಡೆಯೊಡ್ಡುತ್ತದೆ ,ಇನ್ನು ಕೆಲವು ಬಾರಿ ಕೆಲ ದೃಶಗಳಿಗೆ ಕತ್ತರಿ ಪ್ರಯೋಗ ಮಾಡಿ ಸರ್ಟಿಫಿಕೇಟ್ ಗಳನ್ನೂ ನೀಡುತ್ತವೆ , ಕೆಲವು ಜಾತಿ ,ಮತ ,ಧರ್ಮ,ಮನಸ್ಥಿತಿ,ದೇಶ ಭಕ್ತಿ ಇವುಗಳಿಗೆ ಧಕ್ಕೆ ಯುಂಟಾಗುತ್ತದೆ ಎಂದು ಅನೇಕ ಸಿನಿಮಾಗಳನ್ನು ಡಬ್ಬಕ್ಕೆ ಹಾಕಿ ಬಿಡುತ್ತಾರೆ .

 

 

ಹೀಗಿರುವಾಗ ಒಮ್ಮೊಮ್ಮೆ ನಮ್ಮ ನೈಜ ಬದುಕು ,ಗ್ರಾಮೀಣ ಮನಸ್ಥಿತಿ ಇವುಗಳನ್ನು ಚಿತ್ರದಲ್ಲಿ ತೋರಿಸಲು ಬಿಡುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ ಚಿತ್ರರಂಗದವರು ಹೀಗಿರುವಾಗ ಹೇಗಾದರೂ ಮಾಡಿ ಚಿತ್ರ ಬಿಡುಗಡೆ ಮಾಡಲೇಬೇಕೆಂದು ಕೋರ್ಟ್ ಮೆಟ್ಟಿಲು ಸಹ ಹತ್ತುತ್ತಾರೆ , ಕೇಸ್ ಇತ್ಯರ್ಥ ಆಗುವ ಹೊತ್ತಿಗೆ ತನ್ನ ಛಾಪನ್ನು ಕೆಲ ಚಿತ್ರಗಳು ಕಳೆದುಕೊಂಡರೆ ಇನ್ನು ಕೆಲವು ಬಿಟ್ಟಿ ಪಬ್ಲಿಸಿಟಿ ಯನ್ನು ಪಡೆದುಕೊಂಡಿರುತ್ತವೆ .

 

ಭಾರತದಲ್ಲಿ ಬ್ಯಾನ್ ಆಗಿ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಮಿಂಚಿದ ಕೆಲವು ಚಿತ್ರಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಬನ್ನಿ

 

ಲಿಪ್ಸ್ ಸ್ಟಿಕ್ ಅಂಡರ್ ಮೈ ಬುರ್ಖಾ

 

 

ಹೆಂಗಸರ ಮನಸಿನಲ್ಲಿ ಲೈಂಗಿಕತೆಯ ಬಗ್ಗೆ ಎಂತಹ ಭಾವನೆ ಇರುತ್ತದೆ , ಗಂಡಸಿನ ಬಗ್ಗೆ ಯಾವ ಭಾವನೆಗಳನ್ನು ಇಟ್ಟುಕೊಂಡಿರುತ್ತಾಳೆ , ತನ್ನ ಕೋರಿಕೆಗಳು ಯಾವ ರೀತಿ ಇಟ್ಟುಕೊಂಡಿರುತ್ತಾಳೆ , ಹದಿನಾರು ವಯಸ್ಸಿನ ಹುಡುಗಿಯಿಂದ ಹಿಡಿದು 60 ವರ್ಷದ ಮುದುಕಿಯರ ವರೆಗೂ ಹೇಗೆ ತಮ್ಮ ಆಕರ್ಷಣೆಯನ್ನು ವ್ಯಕ್ತಪಡಿಸುತ್ತಾರೆ ಎಂಬುದೇ ಈ ಚಿತ್ರದ ಕಥಾ ಹಂದರ , ಸೆನ್ಸರ್ ಈ ಚಿತ್ರವನ್ನು ನಿರಾಕರಿಸಿತ್ತು .

ಆದರೆ ಹೆಣ್ಣಿನ ಸಹಜ ಭಾವನೆಗಳನ್ನು ತೋರಿಸಿದ್ದಕ್ಕಾಗಿ ಟೋಕಿಯೋ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗು ಸ್ಪಿರಿಟ್ ಆಫ್ ಏಷ್ಯಾ ದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು .

