fbpx
ಸಮಾಚಾರ

ತಾಯಿಗೆ ತಕ್ಕ ಮಗ’ ಚಿತ್ರದ ಶೂಟಿಂಗ್ ವೇಳೆ ನಾಯಕ ಅಜಯ್ ರಾವ್ ರವರಿಗೆ ಪೆಟ್ಟು , ಮುಂದಿನ ಹಂತದ ಶೂಟಿಂಗ್ ಏಪ್ರಿಲ್ ನಿಂದ ಆರಂಭ

ಶಶಾಂಕ್ ಸಿನಿಮಾಸ್ ನಿರ್ಮಿಸುತ್ತಿರುವ, ಶಶಾಂಕ್ ನಿರ್ದೇಶನದ “ತಾಯಿಗೆ ತಕ್ಕ ಮಗ” ಚಿತ್ರದ ಚಿತ್ರೀಕರಣವು ಶೇಕಡ 50ರಷ್ಟು ಮುಗಿದಿದೆ. ಬೆಂಗಳೂರಿನ ಸುತ್ತ ಮುತ್ತ ನಡೆದ 35
ದಿನಗಳ ಚಿತ್ರೀಕರಣದಲ್ಲಿ ಕೃಷ್ಣ ಅಜೇಯ್‍ರಾವ್, ಸುಮಲತಾ ಅಂಬರೀಶ್, ಅಶಿಕಾ ರಂಗನಾಥ್, ಭಜರಂಗಿ ಲೋಕಿ, ಅಚ್ಯುತಕುಮಾರ್, ಸಾಧು ಕೋಕಿಲ ಹಾಗು ಇತರರ ಅಭಿನಯದ ಅನೇಕ ಸನ್ನಿವೇಶ ಹಾಗು ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

 

 

ಸಾಹಸ ಸನ್ನೀವೇಶದ ಚಿತ್ರೀಕರಣವೊಂದರಲ್ಲಿ ನಾಯಕ ಅಜೇಯ್‍ರಾವ್ ಅವರ ಕಾಲಿಗೆ ಪೆಟ್ಟಾಗಿದ್ದು ಸಧ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ ಏಪ್ರಿಲ್ 2ನೇ ವಾರದಿಂದ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ.

 

 

ಚಿತ್ರಕ್ಕೆ ಶೇಖರ್ ಚಂದ್ರ ಛಾಯಗ್ರಹಣ, ಡಾ. ಕೆ. ರವಿವರ್ಮ ಸಾಹಸ ಸಂಯೋಜನೆ, ಜೂಡಾ ಸ್ಯಾಂಡಿ ಸಂಗೀತ ಹಾಗು ಗಿರಿ ಮಹೇಶ್ ಅವರ ಸಂಕಲನವಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top