fbpx
ಭವಿಷ್ಯ

ಈ 6 ರಾಶಿಯವರು ದೇವರಂತಹ ಮನಸ್ಸು ಇರೋರು ಮತ್ತೆ ನಿಸ್ವಾರ್ಥಿಗಳು ,ಅವರಿಗಿಲ್ಲ ಅಂದ್ರು ಬೇರೆಯವರಿಗೆ ಸಹಾಯ ಮಾಡೋ ದೊಡ್ಡ ಗುಣ ಇವರದ್ದು

ಈ ಆರು ರಾಶಿಯವರಲ್ಲಿ ದೇವರಂತಹ ಮನಸ್ಸು ಇರುತ್ತದೆ ಹಾಗೂ ನಿಸ್ವಾರ್ಥ ಮನೋಭಾವನೆಯನ್ನು ಹೊಂದಿದವರು ಆಗಿರುತ್ತಾರೆ.

 

 

ಕೆಲವು ಕೆಲಸಗಳನ್ನು ನಿರ್ವಹಿಸುವಾಗ ನಾವು ಆ ಕೆಲಸದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುತ್ತೇವೆ ಅಥವಾ ಅಗತ್ಯಕ್ಕೂ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಯಾವುದೇ ಕೆಲಸವನ್ನು ನಿಸ್ವಾರ್ಥವಾಗಿ ನಿರ್ವಹಿಸುವುದು ಕೆಲವು ರಾಶಿಯವರ ಅಂತರ್ಗತ ಗುಣ ಲಕ್ಷಣವಾಗಿದೆ. ಹಾಗೂ ಈ ಲಕ್ಷಣ ಕೇವಲ ಕೆಲವೇ ಕೆಲವು ರಾಶಿಯ ವ್ಯಕ್ತಿಗಳಲ್ಲಿ ಪ್ರಮುಖ ಲಕ್ಷಣವಾಗಿರುತ್ತದೆ.  ಯಾವ ರಾಶಿಯ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

 

ಮೀನ ರಾಶಿ.

 

ಅತಿ ಹೆಚ್ಚು ನಿಸ್ವಾರ್ಥ ವ್ಯಕ್ತಿಗಳು ಮೀನ ರಾಶಿಯ ವ್ಯಕ್ತಿಗಳು. ಇವರು ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಇತರರ ಕೆಲಸ ಮಾಡಿಕೊಡುವುದರಲ್ಲಿ ಅಪಾರವಾದ ತೃಪ್ತಿಯನ್ನು ಅನುಭವಿಸುತ್ತಾರೆ. ಇವರು ತಮ್ಮ ಸಮಯವನ್ನು ಹೆಚ್ಚು ವಿನಿಯೋಗಿಸುತ್ತಾರೆ. ಇನ್ನೊಂದು ರೂಪದಲ್ಲಿ ಇವರು ಇತರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೊರಡುವ ಹುಮ್ಮಸ್ಸಿನಲ್ಲಿ ತಮ್ಮ ಕರ್ತವ್ಯಗಳನ್ನೇ ಮರೆತು ಬಿಡುತ್ತಾರೆ. ತಮ್ಮ ಸಹಾಯ ಪಡೆದವರಿಂದ ಇವರು ಧನ್ಯವಾದ ಪಡೆಯದೇ ಇದ್ದರೂ ನೆರವು ನೀಡಿದ ನೆಮ್ಮದಿ ಇವರಿಗೆ ಇರುತ್ತದೆ. ಇತರರು ಇವರ ಸಹಾಯವನ್ನು ಬೇಡಿದಾಗ ಇವರು ಇಲ್ಲ ಅಥವಾ ಆಗದು ಎಂಬ ಪದಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಇತರರ ನೆರವಿಗೆ ತಾವು ಲಭ್ಯರಾಗಿದ್ದಾರೆ ಎಂದು ತೋರ್ಪಡಿಸಿ ಕೊಳ್ಳುವುದರಲ್ಲಿ ಇವರು ಸಂತೋಷವಾಗಿ ಇರುತ್ತಾರೆ.

 

ಕಟಕ ರಾಶಿ.

