fbpx
ದೇವರು

ಶ್ರೀ ಮಹಾಲಕ್ಷ್ಮೀಯನ್ನು ಒಲಿಸಿಕೊಳ್ಳಲು ಸಿರಿ ಸಂಪತ್ತು ಹೊಂದಬೇಕಾದರೆ ಈ 5 ಸೂತ್ರಗಳನ್ನು ನೀವು ತಪ್ಪದೆ ಪಾಲಿಸಲೇಬೇಕು

ಸಿರಿ ಸಂಪತ್ತು ಹೊಂದಬೇಕಾದರೆ ಶ್ರೀ ಮಹಾಲಕ್ಷ್ಮೀ ಹೇಳಿದ ಐದು ಸೂತ್ರಗಳನ್ನು ನೀವು ಪಾಲಿಸಲೇಬೇಕು.

ಶ್ರೀ ಮಹಾಲಕ್ಷ್ಮಿ ಎಲ್ಲಾ ಲೋಕಗಳಿಗೆ ಸರ್ವಮಂಗಳೆ. ಭಕ್ತರು ಕೋರಿದ ಕೋರಿಕೆಗಳನ್ನು ಈಡೇರಿಸುವ ಕಲ್ಪವಲ್ಲಿ ಆಕೆ. ಆಷ್ಟೇ ಅಲ್ಲದೆ ದಾರಿದ್ರ್ಯನಾಶಿನಿ ಕೂಡ ಹಾಗೆ ಭಾಗ್ಯಲಕ್ಷ್ಮೀಯು ಹೌದು. ಶ್ರೀ ಮಹಾಲಕ್ಷ್ಮೀ ದೇವಿಯನ್ನು ಮದುವೆಯಾಗಲು ಶ್ರೀ ಮಹಾವಿಷ್ಣುವು ಅನೇಕ ಅವತಾರಗಳನ್ನು ತಾಳಿ ಆಕೆಯನ್ನು ವರಿಸಿದನಂತೆ.

 

 

ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರನಾಗಿ ಆಕೆಯನ್ನು ಮದುವೆಯಾದ ಆದರೆ ಪೂರ್ವದಲ್ಲಿ ಒಂದಾನೊಂದು ದಿನ ಭೂ ಪ್ರಪಂಚದಲ್ಲಿ ಸಂಪೂರ್ಣವಾಗಿ ದಾರಿದ್ರ್ಯವು ತಾಂಡವ ಮಾಡುತ್ತಿತ್ತಂತೆ. ಸರ್ವರು ದಾರಿದ್ರ್ಯ ಪೀಡಿತರಾಗಿ ರೋಧಿಸುತ್ತಾ ಶ್ರೀ ಮಹಾವಿಷ್ಣುವಿನ ಬಳಿಗೆ ಹೋಗಿ ಅವರ ಕಷ್ಟಗಳಿಗೆ ದಾರಿದ್ರ್ಯಕ್ಕೆ ಉಪಾಯ ಪರಿಹಾರವನ್ನು ತಿಳಿಸಬೇಕೆಂದು ಕೋರಿದಾಗ, ಶ್ರೀ ಮಹಾವಿಷ್ಣುವು ಮಹಾಲಕ್ಷ್ಮೀ ದೇವಿಯ ಬಗ್ಗೆ ಈ ಐದು ಸೂತ್ರಗಳನ್ನು ಹೇಳಿದನಂತೆ.

 

 

ಶ್ರೀ ಮಹಾಲಕ್ಷ್ಮೀ ದೇವಿಯ ಸಂಪೂರ್ಣ ಕೃಪಾ ಕಟಾಕ್ಷ ನಮ್ಮದಾಗಬೇಕು ಎಂದರೆ ಸಿರಿ ಸಂಪತ್ತು ನಮ್ಮದಾಗಬೇಕು ಅಂದರೆ ಈ 5 ಸೂತ್ರಗಳನ್ನು ತಪ್ಪದೇ ಎಲ್ಲರೂ ಆಚರಿಸಬೇಕೆಂದು. ಇದು ನಮ್ಮ ಇಂದೂ ಧರ್ಮ, ನಮ್ಮ ಸಂಪ್ರದಾಯಗಳಲ್ಲಿ, ಶಾಸ್ತ್ರವಾಗಿ ಉಲ್ಲೇಖಿಸಲಾಗಿದೆ. ಶಾಸ್ತ್ರ ಎಂದರೆ ತಪ್ಪದೇ ಪಾಲಿಸತಕ್ಕದ್ದು ಅಲ್ಲವೇ . ಅಂತವುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ನಮಗೆ ಶ್ರೀ ಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಲಭಿಸುತ್ತದೆ ಎಂದು ಅರ್ಥ. ಇನ್ನು ಅವು ಹೇಗೆ ಜರುಗುತ್ತವೆ ಎಂದು ನೋಡೋಣ ಬನ್ನಿ.

