fbpx
ದೇವರು

ರಾಮ ಭಕ್ತ ಹನುಮಂತನ ಬಗ್ಗೆ ಆಶ್ಚರ್ಯ ಹಾಗು ಹೆಮ್ಮೆಪಡುವಂತ 9 ರಹಸ್ಯ ಸಂಗತಿಗಳು ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಹನುಮಂತನ ಬಗ್ಗೆ ನಿಮಗೆ ತಿಳಿಯದೇ ಇರುವ ಒಂಬತ್ತು ರಹಸ್ಯ ಸಂಗತಿಗಳು .

 

ಹನುಮಂತನ ಬಗ್ಗೆ (ಒಂಬತ್ತು) ಈ ರಹಸ್ಯಗಳು ಸಾಮಾನ್ಯವಾಗಿ ಅಷ್ಟಾಗಿ ಯಾರಿಗೂ ತಿಳಿದಿರುವುದಿಲ್ಲ. ಧೈರ್ಯ, ಶಕ್ತಿ, ಬಲ ಇವೆಲ್ಲ ಬೇಕು ಎಂದು ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವವರು ಬಹಳ ಜನ ಇದ್ದಾರೆ. ಎಲ್ಲ ದೇವರಿಗಿಂತ ಜಾಸ್ತಿ ಪೂಜೆ ಮಾಡುವುದು ಈ ಕಲಿಯುಗದಲ್ಲಿ ಹನುಮಂತ ದೇವನನ್ನೇ. ಆದರೂ ಈಗ ಬಜರಂಗಬಲಿಯ ಬಗ್ಗೆ ನಾವು ಹೇಳುವ ಈ ವಿಷಯಗಳು ನಿಮಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈಗ ನೀವು ಸಹ ಆ ವಿಷಯಗಳನ್ನು ತಿಳಿದುಕೊಳ್ಳಿ

 

1.ಶಕ್ತಿ, ಭಕ್ತಿ, ಛಲಕ್ಕೆ ಹೆಸರುವಾಸಿಯಾದ ಹನುಮಂತ ಸಾಕ್ಷತ್ ಶಿವನ ರುದ್ರ ಅವತಾರವೇ ಆಗಿದ್ದಾನೆ.

 

ಬ್ರಹ್ಮನ ಆಸ್ಥಾನದಲ್ಲಿ ಒಬ್ಬಳು ಅಪ್ಸರೆ ಇದ್ದಳು, ಅವಳ ಹೆಸರು ಅಂಜನಾ. ಅವಳಿಗೆ ಒಬ್ಬ ಋಷಿ ಮುನಿಗಳು ಪೂಜೆಗೆ ಸರಿಯಾದ ವ್ಯವಸ್ಥೆ ಮಾಡದೇ ಇರುವ  ಕಾರಣಕ್ಕೆ ಕೋಪೋದ್ರಿಕ್ತರಾಗಿ  ಶಾಪ ಕೊಡುತ್ತಾರೆ .ನೀನು ನಿನ್ನ ಮುಂದಿನ ಜನ್ಮದಲ್ಲಿ ಕಪಿಯಾಗಿ ಜನಿಸು ಎಂದು. ಒಂದು ದಿನ ಅವಳಿಗೆ ಈ ಶಾಪ ತಟ್ಟಿತು. ಬ್ರಹ್ಮನ ಸಹಾಯದಿಂದ ಅವಳು ಭೂಮಿಯ ಮೇಲೆ ಹುಟ್ಟಿ ಕೇಸರಿ ರಾಜನ ಜೊತೆ ಮದುವೆಯಾಗುತ್ತದೆ.

