fbpx
ಸಿನಿಮಾ

ನಟಿಯರನ್ನು ಮಂಚಕ್ಕೆ ಕರೆಯುವ ಚಿತ್ರರಂಗ ಈ ವಿಷಯದ ಬಗ್ಗೆ ಇಬ್ಬರು ನಟಿಯರ ಜಟಾಪಟಿ

ಈ ಹಿಂದೆ ತೆಲುಗಿನ ಉದಯೋನ್ಮುಖ ನಟಿ ಶ್ರೀ ರೆಡ್ಡಿ ಹಾಗೂ ಮಾಧವಿ ಲತಾ ಎನ್ನುವ ಇಬ್ಬರು ನಟಿಯರು ,ನಟಿಯರನ್ನು ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಗೆ ಆಹ್ವಾನ ನೀಡುತ್ತಾರೆ ಎಂಬುದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು ಅದರಲ್ಲೂ ಶ್ರೀ ರೆಡ್ಡಿ ತೆಲುಗಿನ ಹುಡುಗಿಯರಿಗೆ ಅವಕಾಶಗಳು ತೆಲುಗು ಚಿತ್ರರಂಗದ ಲ್ಲಿಲ್ಲ ಬದಲಾಗಿ ತಮಿಳು ಕನ್ನಡ ಹಾಗೂ ಹಿಂದಿ ನಟಿಯರಿಗೆ ತಾವು ಹೇಳಿದ ಹಾಗೆ ಬಳಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಅವಕಾಶ ನೀಡುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

 

 

ಇದಾದ ಬಳಿಕ ಮಾಧವಿ ಲತಾ ಎನ್ನುವ ಇನ್ನೊಬ್ಬ ನಟಿ ಕೂಡ ತಾವು ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತಕ್ಕೆ ಸಿಕ್ಕಿದ್ದೆವು ಎಂದು ಹೇಳಿಕೆ ನೀಡಿದ್ದರು ಈ ವಿವಾದಾತ್ಮಕ ಹೇಳಿಕೆಗೆ ತೆಲುಗು ಚಿತ್ರರಂಗದ ಸಾಕಷ್ಟು ಕಲಾವಿದರು ವಿರೋಧ ವ್ಯಕ್ತಪಡಿಸಿದ್ದು ತೆಲುಗು ಚಿತ್ರರಂಗ ಒಳ್ಳೆಯದೇ ಈ ನಟಿಯರು ಸುಖಾಸುಮ್ಮನೇ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ ಎಂದು ತಿರುಗೇಟು ನೀಡಿದ್ದರು.

 

 

ಟಾಲಿವುಡ್ನ ಅನೇಕ ಚಿತ್ರಕಲಾವಿದರು ಇದರ ವಿರುದ್ಧ ಭಾರಿ ಪ್ರತಿಭಟನೆ ನಡೆಸಿದ್ದರು ಈ ಸಮಯದಲ್ಲಿ ಹರಿಯನ್ನು ನಟಿ ರಕುಲ್ ಪ್ರೀತ್ ಸಿಂಗ್ ಭಾಗವಹಿಸಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದರು ಮೊದಲಿಗೆ ಕನ್ನಡದ ಗಿಲ್ಲಿ ಚಿತ್ರದಿಂದ ತನ್ನ ಸಿನಿಪಯಣವನ್ನು ಶುರು ಮಾಡಿದ ರಕುಲ್ ಪ್ರೀತ್ ಸಿಂಗ್ “ನಾವು ಎಲ್ಲೇ ಹೋದರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾಧ್ಯಮದವರು ನಮ್ಮನ್ನು ಪ್ರಶ್ನೆ ಕೇಳುತ್ತಾರೆ ಆದರೆ ನಾನು ಯಾವತ್ತೂ ಇದರ ಅನುಭವವನ್ನು ಪಡೆದಿಲ್ಲ ತೆಲುಗು ಚಿತ್ರರಂಗ ಬಹಳ ಒಳ್ಳೆಯದು ಇಲ್ಲಿ ಸಭ್ಯಸ್ಥರು ಕೆಲಸ ಮಾಡುತ್ತಾರೆ ನಾನು ಐದು ವರ್ಷಗಳಾಗಿದೆ ಇಲ್ಲಿ ಬಂದು ಆದರೂ ನನಗೆ ಯಾವತ್ತಾದರೂ ಒಂದು ದಿನವಾದರೂ ಕೆಟ್ಟ ಅನುಭವವಾಗಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

 

 

ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ನಟಿ ಮಾಧವಿ “ರಕುಲ್ ಪ್ರೀತ್ ಸಿಂಗ್ ಬಹಳ ಸುಳ್ಳು ಹೇಳುತ್ತಿದ್ದಾರೆ ಹೆಣ್ಣನ್ನು ಚಿತ್ರರಂಗದಲ್ಲಿ ತೆಲುಗು ಎಂದೇ ಅಲ್ಲ ಎಲ್ಲಾ ಚಿತ್ರರಂಗದಲ್ಲೂ ಕೀಳಾಗಿ ನೋಡುತ್ತಾರೆ ಇದಕ್ಕೆ ಟಾಲಿವುಡ್ ಹೊರತಲ್ಲ ನಾನು ಚಿತ್ರರಂಗದಲ್ಲಿರುವ ವರೆಲ್ಲ ಕೆಟ್ಟವರೇ ಎಂದು ಹೇಳುತ್ತಿಲ್ಲ ಇಲ್ಲಿ ಒಳ್ಳೆಯವರು ಇದ್ದರೆ ಇದ್ದಾರೆ ಹಾಗಂತ ಸಂಪೂರ್ಣ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ ಎಂದು ಹೇಳಿದರೆ ನಾನು ಅದನ್ನು ಒಪ್ಪುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top