fbpx
ಸಮಾಚಾರ

ಈ ಬಾರಿ ಐಪಿಎಲ್ ಕಪ್ ಯಾರಿಗೆ

 

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಈ ಬಾರಿ ಹೊಸ ಆಟಗಾರರು ತಂಡಕ್ಕೆ ಸೇರಿದ್ದಾರೆ ತಂಡದ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿದ್ದಾರೆ. ವಿರಾಟ್ ಕೊಹ್ಲಿ, ಎ.ಬಿ.ಡಿವಿಯರ್ಸ್, ಬ್ರೆನ್ದಾನ್ ಮೆಕಲಮ್ ರಂತಹ ದೈತ್ಯ ಆಟಗಾರರು ತಂಡದಲ್ಲಿದ್ದಾರೆ. ಆರ್.ಸಿ.ಬಿ ಅಭಿಮಾನಿಗಳು ಈ ಸಲಾ ಕಪ್ ನಮ್ದೇ ಎಂದು ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಈ ಹಿಂದೆ ಫೈನಲ್ ವರೆಗೂ ಹೋಗಿ ಸೋತಿರುವ ಆರ್.ಸಿ.ಬಿ ಈ ಬಾರಿ ಹೇಗೆ ಆಡಲಿದೆ ಕಾದುನೋಡಬೇಕು.

 

 

ಮುಂಬೈ ಇಂಡಿಯನ್ಸ್:
ಕಳೆದ ವರ್ಷದ ವಿಜೇತರು ಮುಂಬೈ ಇಂಡಿಯನ್ಸ್. 12 ತಿಂಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಗೆದ್ದುಕೊಂಡಿರುವ ಬಹುತೇಕ ತಂಡವನ್ನು ಉಳಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತೊಮ್ಮೆ ಅವರನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಂದ್ಯ ಮೇಲೆ ತಂಡ ಹೆಚ್ಚು ಭರವಸೆ ಇಟ್ಟಿದೆ.

 

ಚೆನ್ನೈ ಸೂಪರ್ ಕಿಂಗ್ಸ್:
ಇಂಡಿಯನ್ ಪ್ರೀಮಿಯರ್ ಲೀಗ್ ಎರಡು ವರ್ಷದ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಮತ್ತೆ ಐಪಿಎಲ್ ಗೆ ಮರಳಿದೆ. ನಾಯಕ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ.

 

 

ಡೆಲ್ಲಿ ಡೇರ್ ಡೆವಿಲ್ಸ್:
ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳೆದ ವರ್ಷ ಆರನೇ ಸ್ಥಾನದಲ್ಲಿ ಸರಣಿ ಮುಗಿಸಿದರು, ಈ ಬಾರಿ ಆಗ್ರಾ ಶ್ರೇಯಾಂಕದ ಆಟಗಾರರನ್ನು ಖರೀದಿ ಮಾಡಿದ್ದಾರೆ. ಈ ಸಲ ಗಂಭೀರ್ ತಂಡವನ್ನು ಮುನ್ನಡೆಸಲಿದ್ದಾರೆ.

 

 

ಸನ್ ರೈಸರ್ಸ್ ಹೈದರಾಬಾದ್:
ನಾಯಕ ಹಾಗು ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿರುವುದರಿಂದ ಇವರನ್ನು ಐಪಿಎಲ್ ನಿಂದ ಹೊರಹಾಕಲಾಗಿದೆ. ಇದರಿಂದ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ.

 

 

ಕೋಲ್ಕತ್ತಾ ನೈಟ್ ರೈಡರ್ಸ್:
ಈ ಬಾರಿ ಗಂಭೀರ್ ಅವರನ್ನು ಬಿಟ್ಟು ಕೊಟ್ಟಿರುವ ಕೋಲ್ಕತ್ತಾ ಹೊಸ ಮುಖಗಳಿಗೆ ಅವಕಾಶ ಕೊಟ್ಟಿದೆ. ಕ್ರಿಸ್ ಲೇನ್ ಮೇಲೆ ಹೆಚ್ಚು ಬಿಡ್ ಮಾಡಿದ್ದ ತಂಡ ಈಗ ಕ್ರಿಸ್ ಲೇನ್ ಗಾಯಾಳು ಆಗಿರುವುದರಿಂದ ಕಂಗಾಲಾಗಿದೆ. ರಾಬಿನ್ ಉತ್ತಪ್ಪ ತಂಡಕ್ಕೆ ಬಲ ನೀಡಲಿದ್ದಾರೆ.

 

 

 

ಕಿಂಗ್ಸ್ ಇಲೆವೆನ್ ಪಂಜಾಬ್:
ಈ ವರೆಗೂ ಇವರು ಯಾವುದೇ ಕಪ್ ಗೆದ್ದಿಲ್ಲ. ಈ ಬಾರಿ ಸ್ಟಾರ್ ಆಟಗಾರನ್ನು ಹೊಂದಿರುವ ಇವರು ಡೇವಿಡ್ ಮಿಲ್ಲರ್ ಮೇಲೆ ಹೆಚ್ಚು ಭರವಸೆ ಇಟ್ಟು ಕೊಂಡಿದ್ದಾರೆ. ಈ ಬಾರಿ ಕ್ರಿಸ್ ಗೆಲ್ ತಂಡದಲ್ಲಿದ್ದು ಗಮನ ಸೆಳೆಯಲಿದ್ದಾರೆ.

ರಾಜಸ್ತಾನ ರಾಯಲ್ಸ್:
ಕಡಿಮೆ ಸ್ಟಾರ್ ಆಟಗಾರರಿದ್ದರು ಇವರು ಈ ಮೊದಲು ಕಪ್ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದವರು ಇವರು. ಈ ಬಾರಿ ಬೆನ್ ಸ್ಟೋಕ್ ಅವರನ್ನು ದುಬಾರಿ ಬೆಲೆ ತೆತ್ತು ಕೊಂಡುಕೊಂಡಿದ್ದಾರೆ.

 

 

ನಿಮ್ಮ ನೆಚ್ಚಿನ ತಂಡ ಯಾವುದು ತಿಳಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top