 

ಈ ವ್ಯಕ್ತಿಗಳು ಅತಿ ಹೆಚ್ಚು ನಿಸ್ವಾರ್ಥಿಗಳಾಗಿರುತ್ತಾರೆ ಹಾಗೂ ಇವರ ಈ ಗುಣವನ್ನು  ಗಮನಿಸಿದ ಇತರರು ಸಹಾಯಕ್ಕಾಗಿ ಈ ವ್ಯಕ್ತಿಗಳ ಬಳಿ ಮೊದಲು ಬರುತ್ತಾರೆ. ಅದರಲ್ಲೂ ತಮ್ಮ ಪ್ರೀತಿಪಾತ್ರರ ಸಮಸ್ಯೆಗಳನ್ನು ಇವರು ತಮ್ಮ ಸ್ವಂತ ಸಮಸ್ಯೆ ಎಂಬಂತೆ ಪರಿಗಣಿಸಿ ಹಾಗೂ ಎದುರಿನವರ ಸಮಸ್ಯೆಗಳು ಪರಿಹಾರ ಆಗುವಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ವ್ಯಯಿಸುವವರಾಗಿರುತ್ತಾರೆ. ಇವರು ಸಮಸ್ಯೆ ಹೊಂದಿದ ವ್ಯಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ .

 

ಮಕರ ರಾಶಿ.

 

ಇವರು ವಿಶ್ವಾಸಾರ್ಹ ಹಾಗೂ ನಂಬಿಕಸ್ಥ ಮನೋಭಾವ ಇರುವ ಕಾರಣ ಈ ವ್ಯಕ್ತಿಗಳು ನಿಸ್ವಾರ್ಥ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಯಾವುದೇ ಸಹಾಯ ಮಾಡುವಲ್ಲಿ ಇವರು ಮುಂಚೂಣಿಯಲ್ಲಿ ಇರುತ್ತಾರೆ. ಇವರು ಸುಳ್ಳು ಸಹಾಯ ಮಾಡುವ ವಾಗ್ದಾನವನ್ನು ಎಂದೂ ನೀಡಲು ಇಷ್ಟಪಡುವುದಿಲ್ಲ. ಇತರರಿಗೆ ನೆರವಾಗುವ ನಿಟ್ಟಿನಲ್ಲಿ ಇವರು ತಮ್ಮ ಜೀವನವನ್ನು ಸ್ವಲ್ಪ ಮಾರ್ಪಾಡು ಮಾಡಿಕೊಳ್ಳಲು ಹಿಂಜರಿಯುವುದಿಲ್ಲ.

 

ತುಲಾ ರಾಶಿ.

 

ಇವರಿಂದಾಗಿ ಇತರರು ನಿರಾಸೆಗೊಳ್ಳುವುದನ್ನು ಈ ವ್ಯಕ್ತಿಗಳು ಸಹಿಸುವುದಿಲ್ಲ. ಇತರರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಗಳು ಎನಿಸಿಕೊಳ್ಳಬೇಕು ಎಂದು  ಇವರು ತಮ್ಮ ಅಗತ್ಯತೆಗಳನ್ನು ತ್ಯಜಿಸುವ ಅಥವಾ ಬದಲಿಸಿಕೊಳ್ಳುವ ಮೂಲಕ ತಮ್ಮ ಆದ್ಯತೆಗಳನ್ನು ಕಡೆಗಣಿಸಲು ಇವರು ಹಿಂಜರಿಯುವುದಿಲ್ಲ. ಸಾಮಾನ್ಯವಾಗಿ ಇವರು ಸಮಸ್ಯೆಗೆ ಸಿಲುಕಿದ ವ್ಯಕ್ತಿಗಳ ನೆರವಿಗೆ ಅವರ ಪರವಾಗಿ ವಾದಿಸುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಶ್ರಮಕ್ಕೆ ತಕ್ಕ ಪ್ರತಿಫಲ, ಅಥವಾ ನಾಲ್ಕು ಜನರ ನಡುವೆ ಪ್ರಶಂಸೆ ಸಿಗದೇ ಹೋದರೆ ಮಾತ್ರ ಇವರು ಹೆಚ್ಚು ವ್ಯಾಕುಲತೆಯನ್ನು ಅನುಭವಿಸುತ್ತಾರೆ. ಗುಟ್ಟನ್ನು ಕಾಪಾಡಿಕೊಳ್ಳುವವರಾಗಿದ್ದು, ತಮಗೆ ಕಷ್ಟವಾದರೂ ಸರಿ ಗುಟ್ಟನ್ನು ರಟ್ಟು ಮಾಡದೇ ಇರುವ ವ್ಯಕ್ತಿಗಳಾಗಿದ್ದಾರೆ.