 

 

ಶಿವನ ಪರಮ ಭಕ್ತೆಯಾಗಿದ್ದ ಇವಳು ತಪಸ್ಸು ಮಾಡುತ್ತಾಳೆ.ಶಿವನ ಹತ್ತಿರ ನೀನೆ ನನ್ನ ಮಗು ಆಗಿ ಹುಟ್ಟಿ ಬಾ ನನಗೆ ಮುಕ್ತಿ ಕೊಡಬೇಕು ಎಂದು ವರ ಕೇಳಿಕೊಳ್ಳುತ್ತಾಳೆ. ಅದೇ ಸಮಯದಲ್ಲಿ ದಶರಥ ಮಹಾರಾಜನು ಕೂಡ ಮಕ್ಕಳಿಗಾಗಿ ಯಜ್ಞ ಮಾಡಿ ಅದರಲ್ಲಿ ಸಿಕ್ಕ ಪಾಯಸವನ್ನು  ತನ್ನೆಲ್ಲಾ ಹೆಂಡತಿಯರಿಗೂ ಕೊಡುತ್ತಾನೆ.ಕೌಸಲ್ಯೆಗೆ ಸಿಕ್ಕ ಪಾಲಿನ ಪಾಯಸದಲ್ಲಿ ಸ್ವಲ್ಪ ಪಾಯಸ ಒಂದು ಗಾಳಿಪಟಕ್ಕೆ ಅಂಟಿಕೊಳ್ಳುತ್ತದೆ. ಆ ಗಾಳಿಪಟ ಗಾಳಿಯಲ್ಲಿ ಹಾರಿ ಬಂದು ಸ್ವಲ್ಪ ಪಾಯಸವನ್ನು ಅದರಲ್ಲಿ ಮೆತ್ತಿಕೊಂಡು ಹಾರಿ ಹೋಗಿ ತಪಸ್ಸು ಮಾಡುತ್ತಿದ್ದ ಅಂಜನಾ ಕೈಯಲ್ಲಿ ಬೀಳುತ್ತದೆ.(ವಾಯುದೇವ ಶಿವನ ಆದೇಶದಂತೆ ಇದನ್ನು ಮಾಡುತ್ತಾನೆ) ಶಿವನ ಪ್ರಸಾದ ಎಂದುಕೊಂಡ ಅಂಜನಾ ದೇವಿಯ ಅ  ಪಾಯಸವನ್ನು ತಿಂದು ಪವನ ಪುತ್ರ ಹನುಮಂತ ಎನ್ನುವ ಶಿವನ ರುದ್ರ ಅವತಾರಕ್ಕೆ  ಜನ್ಮ ಕೊಡುತ್ತಾಳೆ.

 

2.ಶ್ರೀರಾಮನ ಆಯುಷ್ಯ ಹೆಚ್ಚಾಗಲಿ ಎಂದು ಇಡೀ ದೇಹಕ್ಕೆ ಕುಂಕುಮ ಹಚ್ಚಿಕೊಳ್ಳುತ್ತಾನೆ ಹನುಮಂತ.

 

 

ಸೀತಾ ಮಾತೆಯು ತನ್ನ ಹಣೆಗೆ ಕುಂಕುಮವನ್ನು ಹಚ್ಚಿ ಕೊಳ್ಳುವುದನ್ನು  ಹನುಮಂತನು ನೋಡಿ, ಕುಂಕುಮ ಏಕೆ ಇಟ್ಟುಕೊಳ್ಳುತ್ತೀರಾ ಮಾತೆ ? ಎಂದು ಕೇಳುತ್ತಾನೆ. ಅದಕ್ಕೆ ಸೀತಾ ಮಾತೆ , ನಾನು ಶ್ರೀರಾಮನನ್ನು ಮದುವೆಯಾದಾಗಿನಿಂದ ನನಗೆ ಅವರ ಮೇಲಿರುವ ಭಕ್ತಿ ಮತ್ತು ಪ್ರೀತಿಯ ಸಂಕೇತ ಈ ಕುಂಕುಮ ಎಂದು ಹೇಳುತ್ತಾಳೆ. ಇದನ್ನು  ಕೇಳಿದ ತಕ್ಷಣ ಹನುಮಂತನು ತನ್ನ ಇಡೀ ದೇಹಕ್ಕೆ ಕುಂಕುಮವನ್ನು ಹಚ್ಚಿಕೊಂಡು ಬರುತ್ತಾನೆ. ರಾಮನ ಮೇಲೆ ತನಗೆ ಎಷ್ಟು ಅಗಾಧವಾದ ಪ್ರೀತಿ ಮತ್ತು ಭಕ್ತಿ ಇದೆ ಇಂದು ತೋರಿಸಿಕೊಳ್ಳುವುದಕ್ಕೆ ಹೀಗೆ ಮಾಡುತ್ತಾನೆ. ರಾಮನಿಗೆ ತುಂಬಾ ಖುಷಿಯಾಗಿ ಇನ್ನು ಮುಂದೆ ಯಾರು ಕುಂಕುಮ ಇಟ್ಟುಕೊಂಡು ಪೂಜೆ ಮಾಡುತ್ತಾರೋ, ಅವರ ಕಷ್ಟಗಳೆಲ್ಲ ಬೇಗ ಕಳೆಯುತ್ತವೆ ಎಂದು ವರವನ್ನು ಕೊಡುತ್ತಾನೆ.

