fbpx
ಸಮಾಚಾರ

ರಾಮನ ತಂದೆ ದಶರಥ ಮಹಾರಾಜನು ಮರಣ ಹೊಂದುವಾಗ ಅವನ ಅಂತ್ಯಕಾಲ ಹೇಗಿತ್ತು , ಅಷ್ಟು ಘೋರ ಸಾವನ್ನು ಹೇಗೆ ತಂದುಕೊಂಡ ಗೊತ್ತಾ

ಸುಮಂತ್ರ ಮೊದಲಾದವರು ಶ್ರೀರಾಮನು ಹಿಂತಿರುಗಿ ಅಯೋಧ್ಯೆಗೆ ಹೋಗಲು ಹೇಳಿದ್ದರಿಂದಾಗಿ, ದಶರಥ ರಾಜನಿಗೆ ರಾಮನ ವನವಾಸದ ಬಗ್ಗೆ ತಿಳಿಸಲು ಬಂದಾಗ ಅಯೋಧ್ಯೆಯಲ್ಲಿ ಶಾಂತವಾದ ಪರಿಸ್ಥಿತಿ ಇತ್ತು. ಕೆಲವರು ರಾಮನ ಗುಣಗಳನ್ನು ಹೊಗಳುತ್ತಿದ್ದರೆ. ಇನ್ನೂ ಕೆಲವರು ದಶರಥ ಕೈಕೇಯಿಯರನ್ನು ನಿಂದಿಸುತ್ತಿದ್ದರು. ರಾಜಕುಮಾರರು ವನದಲ್ಲಿ ಹೇಗೆ ಕಾಲ ಕಳೆಯುವರೆಂದು ಜನರು ಪರಿಪರಿಯಿಂದ ಆಲೋಚಿಸುತ್ತಿದ್ದರು.

 

 

ದಶರಥನು ಅತ್ಯಂತ ದುಃಖಿತನಾಗಿ ಇದ್ದನು , ಅದರಿಂದಾಗಿ ಅವನ ಅಂತ್ಯ ಸಮೀಪ ಬಂದಂತೆ ಅನಿಸುತ್ತಿತ್ತು. ಈ ಸಮಯದಲ್ಲಿ ಸುಮಂತ್ರನು ರಾಮ ಲಕ್ಷ್ಮಣರ ಬಗ್ಗೆ ತಿಳಿಸುವುದಕ್ಕಿಂತ ಮೊದಲೇ ಭಾವಾತಿರೇಕದಿಂದ ಪರಿಪರಿಯಾಗಿ ದಶರಥನು ಪ್ರಶ್ನೆ ಮಾಡಿದನು.

 

 

ಸುಮಂತ್ರನನ್ನು ದಶರಥನು ಕೇಳಿದನು. ನನ್ನ ಮಕ್ಕಳು ಈಗ ಎಲ್ಲಿದ್ದಾರೆ ? ಅವರ ಆಹಾರ ಏನು ? ಯಾವ ವನದಲ್ಲಿ ಇದ್ದಾರೆ ? ಅವರಿಗೆ ರಕ್ಷಣೆ ಯಾವ ರೀತಿಯಲ್ಲಿ ಇದೆ ? ಚಳಿ, ಬಿಸಿಲು, ಗಾಳಿ ಮಳೆಗೆಲ್ಲ ಏನು ಮಾಡುತ್ತಾರೆ ? ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆಯುವಾಗ ತೊಂದರೆ ಆಗಲಿಲ್ಲವೇ ? ಸುಖ, ಸಂತಸದಲ್ಲಿ ಇರುವವರನ್ನು ನಾನು ಕಾಡಿಗೆ ಅಟ್ಟಿದೆ ಎಂದು ದುಃಖಿಸಿದಾಗ ಸುಮಂತ್ರನು ಈ ರೀತಿ ಉತ್ತರಿಸಿದನು.
“ಮಹಾರಾಜ, ನಿನ್ನ ಮಕ್ಕಳು ಸೌಖ್ಯವಾಗಿಯೇ ಇದ್ದಾರೆ. ಗಂಗಾ ನದಿಯನ್ನು ದಾಟಿ ಭಾರಧ್ವಜ ಆಶ್ರಮದ ಸಮೀಪದಲ್ಲಿ, ಚಿತ್ರಕೂಟ ಪರ್ವತದಲ್ಲಿ ವಾಸ ಮಾಡಿದ್ದಾರೆ .ಭಾರಧ್ವಜರೇ ಅವರಿಗೆ ಆ ಸ್ಥಳದಲ್ಲಿ ಉಳಿಯಲು ತಿಳಿಸಿದ್ದಾರೆ. ಪುರ ಜನರನ್ನು ಕಳಿಸಿದ ನಂತರದಲ್ಲಿ ಗುಹನ ಆತಿಥ್ಯ ಪಡೆದು ಮುಂದೆ ಸಾಗಿದರು, ಎಂದು ಸುಮಂತ್ರನು ವಿವರಿಸಿದನು.

 

 

ಅಲ್ಲದೆ ಚಿಕ್ಕವರು ಇರುವಾಗಲೇ ಮಹರ್ಷಿ ವಿಶ್ವಾಮಿತ್ರರೊಂದಿಗೆ ಕಾಡಿನಲ್ಲಿ ಸಂಚರಿಸಿದ್ದರು. ಸೀತೆಯೂ ಸಹ ಸಂತಸದಿಂದ ಇದ್ದಾಳೆ. ರಾಮನು ಎಲ್ಲರಿಗೂ ನಮನ ಸಲ್ಲಿಸಿದ್ದಾನೆ. ಭರತನಿಗೆ ಸುಖವಾಗಿ ರಾಜ್ಯವಾಳಲು, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಲು ತಿಳಿಸಿದ್ದಾನೆ. ನೀವು ಮೂವರ ಬಗ್ಗೆ ಆಲೋಚಿಸಿ ಚಿಂತೆ ಮಾಡಿಕೊಳ್ಳಬೇಡಿರಿ, ಎಂದರೂ ಸುಮಂತ್ರನ ಮಾತು ಕೇಳಿದ ದಶರಥ ಕೌಸಲ್ಯೆಯರಿಗೆ ದುಃಖ ಹೆಚ್ಚಾಗಿ ದಶರಥನು ಮೂರ್ಛೆ ಹೊಂದಿದನು.

 

 

ಕೌಸಲ್ಯೆ ನಾನು ಪುತ್ರ ಶೋಕದಲ್ಲಿಯೇ ಸಾಯಬೇಕೆಂದು ನನಗೆ ಶಾಪವಿದೆ. ನಾನಿನ್ನೂ ಹೆಚ್ಚು ಕಾಲ ಬದುಕುವುದಿಲ್ಲ. ಎಂದಾಗ ಕೌಸಲ್ಯೆ “ನಿಮಗೆಂತ ಶಾಪ, ಭಾವಾತಿರೇಕದಿಂದ ಏನೇನೋ ಮಾತನಾಡಬೇಡಿರಿ , ಎಂದು ಸಮಾಧಾನ ಪಡಿಸಿದಾಗ, ದಶರಥನು ತಾನು ಹಿಂದೆ ಶಾಪ ಪಡೆದ ಸಂಗತಿಯನ್ನು ಈ ಸಂದರ್ಭದಲ್ಲಿ ವಿವರವಾಗಿ ತಿಳಿಸಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top