 

ಅನ್ ಫ್ರೀಡಂ

 

 

ಶೃಂಗಾರ ಕಾವ್ಯವಾಗಿದ್ದ ಈ ಚಿತ್ರ ಹೆಣ್ಣು ಗಂಡಿನ ನಡುವೆ ನಡೆದ ಕಥೆಯಲ್ಲ ಬದಲಾಗಿ ಸಲ್ಲಿಂಗಿ ಹೆಣ್ಣುಗಳ ನಡುವೆ ನಡೆಯುವ ರೋಮ್ಯಾಂಟಿಕ್ ಪ್ರೇಮ ಕಾವ್ಯ ,ಈ ಚಿತ್ರ ಬ್ಯಾನ್ ಮಾಡಲಾಗಿತ್ತು .

ಆದರೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು .

 

ಗಾಂಡು

 

 

ನಗ್ನ ಚಿತ್ರಗಳು, ಬರಿ ಕೆಟ್ಟ ಕೊಳಕು ಪದಗಳ ಬಳಕೆಯಿದ್ದ ಈ ಚಿತ್ರವನ್ನು ಬ್ಲಾಕ್ ಅಂಡ್ ವೈಟ್ ನಲ್ಲಿ ಚಿತ್ರೀಕರಿಸಲಾಗಿತ್ತು ,ಬಂಗಾಳಿ ಭಾಷೆಯ ರ್ಯಾಪ್ ಮ್ಯೂಸಿಕ್ ಗ್ರೂಪ್ ಕಥಾ ಹಂದರವನ್ನು ಈ ಚಿತ್ರ ಹೊಂದಿತ್ತು

ಆದರೆ ಬರ್ಲಿನ್ ಸೇರಿದಂತೆ ಅನೇಕ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು .

 

ದಿ ಪೇಂಟೆಡ್ ಹೌಸ್

 

 

ವಯಸ್ಸಾದ ಮುದುಕನ ಹೆಣ್ಣಿನ ಆಕರ್ಷಣೆ ಕಥಾ ಹಂದರವನ್ನು ಈ ಚಿತ್ರ ಹೊಂದಿತ್ತು , ಅಷ್ಟೇ ಅಲ್ಲದೆ ನಗ್ನ ಚಿತ್ರಗಳನ್ನು ಹೊಂದಿತ್ತು .

ಆದರೆ ಬೆಸ್ಟ್ ವಿಮರ್ಶಕರ ಚಿತ್ರವಾಗಿ ಇಂಟರ್ನ್ಯಾಷನಲ್ ಅವಾರ್ಡ್ ಗಳನ್ನೂ ಈ ಚಿತ್ರ ಪಡೆದುಕೊಂಡಿತ್ತು

 

ಚತ್ರಾಕ್

 

ಬಂಗಾಳಿ ಭಾಷೆಯ ಈ ಸಿನಿಮಾ ಕನ್ಸ್ಟ್ರಕ್ಷನ್ ಮಾಫಿಯಾ ಕುರಿತಾದ ಈ ಚಿತ್ರದಲ್ಲಿ ಹಾಲಿ ವುಡ್ ರೇಂಜ್ ನಲ್ಲಿ ನಗ್ನ ದೃಶ್ಯಗಳನ್ನು ತೋರಿಸಲಾಗಿತ್ತು. ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ್ದಾಕ್ಕಾಗಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿತ್ತು .

ಆದರೆ ಒಳ್ಳೆಯ ಕ್ವಾಲಿಟಿ ಚಿತ್ರವಾದ್ದರಿಂದ ಅನೇಕ ವೆಬ್ಸೈಟ್ ಗಳಲ್ಲಿ ಈ ಚಿತ್ರವನ್ನು ಬಿಡುಗಡೆಮಾಡಲಾಗಿತ್ತು , ಬೆಸ್ಟ್ ನ್ಯೂ ಫಿಲಂ ಕೆಟಗರಿ ಯಲ್ಲಿ ಅವಾರ್ಡ್ ಗಳನ್ನೂ ಈ ಚಿತ್ರ ಪಡೆದುಕೊಂಡಿತ್ತು

 

ದಿ ಪಿಂಕ್ ಮಿರರ್

 

ಪುರುಷರಾಗಿ ಹುಟ್ಟಿ ಲಿಂಗ ಬದಲಾವಣೆ ಮಾಡಿಕೊಂಡು ಹುಡುಗಿಯಾಗಿದ್ದ ಇಬ್ಬರು ಒಬ್ಬ ಯುವಕನ ಮೇಲೆ ಇಷ್ಟ ಪಡುತ್ತಾರೆ ಅನೇಕ ನಾನ್ ಸೆನ್ಸರ್ ದೃಶ್ಯಗಳಿದ್ದು ಈ ಚಿತ್ರವನ್ನು ಬ್ಯಾನ್ ಮಾಡಲಾಗಿತ್ತು .