 

3.ಹನುಮಾನ್ ಎಂದರೆ ಸಂಸ್ಕೃತದಲ್ಲಿ ವಿಕಾರವಾದ ದವಡೆ.

 

 

ಸಂಸ್ಕೃತದಲ್ಲಿ “ಹನು” ಎಂದರೆ ದವಡೆ “ಮಾನ್” ಎಂದರೆ ವಿಕಾರ ವಾಗಿರುವುದು ಎಂದು ಅರ್ಥ .ಚಿಕ್ಕವನಿದ್ದಾಗ ಆಂಜನೇಯನು ಸೂರ್ಯನನ್ನು ಮಾವಿನ ಹಣ್ಣು ಅಂತ ತಿಳಿದು ಆಕಾಶಕ್ಕೆ ಹಾರಿ ಅದನ್ನು ಕೈಯಲ್ಲಿ ಹಿಡಿದು ನುಂಗಲು ಮುಂದಾಗುತ್ತಾನೆ, ಇದನ್ನು ನೋಡಿದ ಇಂದ್ರ ವಜ್ರಾಯುಧ ತೆಗೆದುಕೊಂಡು ಹೊಡೆಯುತ್ತಾನೆ. ಆಂಜನೇಯನು ಆಕಾಶದಿಂದ ಭೂಮಿಗೆ ಬಿದ್ದಾಗ ಅವನ ದವಡೆ ವಿಕಾರವಾಗುತ್ತದೆ ಎನ್ನುವುದು ಬಹಳ ಪ್ರಸಿದ್ಧಿಯಾಗಿರುವ ಕಥೆಯಾಗಿದೆ .

 

4.ಹನುಮಂತನೇ ಬ್ರಹ್ಮಚಾರಿಯಾಗಿದ್ದರು ಮಕರ ಧ್ವಜ ಎನ್ನುವ  ಒಬ್ಬ ಮಗನಿದ್ದನು.

 

 

ಹನುಮಂತನು ಲಂಕೆಯನ್ನು ಸುಟ್ಟು ಹಾಕಿ , ಬಾಲಕ್ಕೆ ಹತ್ತಿಕೊಂಡಿರುವ ಬೆಂಕಿಯನ್ನು ಆರಿಸಿ ಕೊಳ್ಳುವುದಕ್ಕೆ ಸಮುದ್ರದಲ್ಲಿ ಮುಳುಗಿದ್ದ, ಆಗ ಹನುಮಂತನ ಬೆವರ ಹನಿಯನ್ನು ಒಂದು ಮೀನು ನುಂಗಿತ್ತು, ಆಗ ಮಕರ ಧ್ವಜನು ಹುಟ್ಟಿದನು.

 

5.ಒಮ್ಮೆ ಶ್ರೀರಾಮನೇ ಹನುಮಂತನಿಗೆ ಮರಣ  ದಂಡನೆಯ ಶಿಕ್ಷೆ ವಿಧಿಸಿದನು.

