ತಿಂಡಿ ತೀರ್ಥ

ಕೊಡಗಿನ ಅಡುಗೆ ಬೆಣ್ಣೆ ಕಡುಬು ಮಾಡುವ ವಿಧಾನ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕರ್ನಾಟಕದ “ಕಾಶ್ಮೀರ” ಎನಿಸಿರುವ ಕೊಡಗು ಪ್ರಕೃತಿಯ ಸೌಂದರ್ಯಕ್ಕೆ ಮಾತ್ರ ಸೀಮಿತವಲ್ಲ, ಅಡುಗೆಯಲ್ಲು ವಿಶೇಷತೆಯನ್ನು ಹೊಂದಿದೆ. ಕೊಡಗು ಎಂದೊಡನೆ ನೆನಪಾಗುವ ಹಾಗೂ ಘಮಘಮಿಸುವ ಮೊದಲ ಅಡುಗೆ “ಬೆಣ್ಣೆ ಕಡುಬು ಹಾಗೂ ಪಂದಿ ಕರಿ”.

ಬೆಣ್ಣೆ ಕಡುಬು ಮಾಡುವ ವಿದಾನ ;

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ ತರಿ – 2 ಕಪ್
ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 4 ಕಪ್

 

ಮಾಡುವ ವಿದಾನ;

ಮೊದಲಿಗೆ ಒಂದು ಪಾತ್ರೆಯಲ್ಲಿ 4 ಕಪ್ ನೀರು ಹಾಕಿ ಕುದಿಯಲು ಬಿಡಿ, ಕುದಿಯುತ್ತಿರುವ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಕದಡಿ ನಂತರ ಅಕ್ಕಿ ತರಿಯನ್ನು ನಿದಾನವಾಗಿ ಸ್ವಲ್ಪ ಸ್ವಲ್ಪ ಹಾಕಿ ತಿರುವಬೇಕು ನಂತರ ಸಣ್ಣ ಉರಿಯಲ್ಲಿ ಹಿಟ್ಟು ಹದಕ್ಕೆ ಬರುವವರೆಗೆ ಬೆಯಲು ಬಿಡಿ,
ನಂತರ ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಕಡುಬು ಪಾತ್ರೆ(ಕಳಸಿಗೆ) ಯಲ್ಲಿ 5 ರಿಂದ 10 ನಿಮಿಷಗಳವರೆಗೆ ಬೆಯಿಸಿ. ಈಗ ರುಚಿಯಾದ”ಬೆಣ್ಣೆ ಕಡುಬು” ಸವಿಯಲು ಸಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top