ವಿಶೇಷ

ಅನೇಕ ರಹಸ್ಯಗಳನ್ನು ತನ್ನೊಳಗೆ ಇಟ್ಟುಕೊಂಡಿದ್ದ ಶೃಂಗಾರ ಬಾವಿ ಎಲ್ಲಿದೆ ಗೊತ್ತಾ , ಅದರಲ್ಲಿ ಯಾರು  ಸ್ನಾನ ಮಾಡುತ್ತಿದ್ದರು ,ಯಾರು ನಿರ್ಮಾಣ ಮಾಡಿದ್ದರು ಗೊತ್ತಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಶೃಂಗಾರ ಬಾವಿ ಎಲ್ಲಿದೆ ? ಅದರಲ್ಲಿ ಯಾರು  ಸ್ನಾನ ಮಾಡುತ್ತಿದ್ದರು. ಆದನ್ನು ಯಾರು ? ಏಕೆ ? ನಿರ್ಮಿಸಿದ್ದರು ಎಂದು ನಿಮಗೆ ಗೊತ್ತೇ ?

 

 

ಕಾಕತೀಯರ ಹೆಸರು ಹೇಳಿದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಓರುಗಲ್ಲು ನಗರ, ಆ ನಂತರ ರಾಮಪ್ಪ ದೇವಾಲಯ ಈ ಚಾರಿತ್ರಾತ್ಮಕ  ಚಿಹ್ನೆಗಳು ಪ್ರತಿ ದಿನ ಸಂದರ್ಶಕರಿಂದ ತುಂಬಿ ತುಳುಕುತ್ತಿರುತ್ತವೆ. ಇವೆಲ್ಲವೂ ಅಂದು ರಾಜ್ಯಭಾರ ನಡೆಸಿದವರ ವೈಭವವನ್ನು ಸಾರಿ ಹೇಳುತ್ತವೆ.ನಮಗೆ ಗೊತ್ತಿರದ ಬಹಳಷ್ಟು ರಹಸ್ಯಗಳು ಇಲ್ಲಿ ಅಡಗಿವೆ.

ಬಾವಿಗಳು ಮತ್ತು ನದಿಗಳ ವಿಷಯಕ್ಕೆ ಬಂದರೆ ಶೃಂಗಾರ ಬಾವಿ, ಅಕ್ಕ ತಂಗಿಯರ ಬಾವಿ, ಸಮಿತ್ತುಗಳು ಬಾವಿ, ಕೋಳಿ ಕೂಗಿನ ಬಾವಿ, ಹುತ್ತದ ಬಾವಿ, ಗಡಿಯಾರದ ಬಾವಿ . ಇಷ್ಟೇ ಅಲ್ಲದೆ ಕೋಟೆಯ ಗರ್ಭದಲ್ಲಿ ಮತ್ತೆರಡು ಭೂಗರ್ಭ ಬಾವಿಗಳಿವೆ. ಕಾಕತೀಯ ರಾಜರು ನಿರ್ಮಿಸಿದ ದೇವಾಲಯಗಳು, ಗೋಪುರಗಳು ,ಬಾವಿಗಳು ಹೀಗೆ ಹತ್ತು ಹಲವು ಕಾಕತೀಯರ ಕಲಾ ವೈಭವವನ್ನು ತಿಳಿಸುತ್ತವೆ.

 

 

ಕಾಕತೀಯರು ಮುನ್ನೂರ ಅರವತ್ತು ಬಾವಿಗಳನ್ನು ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ. ಅದರಲ್ಲಿ ಕಾಕತೀಯರು ಸ್ನಾನ ಮಾಡಲು ಪ್ರತ್ಯೇಕವಾಗಿ ಒಂದು ಬಾವಿಯನ್ನು ನಿರ್ಮಿಸಿದ್ದಾರೆ.ಅದಕ್ಕೆ ಶೃಂಗಾರ ಬಾವಿ ಎಂದು ನಾಮಕರಣ ಮಾಡಲಾಯಿತು. ಇದರಲ್ಲಿ ಮೂರು ಅಂತಸ್ತುಗಳಿದ್ದು ,ಮೊದಲಿನ ಅಂತಸ್ತಿನಲ್ಲಿ ಎರಡು ಪಿಲ್ಲರ್ ಗಳು, ಮೂರನೇ ಅಂತಸ್ತಿನಲ್ಲಿ ಎರಡು ಪಿಲ್ಲರ್ ಗಳಿಂದ ಈ ಬಾವಿಯನ್ನು ನಿರ್ಮಿಸಲಾಗಿದೆ. ಎಲ್ಲ ಅಂತಸ್ತುಗಳಲ್ಲಿ ಒಟ್ಟಿಗೆ ಇಪ್ಪತ್ತು ಕೋಣೆಗಳು ಇವೆ.

 

 

ಕಾಕತೀಯ ರಾಜರ ವಂಶಸ್ಥರು, ಈ ಬಾವಿಯಲ್ಲಿ ಸ್ನಾನ ಮಾಡಲು ಬರುತ್ತಿದ್ದರಂತೆ. ಬಹಳಷ್ಟು ರಾಣಿಯರು ಸಹ ಸ್ನಾನ ಮಾಡಲು ಇಲ್ಲಿಗೆ ಬರುತ್ತಿದ್ದರಂತೆ. ಈ ಬಾವಿಯ ವಿಶೇಷತೆ ಏನಂದರೆ ಈ ಬಾವಿಯ ತಳದಲ್ಲಿ ಒಂದು ಸುರಂಗ ಮಾರ್ಗ ಇದ್ದು ಅದರೊಳಗಿಂದ ಒಂದು ಸಾವಿರ ಕಂಬಗಳ ದೇವಾಲಯಕ್ಕೆ ಮಾರ್ಗವು ಇತ್ತಂತೆ .

 

 

ಆ ಕಾಲದಲ್ಲಿ ರಾಜವಂಶದವರು ಈ ಬಾವಿಯಲ್ಲಿ ಸ್ನಾನ ಮಾಡಿ ಸುರಂಗ ಮಾರ್ಗದಿಂದ ಹೊರಟು ಶಿವನಿಗೆ ಅಭಿಷೇಕ ಮಾಡುತ್ತಿದ್ದರಂತೆ . ಈ ಬಾವಿಯಲ್ಲಿ ರಾಜವಂಶದ ಸ್ತ್ರೀಯರು ಸ್ನಾನ ಮಾಡುತ್ತಿರುವಾಗ ಯಾರಾದರೂ ಬಗ್ಗೆ ನೋಡಿದರೆ ಅವರ ನೆರಳು ನೀರಿನಲ್ಲಿ ಕಾಣುವಂತೆ ಆ ಬಾವಿಯನ್ನು ನಿರ್ಮಿಸಿದ್ದರಂತೆ. ಶತ್ರುಗಳನ್ನು ಸಹ ಸಂಹರಿಸುವ ರೀತಿಯಲ್ಲಿ ಈ ಬಾವಿಯನ್ನು ನಿರ್ಮಿಸಿದ್ದರಂತೆ. ರಾಣಿ ರುದ್ರಮ್ಮ ದೇವಿ ಜಳಕ ಮಾಡಿದ ಬಾವಿ ಇದು. ಈ ಶೃಂಗಾರ ಬಾವಿ ಎಂದಿಗೂ ಬತ್ತುವುದಿಲ್ಲವಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top