fbpx
ಆರೋಗ್ಯ

ಈ ಆಯುರ್ವೇದದ ಮನೆಮದ್ದನ್ನು ಬಳಸಿ ಮೂತ್ರ ಕಟ್ಟಿದ ಸಮಸ್ಯೆ ಇದ್ದರೆ ಅದರಿಂದ ಹೊರಬನ್ನಿ

ಮೂತ್ರ ಕಟ್ಟಿದ ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು ಬಳಸಿ , ಹೊಟ್ಟೆನ ಹಾಯಾಗಿಡಿ ..

 

ಮೂತ್ರ ಕಟ್ಟುವ ಸಮಸ್ಯೆ ಹಲವಾರು ಕಾರಣಗಳಿಂದ ಆಗುತ್ತದೆ ಮುಖ್ಯವಾಗಿ ಮೂತ್ರ ಕೋಶದಲ್ಲಿನ ಕಲ್ಲು , ಮೂತ್ರ ನಾಳಗಳಲ್ಲಿ ದುರ್ಮಾಂಸ , ಗಟ್ಟಿಯಾದ ಆಸನದ ಮೇಲೆ ಕೂರುವುದು ಇವೆಲ್ಲವೂ ಮೂತ್ರ ಕಟ್ಟುವ ಸಮಸ್ಯೆಗೆ ಕಾರಣಗಳು .

 

 

ಮೂತ್ರ ಕಟ್ಟುವ ಸಮಸ್ಯೆ ಗೆ ಆಯುರ್ವೇದದ ಪರಿಹಾರಗಳು ಹೀಗಿವೆ :

ತೆಂಗಿನ ಅಥವಾ ಅಡಕೆ ಬೇರನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಕಿಬ್ಬೊಟ್ಟೆಯ ಮೇಲೆ ಲೇಪ ಹಚ್ಚಿ .

 

ಕಬ್ಬಿನ ರಸ ೧೦೦ ಮಿಲಿ ನೆಲ್ಲಿ ರಸ 50 ಮಿಲಿ ಸೇರಿಸಿ ಬೆಳಗ್ಗೆ ಮತ್ತು ರಾತ್ರಿ ಎರಡು ವಾರ ಕುಡಿಯಬೇಕು.

 

ಬಾಳೆ ದಿಂಡಿನ ರಸಕ್ಕೆ ಸ್ವಲ್ಪ ತುಪ್ಪ ಸೇರಿಸಿ ಕುಡಿಯಬೇಕು .

 

ಆಗಾಗ ಎಳನೀರು ಕುಡಿದರೆ ಮೂತ್ರ ಕಟ್ಟುವುದಿಲ್ಲ .

 

ಹುರುಳಿಯನ್ನು ನೀರಿನಲ್ಲಿ ಬೇಯಿಸಿ ಬಸಿದು ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಸೇರಿಸಿ ತಿನ್ನುವುದು .

 

ಅನಾನಸ್ ಹಣ್ಣನ್ನು ತಿನ್ನುವುದು .

 

ಆಲೂಗಡ್ಡೆ ಯನ್ನು ಬೆಂಕಿಯಲ್ಲಿ ಸುಟ್ಟು ತಿನ್ನಬೇಕು .

 

ಮೂಲಂಗಿ ಸೊಪ್ಪಿನ ರಸಕ್ಕೆ ಸ್ವಲ್ಪ ಸೈನ್ಧವ ಲವಣ ವನ್ನು ಸೇರಿಸಿ ಕುಡಿಯಬೇಕು .

 

ಬೂದುಗುಂಬಳದ 30 ಮಿಲಿ ರಸಕ್ಕೆ ಸ್ವಲ್ಪ ಸೈನ್ಧವ ಲವಣ ವನ್ನು ಒಂದು ಚಿಟಿಕೆ ಇಂಗನ್ನು ಸೇರಿಸಿ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸಬೇಕು .

 

ಉಷ್ಣ ಪದಾರ್ಥಗಳನ್ನು ಸೇವಿಸಬೇಡಿ , ಉದ್ದು , ಮೂಲಂಗಿ , ಬದನೇಕಾಯಿ , ನೇರಳೆ ಹಣ್ಣು ಇವುಗಳನ್ನು ಸೇವನೆ ಮಾಡಬಾರದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top