fbpx
ಸಿನಿಮಾ

ಅತಿಯಾದ ಅಹಂಕಾರದಿಂದ ಗೋಲ್ಡನ್ ಚಾನ್ಸ್ ಕಳೆದುಕೊಂಡಳಾ ಸಾಯಿ ಪಲ್ಲವಿ

ಪ್ರೇಮಂ ಚಿತ್ರದ ಮೂಲಕ ಏಕಾಏಕಿ ಸ್ಟಾರ್ ನಟಿಯಾಗಿ ಹೊರ ಹೊಮ್ಮುತ್ತಲೇ ಯುವ ಸಮೂಹದ ಹಾಟ್ ಫೇವರಿಟ್ ಹೀರೋಯಿನ್ ಆದಾಕೆ ಸಾಯಿಪಲ್ಲವಿ. ಮೊದಲ ಚಿತ್ರ ಸೂಪರ್ ಹಿಟ್ ಆದ ನಂತರ ಟಾಲಿವುಡ್ ನಲ್ಲಿ ಒಳ್ಳೆಯ ಆಫರ್’ಗಳು ಈಕೆಯನ್ನು ಹುಡುಕಿಕೊಂಡು ಬಂದಿದ್ದರೂ ಈಕೆ ಮಾತ್ರ ಆಯ್ಕೆ ಮಾಡಿದ್ದು ಟಾಲಿವುಡ್ ಚಿತ್ರಗಳನ್ನು. ಟಾಲಿವುಡ್’ನ ಫಿದಾ, ಮತ್ತು ಎಂಸಿಎ ಚಿತ್ರಗಳಲ್ಲಿಯೂ ನಟಿಸಿದ ಈಕೆಗೆ ಇಲ್ಲೂ ಕೂಡ ಭರ್ಜರಿ ಯಶಸ್ಸು ಸಿಕ್ಕಿತ್ತು.

 

 

ಮೊದಲ ಮೂರು ಚಿತ್ರಗಳಲ್ಲಿ ಯಶಸ್ಸನ್ನು ಕಂಡಿರುವ ಸಾಯಿ ಪಲ್ಲವಿಯ ವಿರುದ್ಧ ಈಗ ಆರೋಪಗಳು ಕೇಳಿಬರುತ್ತಿವೆ. ಹೌದು, ಮೊದಲು ಸಾಯಿ ಪಲ್ಲವಿಯಲ್ಲಿದ್ದ ವಿನಯ, ನಡತೆ ಈಗ ಕಾಣುತ್ತಿಲ್ಲ. ಸಕ್ಸಸ್ ನ ಅಹಂ ಅವರ ತಲೆಗೆ ಏರಿರುವಂತೆ ಕಾಣುತ್ತದೆ. ದೊಡ್ಡ ಸೂಪರ್ ಸ್ಟಾರ್ ರೇಂಜ್‌ನಲ್ಲಿ ಬಿಹೇವ್‌ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಇವರ ವಿರುದ್ಧ ಕೇಳಿ ಬರುತ್ತಿವೆ. ಸಾಯಿ ಪಲ್ಲವಿಯ ಈ ದುರ್ವರ್ತನೆಗೆ ಬೇಸರಗೊಂಡಿರುವ ನಿರ್ಮಾಪಕ ದಿಲ್ ರಾಜು ಹಾಗೂ ನಟ ನಾನಿ ಅವರು ಸಾಯಿ ಪಲ್ಲವಿ ಮೇಲೆ ಕೋಪಿಸಿಕೊಂಡಿದ್ದಾರಂತೆ.

 

 

 

ಅಷ್ಟೇ ಅಲ್ಲದೆ ನಟ ನಾಗ ಶೌರ್ಯ ಕೂಡ ಸಾಯಿ ಪಲ್ಲವಿ ವಿರುದ್ಧ ಮಾಧ್ಯಮದವರ ಮುಂದೆ ಬಹಿರಂಗವಾಗಿಯೇ ಮಾತನಾಡಿದ್ದರು. ಈಗ ಹೊಸ ಸೇರ್ಪಡೆ ಎಂಬಂತೆ ಈಕೆ ಶೂಟಿಂಗ್ ಗೆ ಸರಿಯಾಗಿ ಬರುತ್ತಿಲ್ಲ ಪದೇ ಪದೇ ಗೈರು ಆಗುತ್ತಿದ್ದಾಳೆ ಎಂದು ನಿರ್ದೇಹಷಕರು ದೂರುತ್ತಿದ್ದಾರೆ ಸಾಯಿ ಪಲ್ಲವಿ ಜಂಬ ಅತಿರೇಕಕ್ಕೆ ಹೋಗುತ್ತಿದೆ ಇದೇ ಕಾರಣದಿಂದ ಶಾಂತನು ಭಾಗ್ಯರಾಜ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯರಿಗಾಗಿ ಹುಡುಕಾಟ ನಡೆದಿತ್ತು ಮೊದಲಿಗೆ ಸಾಯಿಪಲ್ಲವಿ ಹೆಸರು ಕೇಳಿಸಿಕೊಂಡರೂ ಸಹ ಆ ನಂತರ ಆಕೆಯ ಬಗ್ಗೆ ಚಿತ್ರರಂಗದಲ್ಲಿ ಇರುವ ಕೆಟ್ಟ ಅಭಿಪ್ರಾಯ ಹಾಗೂ ಗಳನ್ನು ಕೇಳಿ ಬೇಸತ್ತಿರುವ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಸಹ ಮಾಡುತ್ತಿದ್ದ ಶಾಂತನು ಭಾಗ್ಯರಾಜ್ ಈಗ ಬೇರೆ ನಟಿಯನ್ನು ಆಯ್ಕೆ ಮಾಡಿದ್ದಾರೆ.

 

 

ಸಾಯಿ ಪಲ್ಲವಿಯನ್ನು ಬಿಟ್ಟು ಆ ಜಾಗಕ್ಕೆ ಸಮಂತಾ ಅವರನ್ನು ನಿರ್ದೇಶಕ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top