 

ಕನ್ಯಾ ರಾಶಿ.

 

ತಮ್ಮ ಸುತ್ತಮುತ್ತ ಸಂಭವಿಸುವ ಯಾವುದೇ ತೊಂದರೆ, ತಪ್ಪುಗಳು ಅಥವಾ ಯಾವುದೂ ಕೂಡ ಸಂಭವಿಸಬಾರದು. ಅಂತಹ ತಪ್ಪುಗಳು ಏನಾದರೂ ಒಂದು ವೇಳೆ ಸಂಭವಿಸಿದರೆ ಇವರು ಅದಕ್ಕೆ ತಮ್ಮನ್ನೆ ತಾವು ಜವಾಬ್ದಾರಿ ಎಂದು ಭಾವಿಸುತ್ತಾರೆ. ಅಲ್ಲದೆ ಇವುಗಳನ್ನು ತಾವೇ ಸರಿಪಡಿಸಬೇಕು ಎಂದು ಬಲವಂತವಾಗಿ ತಾವೇ ಮುಂದೆ ಬರುತ್ತಾರೆ. ಈ ತಪ್ಪುಗಳಿಗೂ ಇವರಿಗೂ ಸಂಬಂಧ ಇಲ್ಲದೇ ಇದ್ದರೂ ಸರಿ, ಇವರು ತಮ್ಮನ್ನೇ ಗುರಿಯಾಗಿ ಇರಿಸಿಕೊಂಡು  ದುಃಖಿಸುವವರಾಗಿರುತ್ತಾರೆ. ಇತರರಿಗೆ ನೀಡುವ ಯಾವುದೇ ಸಹಾಯಕ್ಕೆ ಬದಲಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ತಮ್ಮ ಸಹಾಯವನ್ನು ಕನಿಷ್ಠ ಪಕ್ಷ ಬೇರೆಯವರು ಗುರುತಿಸಬೇಕು ಎಂದು ಆಸೆ ಪಡುತ್ತಾರೆ.

 

ಕುಂಭ ರಾಶಿ .

 

ಒಂದು ವೇಳೆ ತಮ್ಮ ಸಹಾಯ ಅಗತ್ಯ ಹಾಗೂ ಸೂಕ್ತ ಎಂದು ಅವರಿಗೆ ಅನಿಸಿದರೆ, ಆ ಸಹಾಯ ನೀಡಲು ಇವರು ಎಂದೂ ಹಿಂಜರಿಯುವುದಿಲ್ಲ. ಬೇರೆಯವರನ್ನು ಸಂತೋಷ ಪಡಿಸಲು ಇವರು ತಮ್ಮ ಹಾದಿಯನ್ನೇ ಸ್ವಲ್ಪ ಬದಲಿಸಿ ಕೊಳ್ಳುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಇನ್ನೊಂದು ಕಡೆ ಇವರು ಧನಾತ್ಮಕ ಬದಲಾವಣೆಗಾಗಿ ಹೋರಾಡುವವರು ಹಾಗೂ ಸಮಾಜದಲ್ಲಿ ಏನಾದರೂ ಒಳ್ಳೆಯದಾಗುತ್ತದೆ ಎಂದರೆ ನಿಸ್ವಾರ್ಥ ಭಾವನೆಯಿಂದ ಕೆಲಸ ಮಾಡುವವರು ಆಗಿರುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇವರು ಮಾನವತಾವಾದಿಗಳು ಹಾಗೂ ಉತ್ತಮ ವಕೀಲರು ಆಗಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top