fbpx
ಆರೋಗ್ಯ

ಆಣಿ ಕಾಲಿನ(CORN) ಸಮಸ್ಯೆ ಬಂದ್ರೆ ನಡೆಯುವುದಕ್ಕೆ ಕಷ್ಟವಾಗುತ್ತದೆ ,ಅದಕ್ಕೆ ಈ ಆಯುರ್ವೇದದ ಮನೆಮದ್ದನ್ನು ಬಳಸಿಕೊಂಡು ಪಟ್ ಅಂತ ಪರಿಹಾರ ಮಾಡ್ಕೊಳ್ಳಿ

ಆಣಿ ಕಾಲಿನ(CORN) ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು ಹೀಗಿವೆ ..

 

ಆಣಿ ಕಾಲಿನ ಸಮಸ್ಯೆಗೆ ಕಾರಣಗಳು ಹಲವಾರು ಮುಖ್ಯವಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು , ಗಟ್ಟಿಯಾದ ಚಪ್ಪಲಿ ಹಾಕುವುದು , ತಂಬಾಕು ಸೇವನೆ ಮಾಡುವುದು , ಒರಟು ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವುದು , ಮುಳ್ಳನ್ನು ಪೂರ್ತಿಯಾಗಿ ತೆಗೆಯದೆ ಇರುವುದು , ಕಲ್ಲು , ಗಾಜು ಪಾದದ ಒಳಗೆ ಸೇರುವುದು ,ಚರ್ಮಕ್ಕೆ ಸರಿಯಾಗಿ ರಕ್ತ ಸಂಚಾರವಾಗದೆ ಇರುವುದು ಇದಕ್ಕೆ ಮುಖ್ಯ ಕಾರಣಗಳು .

 

 

ಆಣಿ ಕಾಲಿನ(CORN) ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು :

 

ಉತ್ತರಾಣಿ ಎಲೆ ಸ್ವಲ್ಪ ಕರಿಎಳ್ಳು ಸೇರಿಸಿ ಅರೆದು ಆಣಿಯ ಮೇಲೆ ಕಟ್ಟಬೇಕು ,ದಿನಕ್ಕೆ ಒಂದು ಸಾರಿಯಂತೆ ಆಣಿ ಕರಗುವವರೆಗೂ ಚಿಕಿತ್ಸೆ ಮುಂದುವರಿಸಿ .

 

 

ಆಣಿಯ ಮೊಳಕೆಯನ್ನು ಕತ್ತರಿಸಿ ಅತಿಬಲ ಸೊಪ್ಪನ್ನು ಹಾಲಿನಲ್ಲಿ ಅರೆದು ಕಟ್ಟಬೇಕು.

 

 

ಆಣಿಯ ಮೊಳಕೆಯನ್ನು ಕತ್ತರಿಸಿ ದತ್ತೂರಿ ಗಿಡದ ಹಾಲು , ಎಕ್ಕದ ಹಾಲು ಮತ್ತು ಹಾಲನ್ನು ಮಿಶ್ರಣ ಮಾಡಿ ಹಚ್ಚಬೇಕು .

 

 

 

ಹಳೆಯ ಸುಣ್ಣವನ್ನು ಎಕ್ಕದ ಹಾಲಿನಲ್ಲಿ ಅದ್ದಿ ಅರಿಶಿನವನ್ನು ಸೇರಿಸಿ ಆಣಿಯ ಜಾಗಕ್ಕೆ ಮೂರು ದಿನ ಕಟ್ಟಬೇಕು , ಸ್ವಲ್ಪ ಬೇವಿನಎಣ್ಣೆಯನ್ನು ಆಗಾಗ ಹಚ್ಚಬೇಕು .

 

ಅರಿಶಿನದ ಬೇರನ್ನು ನಿಂಬೆ ರಸದಲ್ಲಿ ಅದ್ದಿ ದಿನಕ್ಕೆ ನಾಲ್ಕರಿಂದ ಐದು ಸಾರಿ ಹಚ್ಚಬೇಕು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top