fbpx
ಸಮಾಚಾರ

ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಗಳಗಳನೆ ಅತ್ತ ಸ್ಮಿತ್ ಹಾಗು ವಾರ್ನರ್

ಚೆಂಡು ವಿರೂಪಗೊಳಿಸಿದ ಮೋಸದಾಟದಲ್ಲಿ ಸಿಕ್ಕಿ ಬಿದ್ದಿರುವ ಸ್ಟೀವ್ ಸ್ಮಿತ್ ಹಾಗು ಡೇವಿಡ್ ವಾರ್ನರ್ ಪ್ರತಿಕಾಗೋಷ್ಠಿಯಲ್ಲಿ ತೀವ್ರ ಭಾವುಕರಾಗಿ ಕಂಡುಬಂದರು. ಇಬ್ಬರು ಬೇರೆ ಬೇರೆ ದಿನ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಗಳಗಳನೆ ಅತ್ತು ತಪ್ಪಿಗೆ ಕ್ಷಮೆ ಕೇಳಿದ್ದಾರೆ.

 

 

ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹಲವು ಬಾರಿ ಬಿಕ್ಕಿ ಬಿಕ್ಕಿ ಅತ್ತ ಸ್ಟೀವ್ ಸ್ಮಿತ್, ತಾವು ಮಾಡಿರುವ ತಪ್ಪಿಗಾಗಿ ಕ್ಷಮೆಯಾಚಿಸಿದರು. ಅಲ್ಲದೆ ಇದು ತಮ್ಮ ನಾಯಕತ್ವದ ವೈಫಲ್ಯ ಎಂದು ತಪ್ಪನ್ನು ಒಪ್ಪೊಕೊಂಡಿದ್ದಾರೆ.

 

 

ಸ್ಟೀವ್ ಸ್ಮಿತ್ ಪತ್ರಿಕಾ ಘೋಷ್ಠಿಯಲ್ಲಿ ಅಭಿಮಾನಿಗಳ ಕ್ಷಮೆ ಕೇಳಿದ ಬಳಿಕ. ಈಗ ವಾರ್ನರ್ ಕೂಡ ಕ್ಷಮೆ ಕೇಳಿದ್ದಾರೆ ಹಾಗು ನಿವೃತ್ತಿ ಘೋಷಿದ್ದರೆ ಎಂದು ತಿಳಿದು ಬಂದಿದೆ. ನಾನು ಇನ್ನು ಮುಂದೆ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಆಸಿಸ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇಬ್ಬಗೆ ಮಾತನಾಡಿರುವ ಅವರು ಈ ಘಟನೆ ಹೇಗೆ ನಡೆಯಿತು, ವ್ಯಕ್ತಿಯಾಗಿ ನಾನು ಯಾರು ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಕಂಡುಕೊಳ್ಳುತ್ತೇನೆ. ನನ್ನಲ್ಲಿ ಅಗತ್ಯ ಬದಲಾವಣೆಗಾಗಿ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

 

 

ಪಂದ್ಯ ಗೆಲ್ಲಿರುವುದು ಅಷ್ಟೇ ನನಗೆ ಮುಖ್ಯವಾಗಿತ್ತು. ಇದರಿಂದ ಈ ನಿರ್ಧಾರ ಮಾಡಿದೆ. ಇದರಿಂದಾಗುವ ವ್ಯತಿರಿಕ್ತ ಪರಿಣಾಮ ತಿಳಿದುಕೊಳ್ಳಲಿಲ್ಲ. ಈ ಬಗ್ಗೆ ನನ್ನ ಜೀವನದುದ್ದಕ್ಕೂ ಕೊರಗು ಕಾಡುತ್ತದೆ. ಪ್ರಕರಣದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ನಾನು ಬಲಿಪಶುವಾದೆನು ಅನಿಸುತ್ತಿದೆ. ನನ್ನ ದೇಶಕ್ಕೆ ಜಯ ತರಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೂ ಇಡೀ ಪ್ರಕರಣದ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top