fbpx
ಸಮಾಚಾರ

ಕೊಹ್ಲಿಗಾಗಿ ಎರಡು ದಿನ ಶೂಟಿಂಗ್ ಗೆ ಚಕ್ಕರ್ ಹೊಡೆದ ಅನುಷ್ಕಾ

ಮದುವೆಯಾದಾಗಿನಿಂದ ಯಾಕೋ ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮಾಗೆ ಹೆಚ್ಚು ಹೊತ್ತು ಜೊತೆಯಾಗಿ ಇರುವ ಅವಕಾಶವೇ ಸಿಕ್ಕಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಬ್ಯುಸಿ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ಇದೀಗ ಅನುಷ್ಕಾ ಪತಿಗಾಗಿ ಬಿಡುವು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಬಾಲಿವುಡ್ ಚಿತ್ರನಟಿ ಅನುಷ್ಕಾ ಶರ್ಮಾ ಸೂಯಿ ಧಾಗಾ ಸಿನಿಮಾ ದಲ್ಲಿ ಅಭಿನಯ ಮಾಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ರಾಜ್ಯಧಾನಿ ದೆಹಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದೆ. ಅನುಷ್ಕಾ ಶರ್ಮಾ ನೋಡಲು ಅಭಿಮಾನಿಗಳ ದಂಡೇ ಚಿತ್ರೀಕರಣದ ಸೆಟ್ ಗೆ ಆಗಮಿಸುತ್ತಿದೆ. ಈಗ ಅನುಷ್ಕಾ ಶೂಟಿಂಗ್ ಗೆ ಎರಡು ರಜೆ ಹಾಕಿದ್ದಾರೆ. ಅನುಷ್ಕಾ ಮಾತ್ರ ಪತಿ, ಭಾರತ ಕ್ರಿಕೆಟ್ ತಂಡದ ನಾಯಕ ನಾಯಕ ವಿರಾಟ್ ಕೊಹ್ಲಿ ಜೊತೆ ಕಾಲ ಕಳೆಯಲು ನಿರ್ಧಾರ ಮಾಡಿದ್ದಾರೆ.

 

 

ಶೂಟಿಂಗ್ ಸೆಟ್ ನಿಂದ ನೇರವಾಗಿ ದೆಹಲಿಗೆ ಆಗಮಿಸಿರುವ ಅನುಷ್ಕಾ ಶನಿವಾರದವರೆಗೆ ಪತಿಯ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯುವ ಅವಕಾಶವನ್ನು ಪಡೆದಿದ್ದಾರೆ.ಆದರೆ ಎರಡು ದಿನದ ಬಳಿಕ ಅನುಷ್ಕಾ ಶೂಟಿಂಗ್ ಗೆ ಹಾಜರಾಗಲೇ ಬೇಕಿದೆ. ಇತ್ತ ವಿರಾಟ್ ಕೂಡಾ ಐಪಿಎಲ್ ಅಭ್ಯಾಸಕ್ಕಾಗಿ ಬೆಂಗಳೂರು ಕಡೆಗೆ ಪ್ರಯಾಣ ಮಾಡಲೇಬೇಕಿದೆ.

 

 

ಈ ಬಾರಿ ರಾಯಲ್ ಚಾಲೆಂಜರ್ಸ್ ಕೆಲವು ಪಂದ್ಯ ವೀಕ್ಷಣೆಗೆ ಅನುಷ್ಕಾ ಆಗಮಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top