fbpx
ಸಮಾಚಾರ

ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ 300ರೂ. ಮತ್ತು ಸಂದೇಶ ಕಂಡು ಕಕ್ಕಾಬಿಕ್ಕಿಯಾದ ಮೌಲ್ಯ ಮಾಪಕ

ಪರೀಕ್ಷೆ ಬಂತು ಎಂದ್ರೆ ಸಾಕು ವಿದ್ಯಾರ್ಥಿಗಳಿಗೆ ಭಯ ಶುರು ಆಗುತ್ತೆ. ಇದೆ ಕಾರಣಕ್ಕೆ ಕೆಲವೇ ವಿದ್ಯಾರ್ಥಿಗಳೇ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ವಿವಿಧ ಬೇಡಿಕೆ ಇಡುವುದು ರೂಢಿಯಲ್ಲಿದೆ. ಮೌಲ್ಯ ಮಾಪರಿಗೆ ವಿಶೇಷವಾಗಿ ಮನವಿ ಮಾಡಿರುವ ಘಟನೆಗಳು ಕೂಡ ನಡೆದಿದೆ. ಅಂತಹದೇ ಒಂದು ವಿವಿಧ ಘಟನೆಗಳು ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿದೆ.

 

 

ಉತ್ತರ ಪ್ರದೇಶ ರಾಜ್ಯದ ಹೈಸ್ಕೂಲ್ ವಿದ್ಯಾರ್ಥಿಗಳು ವಿಚಿತ್ರ ವಾಗಿ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಓದಿದ ಮೌಲ್ಯಮಾಪಕು ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ. ಹೌದು ಆ ಹುಡುಗ ಎಂದು ಬರೆದಿದ್ದ ಎಂದು ನೀವು ಯೋಚನೆ ಮಾಡುತ್ತಿದ್ದರ ಹಾಗಾದ್ರೆ ಮುಂದೆ ಓದಿ.

 

 

 

ನಿಮ್ಮ ಮಗಳ ಜೊತೆಗೆ ಇರುವ ಪ್ರೇಮ್ ಸಂಭಂದದಿಂದ ನಾನು ಸರಿಯಾಗಿ ಓದಲು ಸಾಧ್ಯವಾಗಿಲ್ಲ. ನನ್ನ ಪಾಸ್ ಮಾಡಿ ಎಂದು ಮೌಲ್ಯ ಮಾಪಕರಿಗೆ ಮನವಿ ಮಾಡಿಕೊಂಡಿದ್ದ. ಇದನ್ನು ನೋಡಿದ ಮೌಲ್ಯ ಮಾಪಕರು ಕಕ್ಕಾ ಬಿಕ್ಕಿಯಾದರು.

 

ಇನ್ನೊಬ್ಬ ವಿದ್ಯಾರ್ಥಿ ಕೂಡ ತನ್ನ ದಯಮಾಡಿ ಪಾಸ್ ಮಾಡಿ ಎಂದು ಉತ್ತರ ಪತ್ರಿಕೆಯಲ್ಲಿ 300 ರೂಪಾಯಿ ಇಟ್ಟಿದ್ದ ಎಂದು ತಿಳಿದು ಬಂದಿದೆ. ಇನ್ನು ಕೆಲವರು ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಿರುವುದು ನಾವು ಫೇಲ್ ಆಗಲು ಕಾರಣ ಎಂದು ಉತ್ತರ ಪತ್ರಿಕೆಯಲ್ಲಿ ಅಲವತ್ತುಕೊಂಡಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಕವನ ಬರೆಯುವುದರ ಮೂಲಕ ಪಾಸ್ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top