ಶ್ರೀರಾಮ ರಾಜನಾದ ನಂತರದ ಕಥೆಯಿದು. ಒಮ್ಮೆ ನಾರದ ಮಹರ್ಷಿಗಳು ಹನುಮಂತನಿಗೆ ಎಲ್ಲಾ ಋಷಿಗಳಿಗೂ ನಮಸ್ಕಾರ ಮಾಡು, ಆದರೆ ವಿಶ್ವಾಮಿತ್ರರಿಗೆ ಮಾತ್ರ ಮಾಡಬೇಡ. ಯಾಕೆಂದರೆ ಅವರು ಮುಂಚೆ ರಾಜನಾಗಿದ್ದರು ಎಂದು ಹೇಳುತ್ತಾರೆ. ನಾರದ ಮಹರ್ಷಿಗಳು ಹೇಳಿದ ಹಾಗೆ ಹನುಮಂತನು ಮಾಡುವನು. ವಿಶ್ವಾಮಿತ್ರರು ಸುಮ್ಮನಿದ್ದರೂ ಅವರಿಗೇನೂ ಕೋಪ ಬರಲಿಲ್ಲ. ಆದರೆ ನಾರದ ಮಹರ್ಷಿಗಳು ಸುಮ್ಮನೆ ಇರದೆ ವಿಶ್ವಾಮಿತ್ರರ ಬಳಿ ಹೋಗಿ ಬತ್ತಿ ಇಟ್ಟರು.

 

ವಿಶ್ವಾಮಿತ್ರರು ಕೋಪಗೊಂಡು ಹನುಮಂತನಿಗೆ ಮರಣ ದಂಡನೆಯ ಶಿಕ್ಷೆ  ನೀಡುವಂತೆ ರಾಮನಿಗೆ ಆದೇಶ ಮಾಡುತ್ತಾರೆ. ಗುರುಗಳ ಮಾತು ಮೀರದ ರಾಮ, ರಾಮ ಹನುಮಂತನಿಗೆ ಬಾಣ ಬಿಡುತ್ತಾನೆ. ಹನುಮಂತನ ಭಕ್ತಿಯ ಮುಂದೆ ಬ್ರಹ್ಮಾಸ್ತ ಕೂಡ ನಿಲ್ಲಲಿಲ್ಲ. ಹನುಮಂತ ಸುಮ್ಮನೆ ರಾಮನ ಜಪ ಮಾಡಿಕೊಂಡು ಕುಳಿತುಕೊಂಡಿರುತ್ತಾನೆ. ಆದ್ದರಿಂದ  ಯಾವ ಬಾಣವೂ ಏನು ಮಾಡುವುದಕ್ಕೆ ಆಗಲಿಲ್ಲ. ವಿಧಿ ಇಲ್ಲದೇ ರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾನೆ. ಆದರೂ ಅವಾಗಲೂ ಕೂಡ ಏನೂ ಆಗಲಿಲ್ಲ.ಇದನ್ನು ನೋಡಿದ ನಾರದ ಮಹರ್ಷಿಗಳು ವಿಶ್ವಾಮಿತ್ರರ ಹತ್ತಿರ ಕ್ಷಮೆ ಕೇಳುತ್ತಾರೆ. ಆನಂತರ ವಿಶ್ವಾಮಿತ್ರರು ರಾಮನಿಗೆ ಸುಮ್ಮನೆ ಆಗಲು ಹೇಳುತ್ತಾರೆ.

 

6.ವಾಲ್ಮೀಕಿಗೂ ಮುಂಚೆ ಹನುಮಂತ ತಾನು ಕಂಡಂತೆ ರಾಮಾಯಣ ಬರೆದಿದ್ದನು.

