fbpx
ಸಿನಿಮಾ

ಟಗರು ಪುಟ್ಟಿ ಮಾನ್ವಿತಾ ಮತ್ತು ಡಾಲಿ ಧನಂಜಯ ನನ್ನು ಹಾಡಿ ಹೊಗಳಿದ ರಾಮ್ ಗೋಪಾಲ್ ವರ್ಮಾ ಏಕೆ ಗೊತ್ತೇ?

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೋಡಿ ಭರ್ಜರಿ ದಾಖಲೆಯನ್ನೇ ಸೃಷ್ಟಿಸಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಬಾಕ್ಸಾಫೀಸ್‌ನಲ್ಲಿಯೂ ಪೊಗರು ಪ್ರದರ್ಶಿಸುತ್ತಿದೆ. ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ಡಾಲಿಯಾಗಿ ಅಬ್ಬರಿಸಿರುವವರು ಧನಂಜಯ್. ಬಹುಶಃ ಅಂಥಾದ್ದೊಂದು ಪಾತ್ರವನ್ನು ಧನಂಜಯ್ ನಿರ್ವಹಿಸಿದ್ದಾರೆಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಸೂರಿ ರೂಪಿಸಿರೋ ಆ ಪಾತ್ರದಲ್ಲಿನ ಅಬ್ಬರದ ನಟನೆಯ ಮೂಲಕ ಧನಂಜಯ್ ಸಿನಿಮಾ ಜೀವನದ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳೋ ಲಕ್ಷಣಗಳೂ ದಟ್ಟವಾಗಿವೆ. ಬಹುಶಃ ಆ ಪಾತ್ರವನ್ನು, ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲವೇನೋ.

 

 

ಟಗರು ಸಿನೆಮಾವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮ ಬೆಂಗಳೂರಿನಲ್ಲಿ ಮಾಲ್ ಒಂದರಲ್ಲಿ ಟಗರು ಚಿತ್ರದ ನಿರ್ದೇಶಕರಾದ ಸೂರಿ ಮತ್ತು ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಜೊತೆ ವೀಕ್ಷಿಸಿದ್ದಾರೆ. ಚಿತ್ರ ನೋಡಿದ ಬಳಿಕ ಈ ಬಗ್ಗೆ ಟ್ವಿಟ್ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ” ಟಗರು ಚಿತ್ರದ ತಂಡದ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ ಎಂದು ಹೇಳಿ. ಸೂರಿ ಅವರದ್ದು ಅಸಮಾನ್ಯ ನಿರ್ದೇಶನ ಎಂದು ಹೊಗಳಿದ್ದಾರೆ. ಇನ್ನು ಟಗರು ಪುಟ್ಟಿ ಮಾನ್ವಿತಾ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವ ರಾಮ್ ಗೋಪಾಲ್ ವರ್ಮ ಮಾನ್ವಿತಾ ಹರೀಶ್ ಅಭಿನಯದಲ್ಲಿ ಕರೆಂಟ್ ರೀತಿಯಲ್ಲಿ ಫೈರ್ ಇದೆ ಎಂದು ಹೇಳಿದ್ದಾರೆ.

ಟಗರು ಡಾಲಿ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿರುವ ಧನಂಜಯ್ ಅವರ ಅಭಿನಯ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಟಗರು ಚಿತ್ರ ರಾಜ್ಯಾದ್ಯಂತ ಯಶಸ್ವಿ ಆಗಿ ಪ್ರದರ್ಶನ ಆಗುತ್ತಿದ್ದು ಸಿನಿರಸಿಕರಿಗೆ ಮನರಂಜನೆಯ ರಸದೌತಣ ಬಡಿಸುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top