fbpx
ಆರೋಗ್ಯ

ಕಾಂಡೊಮ್ ಅಥವಾ ಗರ್ಭ ನಿರೋಧಕಗಳನ್ನು ಬಳಸದೆ ಗರ್ಭ ಉಂಟಾಗದ ಹಾಗೆ ಲೈಂಗಿಕ ಕ್ರಿಯೆ ಮಾಡುವುದು ಹೇಗೆ ತಿಳಿಯೋಣ

ಋತು ಅವಧಿ ನೋಡಿಕೊಂಡು ಕಾಂಡೊಮ್ ಅಥವಾ ಇನ್ನಾವುದೇ ಗರ್ಭ ನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ಮಾಡುವುದು ಹೇಗೆ ತಿಳಿಯೋಣ ಬನ್ನಿ .

ಋತು ಚಕ್ರದ ಅವಧಿಯು ಸಾಮಾನ್ಯವಾಗಿ 28 ದಿನಗಳಿಗೊಮ್ಮೆ ಆಗುತ್ತದೆ , ಕೆಲವರಿಗೆ 26 ದಿನಗಳಿಗೊಮ್ಮೆ ಅಥವಾ ಇನ್ನು ಬೇಗ ಅಥವಾ ಇನ್ನು ನಿಧಾನವಾಗಿ ಆಗಬಹುದು .

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ನಾವಿಲ್ಲಿ ಹೇಳ ಬಯಸುವ ವಿಷಯವೇನೆಂದರೆ ನಿಮ್ಮ ಕಳೆದ ಆರು ತಿಂಗಳ ಋತು ಚಕ್ರದ ಅವಧಿಯನ್ನು ಆಧಾರವಾಗಿ ಇಟ್ಟುಕೊಂಡು ನೀವು ಎಷ್ಟು ದಿನಕ್ಕೆ ಒಮ್ಮೆ ಋತು ವಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕು .

ಈ ಮೇಲಿನ ಚಿತ್ರವನ್ನು ಒಮ್ಮೆ ಗಮನಿಸಿ ಇಲ್ಲಿ ನಾವು ಉದಾಹರಣೆಗೆ ಸಾಮಾನ್ಯ ಆರೋಗ್ಯದ ಹೆಂಗಸೊಬ್ಬಳು 28 ದಿನಕ್ಕೆ ಒಮ್ಮೆ ಋತುವಾಗುತ್ತಾಳೆ ಎಂದು ಗಣನೆಗೆ ತೆಗೆದುಕೊಂಡ್ಡಿದ್ದೆವೆ .

ಈಗ ಆಕೆ ಮುಟ್ಟಾದ ದಿನ ನಾಲ್ಕನೇ ತಾರೀಕು ಎಂದುಕೊಳ್ಳೋಣ ಹಾಗಾದರೆ ಮತ್ತೆ ಆಕೆ ಮುಂದಿನ ಮುಟ್ಟಾಗುವುದು ಬರುವ ತಿಂಗಳು ಎರಡನೇ ತಿಂಗಳು ಅಲ್ಲವೇ ? ಏಕೆಂದರೆ ಆಕೆ ಪ್ರತಿ  28 ದಿನಕ್ಕೆ ಒಮ್ಮೆ ಋತುವಾಗುತ್ತಾಳೆ .

ಹಾಗಾದರೆ ಯಾವುದೇ ಗರ್ಭ ನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ಮಾಡುವುದು ಇದರಿಂದ ಯಾವುದೇ ಗರ್ಭ ಉಂಟಾಗಬಾರದೆಂದರೆ ಪಿರಿಯಡ್ ಅಂದರೆ ಋತುವಿನ ಮೊದಲನೇ ದಿನದಿಂದ ಹಿಡಿದು ನಂತರದ ಏಳು ದಿನಗಳ ವರೆಗೂ ಅಂದರೆ ಮೇಲಿನ ಉದಾಹರಣೆಯಂತೆ10 ನೇ ತಾರೀಕಿನ ವರೆಗೂ ಸುರಕ್ಷಿತ ಗರ್ಭ ನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ಮಾಡಬಹುದು .ಅದೇ 10 ನೇ ತಾರೀಕಿನಿಂದ 22 ನೇ ತಾರೀಕಿನವರೆಗೂ ಅಂದರೆ 12 ದಿನಗಳು ಗರ್ಭ ನಿರೋಧಕ ಇಲ್ಲದೆ ಸಂಭೋಗ ಮಾಡುವಂತಿಲ್ಲ .
ಮತ್ತೆ 23 ನೇ ತಾರೀಕಿನಿಂದ 2 ನೇ ತಾರೀಕಿನವರೆಗೂ ಅಂದರೆ 9 ದಿನಗಳು ಗರ್ಭ ನಿರೋಧಕ ಇಲ್ಲದೆ ಸಂಭೋಗ ಮಾಡಬಹುದು ಇದರಿಂದ ಗರ್ಭ ಧರಿಸುವ ಸಂಭವ ಬಹಳ ಕಡಿಮೆ .

ಆದರೆ ಮೊದಲೇ ಹೇಳಿದ ಹಾಗೆ ನಿಮ್ಮ ಋತು ಅವಧಿಯ ಆರು ತಿಂಗಳು ಎಷ್ಟು ದಿನಕ್ಕೆ ಒಮ್ಮೆ ಮುಟ್ಟಾಗುತ್ತಿರ ಎಂದು ನೋಡಿಕೊಂಡು ಅದರ ಪ್ರಕಾರ ಈ ವಿಧಾನ ಅಳವಡಿಸಿಕೊಳ್ಳಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top