 

 

ಲಂಕಾ ದಹನ ಆದ ಮೇಲೆ ಹನುಮಂತ ಹಿಮಾಲಯಕ್ಕೆ ಹೋಗುತ್ತಾನೆ. ರಾಮನ ಮೇಲಿನ ಭಕ್ತಿಯಿಂದ ತಾನು ಕಂಡ ರಾಮಾಯಣದ ಬಗ್ಗೆ, ಬಂಡೆಗಳ ಮೇಲೆ ತನ್ನದೇ ಕೈಯಿಂದ ಸಂಪೂರ್ಣವಾಗಿ ಬರೆಯುತ್ತಾನೆ. ಹಾಗೆ ವಾಲ್ಮೀಕಿಯು ರಾಮಾಯಣ ಬರೆಯುತ್ತಾನೆ ಆದನ್ನು ಹನುಮಂತನಿಗೆ ತೋರಿಸೋಣ ಎಂದು ಹಿಮಾಲಯಕ್ಕೆ ಹೋಗುತ್ತಾನೆ. ಆಗ ಅಲ್ಲಿದ್ದ ಕಲ್ಲಿನ ಬಂಡೆಗಳ ಮೇಲೆ ರಾಮಾಯಣ ಬರೆದಿರುವುದನ್ನು ನೋಡಿ ವಾಲ್ಮೀಕಿ ಮಹರ್ಷಿಗಳು ಆಶ್ಚರ್ಯ ಪಡುತ್ತಾರೆ.

ಇದು ನಾನು ಬರೆದಿರುವ ರಾಮಾಯಣಕ್ಕಿಂತ ಚೆನ್ನಾಗಿದೆ. ಇದನ್ನು ನೋಡಿದರೆ ನಾನು ಬರೆದಿರುವುದು ಯಾರಿಗೂ ಇಷ್ಟ ಆಗುವುದಿಲ್ಲ ಎಂದು  ಹೇಳುತ್ತಾನೆ ವಾಲ್ಮೀಕಿ ಮಹರ್ಷಿಗಳು. ಆಗ ಹನುಮಂತ  ತಾನು ಬರೆದಿರುವ ರಾಮಾಯಣವನ್ನೆಲ್ಲ ಅಳಿಸಿ ಹಾಕುತ್ತಾನೆ.ವಾಲ್ಮೀಕಿ ಮಹರ್ಷಿಗಳಿಗೆ ಬಹಳ ದುಃಖವಾಗುತ್ತದೆ. ಪಶ್ಚಾತ್ತಾಪಕ್ಕೆ ನಾನು ಮುಂದಿನ ಜನ್ಮದಲ್ಲಿ ನಿನ್ನ ಸಾಧನೆಯನ್ನು ಹೊಗಳಿ ಬರೆಯುತ್ತೇನೆ ಎಂದು ಹೇಳುತ್ತಾನೆ.

 

7.ಭೀಮ ಹನುಮಂತನ ತಮ್ಮ ,ಭೀಮ ಕೂಡ  ವಾಯುದೇವನ ಮಗ .

 

 

