fbpx
ಸಮಾಚಾರ

ಹನಿಟ್ರ್ಯಾಪ್ ಗೆ ಒಳಗಾಗಿ ಮಹಿಳೆಗೆ 4.85ಲಕ್ಷ ಕೊಟ್ಟರು, ಮತ್ತೆ 5 ಲಕ್ಷಕ್ಕೆ ಬ್ಲಾಕ್ ಮೆಲ್

ಚಿಕ್ಕಮಗಳೂರಿನ ಯುವಕನೊಬ್ಬ ಬೆಂಗಳೂರು ಮೂಲದ ಯುವತಿಯಿಂದ ಹನಿಟ್ರ್ಯಾಪ್‍ಗೆ ಗೆ ಒಳಗಾಗಿ ಸುಮಾರು 4.85 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ. ಆದರೂ ಈತನನ್ನು ಬಿಡದ ಯುವತಿ ಇವನಿಗೆ ಮತ್ತೆ ಬ್ಲಾಕ್ ಮೆಲ್ ಮಾಡಿರುವ ಘಟನೆ ನಡೆದಿದೆ.

 

 

ಈ ಯುವಕನಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ, ಇಬ್ಬರು ಸ್ನೇಹಿತರಾದರು ಇವರ ಸ್ನೇಹ ಪ್ರೀತಿಗೆ ತಿರುಗಿತು ಇಬ್ಬರು ಅನೇಕ ಬಾರಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾರೆ ಎನ್ನಲಾಗಿದೆ. ಯುವಕ ಗೌರಿ ಶಂಕರ್ ನಿಂದ ಸುಮಾರು 4.85 ಲಕ್ಷ ಹಣ ಪಡೆದಿರುವ ಮೈತ್ರಿ ಎಂಬ ಯುವತಿ ಮತ್ತೆ ಸಿಂಗಲ್ ಸೆಟ್ಲ್ ಮೆಂಟ್ ಅಂತ 5 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಈಗಾಗಲೇ ಈಕೆಯ ಕಾಟದಿಂದ ಬೇಸತ್ತು ಹಣ ಕಳೆದುಕೊಂಡಿದ್ದ ಯುವಕ ವಿಧಿಯಿಲ್ಲದೇ ಪೋಲೀಸರ ಮೊರೆ ಹೋಗಿದ್ದಾನೆ.

 

 

ಪೊಲೀಸ್ ವಿಚಾರಣೆಯಲ್ಲಿ, ಮೈತ್ರಿ ಇವನೊಬ್ಬನಿಗೆ ಅಲ್ಲ ಇನ್ನೊಬ್ಬರಿಗೆ ಹೀಗೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಪೀಣ್ಯ ಬಳಿ ಒಬ್ಬರಿಗೆ 9 ಲಕ್ಷ ಬೇಡಿಕೆ ಇಟ್ಟು ಬ್ಲಾಕ್ ಮೆಲ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನೊಬ್ಬ ಮಂಜುನಾಥ ಎಂಬ ವ್ಯಕ್ತಿ ಹಣ ನೀಡದ ಕಾರಣ ಅವನ ಮೇಲೆ ರೇಪ್ ಕೇಸ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

 

 

 

ಈಗ ಯುವಕ ನನ್ನ ಎಸ್ಟೇಟ್ ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದಾರೆ, ಯುವಕ ಎಲ್ಲವನ್ನು ಕಳೆದುಕೊಂಡು ದಿಕ್ಕಾಪಾಲಾಗಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top