fbpx
ಆರೋಗ್ಯ

ನಿಮ್ಮ ಅಜ್ಜಿ ಹೊಕ್ಕಳಿಗೆ ಎಣ್ಣೆ ಹಾಕಿ ಮಸಾಜ್ ಮಾಡ್ತಾಯಿದ್ದದ್ದು ನೆನೆಪಿನಲ್ಲಿ ಇದ್ಯಾ,ಈವಾಗ ತಿಳ್ಕೊಳ್ಳಿ ಅದರ ಹಿಂದಿನ ಉದ್ದೇಶ ಹಾಗೂ ಅದ್ರಿಂದ ಆಗೋ ಲಾಭವನ್ನು

ಅಜ್ಜಿ ಹೊಕ್ಕಳಿಗೆ ಎಣ್ಣೆ ಹಾಕಿ ಮಸಾಜ್ ಮಾಡ್ತಿದ್ರು ಅದ್ರಿಂದ ಇಷ್ಟೆಲ್ಲಾ

ಲಾಭಗಳು ಇದೆ ಅಂತ ಗೊತ್ತಿರ್ಲಿಲ್ಲ !

 

ಮಗು ಹುಟ್ಟುವ ಮುಂಚೆ ಭ್ರೂಣಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ನಡುವೆ ಸಂಬಂಧ ಕಲ್ಪಿಸುವ ಏಕೈಕ ಕೊಂಡಿ ಎಂದರೆ ಹೊಕ್ಕಳು ಬಳ್ಳಿ , ತಾಯಿಯಿಂದ ಮಗುವಿಗೆ ಬೇಕಾದ ಅಗತ್ಯ ಪೋಷಕಾಂಶಗಳು ಸರಬರಾಜು ನಡೆಯುವುದೇ ಅಲ್ಲಿಂದ , ಮಗು ಹುಟ್ಟಿದ ಬಳಿಕ ಈ ಹೊಕ್ಕಳು ಬಳ್ಳಿಯನ್ನು ತೆಗೆದು ಹಾಕಲಾಗುತ್ತದೆ .

 

 

ಆದರೆ ವಾಸ್ತವ ಸತ್ಯ ವೇನೆಂದರೆ ಹೊಕ್ಕಳಿಗೆ ನೀಡುವ ಅನೇಕ ಚಿಕಿತ್ಸೆಗಳು ನಮ್ಮ ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ ,

ಬನ್ನಿ ಅಂತಹ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ .

 

ಒಂದೆರಡು ಹನಿ ಬೇವಿನ ಎಣ್ಣೆ ಮತ್ತು ಹರಳೆಣ್ಣೆ ಮಿಶ್ರಣ ಮಾಡಿ ಹೊಕ್ಕಳಿಗೆ ನಯವಾಗಿ ತಿಕ್ಕುವುದರಿಂದ ಮುಖದಲ್ಲಿನ ಮೊಡವೆಗಳು ದೂರವಾಗುತ್ತವೆ.

 

ಬಾದಾಮಿ ಎಣ್ಣೆಯ ಒಂದೆರಡು ಹನಿಯನ್ನು ಹೊಕ್ಕಳಿಗೆ ಮೃದುವಾಗಿ ತಿಕ್ಕುವುದರಿಂದ ಮುಖದ ಚರ್ಮದ ಕಾಂತಿ ಹೆಚ್ಚಾಗುತ್ತದೆ.

 

 

ಮೊಣಕಾಲಿನ ನೋವು ಅಥವಾ ಬೆನ್ನು ನೋವು ಇಂತಹ ಸಮಸ್ಯೆಗಳಿಗೆ ರಾತ್ರಿ ಮಲಗುವಾಗ ಒಂದೆರಡು ಹನಿ ಹರಳೆಣ್ಣೆಯನ್ನು ಹೊಕ್ಕಳಿಗೆ ಹಾಕಿ ಮಲಗಿ ಸಾಕು ವಾಸಿಯಾಗುತ್ತದೆ.

 

 

ಮೂತ್ರ ಕಟ್ಟಿದೆ ಅಥವಾ ಮೂತ್ರ ಹೋಗುವ ಜಾಗದಲ್ಲಿ ಉಷ್ಣದಿಂದ ಹಿಡಿದುಕೊಂಡಿದೆ ಎಂದಾದರೆ ಹೊಕ್ಕಳು ಮತ್ತು ಕಿಬ್ಬೊಟ್ಟೆ ಜಾಗಕ್ಕೆ ಹರಳೆಣ್ಣೆ ಹಚ್ಚಿ ಮಲಗಿ ಸಾಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top