ಮಹಾಭಾರತದ ಕಾಲದಲ್ಲಿ, ಭೀಮ ಒಂದು ದಿನ ದ್ರೌಪದಿಗೆ ಸೌಗಂಧಿಕಾ ಪುಷ್ಪವನ್ನು ತರುವುದಕ್ಕೋಸ್ಕರ  ಹುಡುಕಿಕೊಂಡು ಕಾಡಿಗೆ ಬರುತ್ತಾನೆ. ದಾರಿಯಲ್ಲಿ ಒಂದು ಮಂಗವು ಮಲಗಿರುತ್ತದೆ, ಬಾಲ ಅಡ್ಡವಾಗಿರುತ್ತದೆ.ಮಂಗಕ್ಕೆ ನಿನ್ನ  ಅಡ್ಡಲಾಗಿರುವ ಬಾಲವನ್ನು ಎತ್ತಿಕೋ ಎಂದು ಭೀಮನು ಹೇಳುತ್ತಾನೆ. ಆಗ ಮಂಗ ತಾಕತ್ತಿದ್ದರೆ ನೀನು ಎತ್ತಿ ಇಡುವ ಎನ್ನುತ್ತದೆ.ಭೀಮನಿಗೆ ತನ್ನ ಬಾಲದ ಬಗ್ಗೆ ತುಂಬಾ ಜಂಭ ಇರುತ್ತದೆ, ಬಾಲವನ್ನು ಎತ್ತುವುದಕ್ಕೆ ಬಹಳ ಪ್ರಯತ್ನ ಪಡುತ್ತಾನೆ. ಬಾಲವನ್ನು ಒಂದು ಚೂರು ಕದಲಿಸುವುದಕ್ಕೆ ಆಗುವುದಿಲ್ಲ. ಹೀಗೆ ಬಹಳ ಹೊತ್ತು ಪ್ರಯತ್ನ ಮಾಡಿದ ಮೇಲೂ ತನ್ನ ಕೈಯಲ್ಲಿ ಎತ್ತಲಿಕ್ಕೆ ಆಗುವುದಿಲ್ಲ ಎಂದು ಮನವರಿಕೆಯಾಗುತ್ತದೆ. ಆಗ ಭೀಮನಿಗೆ ಗೊತ್ತಾಗುತ್ತದೆ ಇದು ಮಂಗ ಅಲ್ಲ, ನಮ್ಮ ಅಣ್ಣ ಹನುಮಂತನೆಂದು. ನನ್ನ ಜಂಬ ಕಮ್ಮಿ ಮಾಡುವುದಕ್ಕೆ ಈ ರೀತಿ ಮಲಗಿರುವುದು ಎಂದು.

 

8.ಕೊನೆಗಾಲದಲ್ಲಿ ಯಮನಿಗೆ ಅಡ್ಡ ಬಂದವನು ಹನುಮಂತ.

 

 

ರಾಮನ ಅವತಾರ ಮುಗಿಯುವ ಕಾಲ ಭೂಮಿಯನ್ನು ಬಿಟ್ಟು ವೈಕುಂಠಕ್ಕೆ ಹೋಗಬೇಕಾದಾಗ, ಆಂಜನೇಯನೂ ಇದ್ದರೆ ಆಗಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ಒಂದು ಉಪಾಯ ಮಾಡುತ್ತಾನೆ. ರಾಮ ತನ್ನ ಉಂಗುರ ಕಳೆದು ಹೋಗಿದೆ ಹುಡುಕಿಕೊಂಡು ಬಾ ಎಂದು ಹನುಮಂತನನ್ನು ಕಳಿಸಿ, ತಾನು ಪಾತಾಳ ಲೋಕಕ್ಕೆ ಹೊರಟು ಹೋಗುತ್ತಾನೆ. ಉಂಗುರ ಹುಡುಕುತ್ತಾ ಆಂಜನೇಯ ಯಮನನ್ನು ಭೇಟಿ ಮಾಡುತ್ತಾನೆ. ಆಗ ರಾಮನ ಉಂಗುರ ಬಿದ್ದು ಹೋಗಿದೆ ಎಂದರೆ ರಾಮನ ಅವತಾರ ಮುಗಿಯುವ ಸಮಯ ಬಂದಿದೆ ಎಂದು ಹೇಳುತ್ತಾನೆ.

 

9.ಸೀತಾ ಮಾತೆಯ ಉಡುಗೊರೆಯೂ ಬೇಡ ಎಂದಿದ್ದ ಹನುಮಂತ.

 

 

ಸೀತಾ ಮಾತೆ ಮುತ್ತಿನ ಹಾರವನ್ನು ಹನುಮಂತನಿಗೆ ಕೊಟ್ಟಾಗ, ರಾಮ ಇಲ್ಲದೇ ಇರುವುದು ನನಗೆ ಬೇಡ ಎಂದು ಹೇಳಿ ತನ್ನ ಎದೆ ಬಗೆದು ತೋರಿಸಿ ತನ್ನ ಭಕ್ತಿ ಮತ್ತು ಪ್ರೀತಿಯ ಬಗ್ಗೆ ಹೇಳುತ್ತಾನೆ ಹನುಮಂತ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top