fbpx
ಸಮಾಚಾರ

ಬ್ರೇಕಿಂಗ್ ನ್ಯೂಸ್: ರಾಜಕೀಯಕ್ಕೆ ಗುಡ್ ಬೈ ಹೇಳಿದ ದೇವೇಗೌಡರು?

ನಾನು‌ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಶುಕ್ರವಾರ ತಿಳಿಸಿದ್ದಾರೆ.

 

 

ಪ್ರಜ್ವಲ್‌ ವಿದ್ಯಾವಂತ,ಬುದ್ದಿವಂತ‌ ಇದ್ದಾನೆ. ನನಗೂ 85 ವರ್ಷ ಹೋರಾಟದ ಛಲ ಇದೆ. ಆದರೆ ವ್ಹೀಲ್ ಚೆರ್ ನಲ್ಲಿ ಸಂಸತ್‌ಗೆ ಹೋಗಲು ಇಚ್ಛೆ ಪಡುವುದಿಲ್ಲ, ಹೀಗಾಗಿ ನನ್ನ ಬದಲಿಗೆ ಜೆಡಿಎಸ್ ಇತರೆ ಹಿರಿಯ ನಾಯಕರು ಸ್ಪರ್ಧಿಸುವಂತೆ ಕೇಳಿದ್ದೇನೆ. ಪ್ರಜ್ವಲ್ ಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ದೇವೇಗೌಡ ತಿಳಿಸಿದರು.

 

 

ಪ್ರಜ್ವಲ್ ನನ್ನು ಗೆಲ್ಲಿಸಲಿ:
ದೇವೇಗೌಡರು ಹೋದರೆ ಮೊಮ್ಮಗ ಪ್ರಜ್ವಲ್ ನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ. ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿ‌ ಅಷ್ಟೆ. ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ. ಇಲ್ಲವಾದರೆ ಪ್ರಜ್ವಲ್ ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದು ಹೇಳಿದರು.

 

 

ದೇವೇಗೌಡ ಅವರ ಕುಟುಂಬದಿಂದ ಪ್ರಜ್ವಲ್‌ ರೇವಣ್ಣ ಅವರ ರಾಜಕೀಯ ಎಂಟ್ರಿ ರಾಜಕೀಯ ವಲಯದಲ್ಲಿ ಅನೇಕ ರೀತಿಯ ಚರ್ಚೆಗಳಿಗೆ ಕಾರಣವಾಗಿತ್ತು. ಪ್ರಜ್ವಲ್‌ ರನ್ನು ರಾಜಕೀಯವಾಗಿ ಬೆಳೆಯಲು ಅವಕಾಶ ನೀಡುತ್ತಿಲ್ಲ ಎಂಬುದಾಗಿ ಗ ಕಾಂಗ್ರೆಸ್‌ ಸೇರಿರುವ ಜೆಡಿಎಸ್‌ನ ಮಾಜಿ ಬಂಡಾಯ ಶಾಸಕರಾದ ಜಮೀರ್‌ ಅಹ್ಮದ್‌ ಮತ್ತು ಚಲುವರಾಯ ಸ್ವಾಮಿ ಟಿಕೆ ಮಾಡಿದ್ದರು. ಈ ಹಿಂದೆ ಪ್ರಜ್ವಲ್ ಪಕ್ಷದಲ್ಲಿ ಸೂಟಕೇಸ್ ರಾಜಕಾರಣ ಇದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top