fbpx
ಮನೋರಂಜನೆ

ಪುನೀತ್ ‘ನಟಸಾರ್ವಭೌಮ’ ರಿಮೇಕಾ? ಇಲ್ಲಿದೆ ಉತ್ತರ.

ಪ್ರೇಕ್ಷಕ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರೋ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ನಾನಾ ರೀತಿಯಲ್ಲಿ ಸುದ್ದಿಯಲ್ಲಿದೆ. ಕೆಲ ಮಂದಿ ಈ ಟೈಟಲ್ ಅನ್ನು ಸಿನಿಮಾ ಆಗಿಸಿದ್ದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದರು, ಕೆಲವರು ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎಂದು ಆಯ್ಕೆ ಮಾಡಿದ್ದಾಗ ರಚಿತಾಬೇಡ ಎಂದು ವಿರೋಧಿಸಿದ್ದರು. ಆದರೆ ಪುನೀತ್ ಹುಟ್ಟುಹಬ್ಬದಂದು ಟೈಟಲ್ ಲಾಂಚ್ ಮಾಡಿಕೊಂಡಿರೋ ಚಿತ್ರತಂಡ ಚಿತ್ರದ ಕೆಲಸ ಕಾರ್ಯಗಳನ್ನು ಸಾಂಘವಾಗಿ ನೆರವೇರಿಸುತ್ತಿದ್ದಾರೆ.

 

 

ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಸಾಗುತ್ತಿದ್ದು ಚಿತ್ರ ತುಂಬಾ ರಿಚ್ ಆಗಿ ತೆರೆ ಮೇಲೆ ತರಲು ಚಿತ್ರತಂಡ ಶ್ರಮಿಸುತ್ತಿದೆ. ಈ ಮಧ್ಯೆ ‘ನಟಸಾರ್ವಭೌಮ’ ಚಿತ್ರ ತೆಲುಗು ಚಿತ್ರವೊಂದರ ರಿಮೇಕ್ ಎಂಬ ಸುದ್ದಿ ಘಾಡವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು.. ಈ ಸುದ್ದಿಗಳಿಂದ ಪುನೀತ್ ಅಭಿಮಾನಿಗಳಲ್ಲಿ ಈ ಚಿತ್ರ ‘ರಿಮೇಕೋ’ ಅಥವಾ ‘ಸ್ವಮೇಕೋ’ ಎಂಬ ಗೊಂದಲ ಹುಟ್ಟುಹಾಕಿತ್ತು. ಆದರೆ ಈ ಎಲ್ಲಾ ಗೊಂದಲಗಳಿಗೆ ಈಗ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಅವರಿಂದಲೇ ಉತ್ತರ ಸಿಕ್ಕಿದೆ.

ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟಿಸಿರುವ ಪವನ್ ಒಡೆಯರ್ ನಟಸಾರ್ವಭೌಮ ಒಂದು ಸಬ್ಜೆಕ್ಟ್ ಆಗಿದ್ದು ಇದು ರಿಮೇಕ್ ಅಲ್ಲ ಪಕ್ಕ ಸ್ವಮೇಕ್ ಸಿನಿಮಾ ಎಂದು ತಿಳಿಸಿದ್ದಾರೆ. ಚಿತ್ರ ರಿಮೇಕ್ ಅಲ್ಲ ಅಂತ ನಿರ್ದೇಶಕರಿಂದಲೇ ಕನ್ಫರ್ಮ್ ಆಗಿರುವುದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

 

 

ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top