fbpx
ಸಮಾಚಾರ

ಒಬ್ಬನನ್ನೇ ಮದುವೆಯಾಗಲು ಮೂವರು ಯುವತಿಯರು ಪೊಲೀಸ್ ಠಾಣೆಯಲ್ಲಿ ಕಿತ್ತಾಟ

ಯುವಕನೊಬ್ಬನನ್ನು ಮದುವೆಯಾಗಲೇಬೇಕೆಂದು ಪೊಲೀಸ್ ಠಾಣೆಯಲ್ಲೇ ಮೂರೂ ಜನ ಯುವತಿಯರು ಪೋಲೀಸರ ಎದುರಿಗೆ ಕಿತ್ತಾಡಿದಿರುವ ಘಟನೆ ಉತ್ತರಪ್ರದೇಶದ ರಾಜ್ಯ ಗೌತಮ್‍ಬುದ್ ನಗರದಲ್ಲಿ ನಡೆದಿದೆ.

 

 

ನೊಯ್ಡಾದ ಠಾಣೆ ಸೆಕ್ಟರ್-24ರಲ್ಲಿ ಯುವತಿಯರು ಈ ಡ್ರಾಮಾ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಯುವತಿ ಒಬಾಳು ತನ್ನ ಕೈ ಕೂಡ ಕಟ್ ಮಾಡಲು ಪ್ರಯತ್ನ ಮಾಡಿದ್ದಾಳೆ. ಪೊಲೀಸರು ಸದ್ಯ ಯುವಕನನ್ನು ಬಂದಿದ್ದಾರೆ.

ಅಷಕ್ಕು ನಡೆದಿದ್ದೇನು:

ಯುವಕ ಮುಲ್‍ರೂಪದ ಬುಲಂದ್‍ನಗರದಲ್ಲಿರುವ ಹಳ್ಳಿವನಾಗಿದ್ದು, ಸಮೀಪದ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವಕ ಮೊದಲು ತನ್ನ ಹಳ್ಳಿಯ ಯುವತಿಯನ್ನು ಪ್ರೀತಿ ಮಾಡಿದ್ದ. ಯುವಕ ಕೆಲಸಕ್ಕಾಗಿ ಬುಲಂದ್‍ನಗರಕ್ಕೆ ಬಂದ ಬಳಿಕ ಅಲ್ಲಿ ಮತ್ತೊಬ್ಬಳನ್ನು ಪ್ರೀತಿಸಲು ಶುರು ಮಾಡಿದ. ನಂತರ ಇಬ್ಬರು 7 ವರ್ಷ ಒಟ್ಟಾಗಿ ಸುತ್ತಾಡಿ ಲಿವ್-ಇನ್ ರಿಲೇಶನ್‍ನಲ್ಲಿದ್ದರು ಎಂದು ತಿಳಿದು ಬಂದಿದೆ. ಈತನ ಎರಡನೇ ಪ್ರೇಯಸಿ ಇವನಿಗೆ ತನ್ನ ಗೆಳತಿಯನ್ನು ಪರಿಚಯ ಮಾಡಿಕೊಟ್ಟಿದ್ದಳು. ಅವಳನ್ನು ಕೂಡ ಈತ ಬುಟ್ಟಿಗೆ ಹಾಕಿಕೊಂಡು ಪ್ರೀತಿ ಮಾಡಲು ಶುರು ಮಾಡಿದ.

 

 

ಯುವಕನ ಸ್ನೇಹಿತ ಆತನ ಕಳ್ಳಾಟದ ಬಗ್ಗೆ ಯುವತಿಯರಿಗೆ ಮಾಹಿತಿ ನೀಡಿದ್ದಾನೆ. ಈಗ ಯುವತಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಮೂವರು ಯುವತಿಯರು ಠಾಣೆಯಲ್ಲಿ ಕಿತ್ತಾಡಿದ್ದಾರೆ. ಪೊಲೀಸರು ಈಗ ಯುವಕನನ್ನು ಬಂಧಿಸಿದ್ದಾರೆ. ಈಗ ಯುವತಿಯರು ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top