ಆದರೆ ಬ್ಯಾಂಕಾಕ್ ಫಿಲಂ ಫೆಸ್ಟಿವಲ್ ನಲ್ಲಿ ಈ ಚಿತ್ರ ಅವಾರ್ಡ್ ಗೆದಿತ್ತು

ಹವಾ ಆನೆ ದೇ

 

ಇಂಡಿಯಾ ಪಾಕಿಸ್ತಾನ ಯುದ್ಧದ ಎಳೆ ಜೊತೆಗೆ 22 ರ ಹರೆಯನ ಮನಸ್ಸು ಹೇಗಿರುತ್ತದೆ ಎಂಬ ಕಥಾ ಹಂದರ ಇದ್ದ ಈ ಚಿತ್ರಕ್ಕೆ 25 ಸೀನ್ ಕಟ್ ಮಾಡಲು ಸೆನ್ಸರ್ ಹೇಳಿತ್ತು ಆದರೆ ಈ ದೃಶ್ಯ ತೆಗೆದರೆ ಚಿತ್ರವೇ ಇರಲ್ಲ ಎಂದ್ರು ಚಿತ್ರ ತಂಡ ಕೊನೆಗೆ ಬಿಡುಗಡೆ ಭಾಗ್ಯ ಕಂಡಿಲ್ಲ .

ಆದರೆ ನೈಜ ದೃಶ್ಯಗಳಿಂದ ಎಲ್ಲರ ಮನ ಸೂರೆಗೊಂಡಿತ್ತು .

ಪಾಂಚ್

 

ರಾಕ್ ಬ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದ 5 ಜನರ ಕುರಿತಾದ ಈ ಚಿತ್ರದಲ್ಲಿ ಲೈಂಗಿಕತೆ ,ಡ್ರಗ್ಸ್ , ಮಾಫಿಯಾ , ನಗ್ನತೆ ಇವೆಲ್ಲವೂ ಇದ್ದವು ಆದರೆ ದೃಶ್ಯಗಳನ್ನು ಕತ್ತರಿಸಲು ನಿರ್ದೇಶಕ ಅನುರಾಗ್ ಕಶ್ಯಪ್ ಒಪ್ಪಲಿಲ್ಲ .ಆದರೆ ವಿದೇಶದಲ್ಲಿ ಬಿಡುಗಡೆಯಾಗಿ ಅವಾರ್ಡ್ ಗೆದ್ದುಕೊಂಡಿದೆ .

 

ಮೊಹಲ್ಲಾ ಏಸಿ

 

ವಾರಣಾಸಿಯಲ್ಲಿ ಈ ಚಿತ್ರವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿತ್ತು ಆದರೆ ಇದರಲ್ಲಿ ಕೆಲವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರಿಸುವಂತ ಸನ್ನಿವೇಶಗಳು ಇದ್ದವು ಆದ್ದರಿಂದ ಚಿತ್ರಕ್ಕೆ ಕತ್ತರಿ ಹಾಕಲು ಹೇಳಿತ್ತು ಚಿತ್ರ ತಂಡ .

ಬಂಡಿಕ್ಯು ಕ್ವೀನ್

 

ಪೂಲನ್ ದೇವಿ ಜೀವನ ಆಧಾರಿತ ಬಂಡಿಕ್ಯು ಕ್ವೀನ್ ಚಿತ್ರ ದಲ್ಲಿ ಕೆಟ್ಟ ಕೆಟ್ಟ ಸಂಭಾಷಣೆಗಳಿದ್ದವು ಅದರಲ್ಲೂ ಕೋರ್ಟ್ ಸೀನ್ ಅಂತೂ ನೋಡೋಕೆ ಆಗೋದೇ ಇಲ್ಲ ಅಂದ್ರು ಸೆನ್ಸರ್ ಮಂಡಳಿಯವರು ಆದ್ದರಿಂದ ಬಿಡುಗಡೆ ಹೊಂದಲಿಲ್ಲ ಈ ಚಿತ್ರ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top