fbpx
ಸಿನಿಮಾ

ಖ್ಯಾತ ಹೀರೋ ಲೈಂಗಿಕ ಕಿರುಕುಳ ನೀಡಿದ್ದನಂತೆ ಈ ನಟಿಗೆ

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ಅತಿಥಿ ಚಿತ್ರದಲ್ಲಿ ನಟನೆ ಮಾಡಿದ್ದ ಮಾಧವಿ ಲತಾ ತೆಲುಗಿನ ಖ್ಯಾತ ಆ್ಯಂಕರ್ ಕೂಡ ಈಕೆ ಸ್ನೇಹಿತುಡು ,ಹುಷಾರು ಹಾಗೂ ಇನ್ನೂ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಈಗ ಕೆಲ ವರ್ಷಗಳಿಂದ ಈಕೆ ಚಿತ್ರರಂಗದ ಕಡೆ ಮುಖ ಮಾಡಿಲ್ಲ.

 

 

ಕೇವಲ ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲ ಇಡೀ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ನಟಿಯರನ್ನು ಲೈಂಗಿಕವಾಗಿ ಹಿಂಸಿಸುವ ಪ್ರಕ್ರಿಯೆ ಇದ್ದು ಇದರ ಬಗ್ಗೆ ಕೆಲವೇ ಕೆಲವು ನಟಿಯರು ಮಾತ್ರ ಧ್ವನಿ ಎತ್ತಿದ್ದಾರೆ ಇದೀಗ ಮಾಧವಿ ಲತಾ ಕೂಡಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದು ತೆಲುಗಿನ ಖ್ಯಾತ ನಟ ಈಗ ಖ್ಯಾತಿಯ ನಾನೇ ಅವರನ್ನು ಹಿಂಸೆ ಪಡಿಸಿದ್ದಾರಂತೆ ಇದರ ಬಗ್ಗೆ ಆಕೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 

 

ಚಿತ್ರ ಚಿತ್ರೀಕರಣದ ಶೂಟಿಂಗ್ ವೇಳೆಯಲ್ಲಿ ನಾಯಕ ನಾನಿ ಮಾಧವಿ ಲತಾ ಅವರನ್ನು ಬರ ಹೇಳಲು ಹೇಳುತ್ತಾರೆ ಈ ಸಮಯದಲ್ಲಿ ಸಿಗರೇಟ್ ಸೇದುತ್ತಾ ಕುಳಿತಿದ್ದ ನಾಯಕ ಮಾಧವಿ ಯವರನ್ನು ರೂಮ್ ಒಳಗೆ ಬರುವಂತೆ ಕರೆಯುತ್ತಾರೆ ಈ ಸಮಯದಲ್ಲಿ ಒಳಗೆ ಹೋದ ಮಾಧವಿಯವರನ್ನು ಕುರಿತು ಸ್ವಲ್ಪ ಹೊತ್ತು ಮಾತನಾಡಿ ಆನಂತರ ಮಾಧವಿ ಬರ ಹೇಳಿದ್ದಕ್ಕೆ ಕಾರಣ ಏನು ಎಂದು ಕೇಳಿದ್ದಕ್ಕೆ ಸುಮ್ಮನೆ ಮಾತನಾಡೋಣ ಎಂದು ಕರೆದೆ ಎಂದರಂತೆ ನಾನಿ, ಸರಿ ನಾನು ಹೋಗುತ್ತೇನೆ ಎಂದು ಹೊರಟು ನಿಂತಾಗ ಬಾಗಿಲವರೆಗೂ ಬರುತ್ತೇನೆ ಎಂದು ಬಂದು ಆಕೆಯನ್ನು ಹಿಂದೆಯಿಂದ ಗಟ್ಟಿಯಾಗಿ ಹಿಡಿದುಕೊಂಡು ಮುತ್ತಿಡಲು ಪ್ರಯತ್ನ ಪಟ್ಟರಂತೆ ಆಗ ಕೊಸರಿಕೊಂಡು ಬಹಳ ಕಷ್ಟದಿಂದ ಆತನನ್ನು ತಳ್ಳಿ ಹೊರಟು ಹೋದರಂತೆ ಮಾಧವಿ ಇದಾದ ನಂತರ ಆತನ ಜೊತೆಗೆ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿದ್ದಾರಂತೆ.

 

 

ಹೀಗೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನಟಿ ಮಾಧವಿ ಲತಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top