fbpx
ಸಮಾಚಾರ

ರಾಜರಥ ಸಿನಿಮಾ ನೋಡಿ ನಿರ್ದೇಶಕ ಅನು ಭಂಡಾರಿಯನ್ನು ಟ್ರೋಲ್ ಮಾಡಿದವರಿಗೆ ಕ್ಲಾಸ್ ತಗೊಂಡ ರಕ್ಷಿತ್ ಶೆಟ್ಟಿ

ರಂಗಿತರಂಗದ ಭರ್ಜರಿ ಯಶಸ್ಸಿನ ನಂತರ ಭಂಡಾರಿ ಬ್ರದರ್ಸ್ ಮತ್ತೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದರು ಬಹು ನಿರೀಕ್ಷೆಯನ್ನು ಹುಟ್ಟಿಸಿದ ರಾಜರಥ ಚಿತ್ರ ವಿ ವಿಮರ್ಶಕರನ್ನು ಹಾಗೂ ಚಿತ್ರ ವೀಕ್ಷಕರನ್ನು ಮನರಂಜಿಸುವಲ್ಲಿ ಕೊಂಚ ಎಡವಿತ್ತು ಈ ಚಿತ್ರವನ್ನು ನೋಡಿಕೊಂಡು ಬಂದ ರಕ್ಷಿತ್ ಶೆಟ್ಟಿ ಈ ಚಿತ್ರದ ಬಗ್ಗೆ ತಮ್ಮ ವಿಮರ್ಶೆ ಬರೆದಿದ್ದಾರೆ.

 

 

ವಿಮರ್ಶೆಯ ಒಕ್ಕಣೆ ಹೀಗಿದೆ ಮುಂದೆ ಓದಿ ನೋಡಿ

ಕಡತ ರಾತ್ರಿ ರಾಜನಾಥ್ ಸಿನಿಮಾವನ್ನು ವೀಕ್ಷಿಸಿದ ಈ ಪೋಸ್ಟ್ ನಿಂದ ಅನೇಕ ನಕಾರಾತ್ಮಕ ಕಮೆಂಟ್ಗಳು ಬರಬಹುದು ಎಂದು ನಾನು ಈಗಾಗಲೇ ನಿರೀಕ್ಷೆ ಮಾಡಿದ್ದೇನೆ ಆದರೆ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ನಾನು ಏನನ್ನೂ ಹೇಳಬಯಸುತ್ತೇನೆ ಅದನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಈ ಚಿತ್ರವನ್ನು ಮೆಚ್ಚಿಕೊಂಡಿದ್ದೇನೆ ಅದರಲ್ಲಿರುವ ಎಲ್ಲ ಲೋಪದೋಷಗಳನ್ನು ಹೊರತುಪಡಿಸಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ನಿರ್ದೇಶಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ರೀತಿಯನ್ನು ನಾನು ಮೆಚ್ಚಿಕೊಳ್ಳುತ್ತೇನೆ

ಚಿತ್ರದ ಬಗ್ಗೆ ಅನೇಕ ನಕಾರಾತ್ಮಕ ವಿಮರ್ಶೆಗಳು ಬಂದಿದ್ದವು ಆದ್ದರಿಂದ ನಾನು ಚಿತ್ರದಲ್ಲಿನ ಲೋಪ ದೇಶಗಳು ಏನು ಎಂದು ಕಂಡು ಹಿಡೀತಾ ಕೂತೇ ಏಕೆಂದರೆ ನಾನೊಬ್ಬ ಸಿನಿಮಾ ವಿದ್ಯಾರ್ಥಿ ನನಗೆ ಸಿನಿಮಾದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ

 

ಚಿತ್ರ ನಿಮ್ಮನ್ನು ರಂಜಿಸಲು ವಿಫಲವಾಗಿದೆ ಅಥವಾ ನೀವೇನು ಬಯಸಿದ್ದರೋ ಅದನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಒಬ್ಬ ಪ್ರತಿಭಾವಂತ ನಿರ್ದೇಶಕನನ್ನು ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದು ಅಥವಾ ಕೆಟ್ಟದಾಗಿ ಮಾತನಾಡುವುದು ಒಳ್ಳೆಯದಲ್ಲ ಅನು ಅವರಿಗೆ ಹಾಲಿವುಡ್ ನಿಂದಲೂ ಸಹ ಅನೇಕ ಆಫರ್ಗಳು ಬಂದಿದ್ದವು ಆದರೆ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಬೇಕು ಎಂಬ ಕಾರಣಕ್ಕೆ ಅವರು ಇಲ್ಲೇ ಉಳಿದು ಕೊಂಡರು ಹೀಗಿರುವಾಗ ಕನ್ನಡ ಚಿತ್ರರಂಗವನ್ನು ಬೆಳೆಸಲು ಕನ್ನಡ ಪ್ರೇಕ್ಷಕರಿಂದ ಮಾತ್ರ ಸಾಧ್ಯ ಆದ್ದರಿಂದ ಅವರ ಈ ಸಂದರ್ಭದಲ್ಲೂ ನಾವು ಅವರ ಜೊತೆ ನಿಲ್ಲಬೇಕು

ಒಂದು ವರ್ಷ ತಮ್ಮ ಎಲ್ಲ ಶ್ರಮವನ್ನು ಒಟ್ಟಿಗೆ ಕೂಡಿ ಹಾಕಿ ಅದ್ಭುತ ಕಲ್ಪನೆಯೊಂದಿಗೆ ಒಂದು ಸಿನಿಮಾವನ್ನು ಮಾಡಿದ್ದಾರೆ ಅದು ನನ್ನ ಆಪ್ತ ಮಿತ್ರರಲ್ಲ ನಾನು ಅವರನ್ನು ಹತ್ತು ಬಾರಿ ಭೇಟಿ ಮಾಡಿರಬಹುದು ಅಷ್ಟೇ ಆದರೆ ಅವರ ಸಿನಿಮಾದ ಪರ ಕಾಳಜಿಗೆ ನಾನು ಮೆಚ್ಚುತ್ತೇನೆ ಅವರನ್ನು.

 

 

ಒಂದು ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ ಆದರೆ ರಿವ್ಯೂ ಬರೆಯಲು ಕೇವಲ ನಮಗೆ ಹತ್ತು ನಿಮಿಷ ಸಾಕು ನಾನು ಅನೂಪ್ ಅವರ ಸಿನಿಮಾ ಪರ ಕಾಳಜಿ ಹಾಗೂ ಅವರ ಪ್ರತಿಭೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top