fbpx
ಸಿನಿಮಾ

ಸಹನಟನನ್ನು ಭೇಟಿ ಮಾಡಿ ಮಾನವೀಯತೆ ಮೆರೆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನಲ್ಲಿ ‘ಕರಿ ಇಡ್ಲಿ’ ಅಂತಾನೇ ಫೇಮಸ್ ಆಗಿರುವ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಕಳೆದ ಕೆಲ ತಿಂಗಳಿಂದ ಅಸ್ತವ್ಯಸ್ತವಾಗಿದೆ .

 

 

ಈಗಾಗಲೇ ತಮ್ಮ ದೇಹದ ತೂಕವನ್ನು ಕಡಿಮೆಗೊಳಿಸಿ ದ್ರವ ಆಹಾರವನ್ನಷ್ಟೇ ಸೇವಿಸುತ್ತಿದ್ದ ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಅಸಮತೋಲನ ಕಂಡು ಬಂದಿತ್ತು ಹೀಗಾಗಿ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು ಇದನ್ನು ಕಂಡ ಕೆಲ ಸಾಮಾಜಿಕ ಜಾಲತಾಣದ ಕಿಡಿಗೇಡಿಗಳು ಬುಲೆಟ್ ಪ್ರಕಾಶ್ ಅವರು ತೀರಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಕೆಲವೇ ಗಂಟೆಗಳಲ್ಲಿ ಹಬ್ಬಿಸಿದ್ದರು .

 

 

ಇದರ ಬಗ್ಗೆ ಸಿಡಿಮಿಡಿಗೊಂಡ ಬುಲೆಟ್ ಪ್ರಕಾಶ್ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತೇನೆ ನಾನು ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ನಾನು ಫಿಟ್ ಅಂಡ್ ಫೈನ್ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು .

 

 

ಈಗಾಗಲೇ ಕೆಲವು ಚಿತ್ರಗಳನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಅಭಿನಯ ಮಾಡಿದ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಕ್ಷೀಣವಾಗಿದೆ ಎಂದು ತಿಳಿದ ತಕ್ಷಣ ಶಿವರಾಜ್ ಕುಮಾರ್ ಅವರು ಬುಲೆಟ್ ಪ್ರಕಾಶ್ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ , ದೊಡ್ಡ ಮನೆ ಅವರು ತಮ್ಮ ಸಹ ನಟರು ಹಾಗೂ ಕಲಾವಿದರನ್ನು ಬಹಳವಾಗಿ ಪ್ರೀತಿಸುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಇದು ನಿಂತಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top