1.ಮೊದಲಿಗೆ ಪ್ರಾತಃಕಾಲ ಹಾಗೂ ಸಾಯಂಕಾಲದ ಸಮಯದಲ್ಲಿ ಎಳ್ಳೆಣ್ಣೆಯಿಂದ ಇಲ್ಲವೆ ಹಸುವಿನ ತುಪ್ಪದಿಂದ ದೀಪ ಬೆಳಗಬೇಕು ಹೀಗೆ ಮಾಡಿದ್ದಲ್ಲಿ ದಾರಿದ್ರ್ಯ ಕಷ್ಟಗಳು ಸಮಸ್ಯೆಗಳು ತೊಲಗಿ ಜೀವನದಲ್ಲಿ ಬೆಳಕು ಪಸರಿಸುತ್ತದೆ.

 

 

2.ಆರ್ಥಿಕ ಸಮಸ್ಯೆಗಳಿಗೆ ಕಿರಿ ಕಿರಿ ಉಂಟಾಗುತ್ತಾ ಇದ್ದರೆ, ಮೂಕ ಪ್ರಾಣಿಗಳಿಗೆ ಯಥಾನುಶಕ್ತಿ ಏನನ್ನಾದರೂ ಆಹಾರವಾಗಿ ತಿನ್ನಲು ಕೊಡಬೇಕು. ಅದರಲ್ಲೂ ಆಕಳು ಅಥವಾ ಕರುಗಳು ಇಲ್ಲ ನಾಯಿ . ಹೀಗೆ ಇಂಥ ಮೂಕ ಪ್ರಾಣಿಗಳಿಗೆ ಏನನ್ನಾದರೂ ತಿನ್ನಲು ಕೊಟ್ಟರೆ ಸಾಕು ಶ್ರೀ ಮಹಾಲಕ್ಷ್ಮಿ ಶೀಘ್ರವಾಗಿ ಕರುಣಿಸುತ್ತಾಳೆ ಎಂದು ತಿಳಿಸಿದ್ದಾನೆ ಶ್ರೀ ಮಹಾವಿಷ್ಣು.

 

 

3.ಪ್ರತಿ ಮನೆಯಲ್ಲಿ ಮನೆಯ ಮುಂದೆ ತುಳಸಿ ಗಿಡ ತಪ್ಪದೇ ಇರಲೇಬೇಕು. ಇನ್ನು ಶ್ರೀ ತುಳಸಿಯ ಮುಂದೆ ಪ್ರತಿನಿತ್ಯ ಶುಭ್ರಗೊಳಿಸಿ ರಂಗವಲ್ಲಿಯನಿಟ್ಟು .ಪ್ರಾತಃಕಾಲ ಹಾಗೂ ಸಾಯಂಕಾಲ ದೀಪ ಬೆಳಗಿಸಿ ಪ್ರದಕ್ಷಿಣೆಯನ್ನು ಸದಾ ಸಲ್ಲಿಸಬೇಕು. ಅಂತ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿ ಧನಕನಕವನ್ನು ಸುರಿಸುತ್ತಾಳೆ. ಇದು ಹಣದ ಕೊರತೆಯನ್ನು ಕಡಿಮೆಗೊಳಿಸುತ್ತವೆ.

4.ಮನೆಯ ಪ್ರಧಾನ ದ್ವಾರದ ಬಳಿ ಅಂದರೆ ಹೊಸ್ತಿಲಿನ ಅಕ್ಕಪಕ್ಕದಲ್ಲಿ ಯಾವಾಗಲೂ ಶುಭ್ರವಾಗಿ ಇಟ್ಟುಕೊಂಡು ಅದಕ್ಕೆ ಪ್ರತಿದಿನ ಶುಚಿಗೊಳಿಸಿ ರಂಗವಲ್ಲಿಯನ್ನು ಹಾಕಬೇಕು. ತದನಂತರ ಮನೆಯ ಒಳಗಡೆ ಶುಭ್ರ ಮಾಡಿಕೊಂಡು ಸುಮಂಗಲಿಯರು ದಿನನಿತ್ಯದ ಕೆಲಸಗಳನ್ನು ಕೈಗೊಳ್ಳಬೇಕು. ಹೀಗೆ ಮಾಡಿದರೆ ಶ್ರೀ ಮಹಾಲಕ್ಷ್ಮಿ ಸುಪ್ರೀತಳಾಗಿ ಅನುಗ್ರಹಿಸಿ ಕರುಣಿಸುತ್ತಾಳೆ.

 

 

5.ನಾವು ಶ್ರೀ ಮಹಾಲಕ್ಷ್ಮಿಯನ್ನು ಗಣಪತಿಯೊಂದಿಗೆ ಆಗಲಿ, ಇಲ್ಲವೇ ಪತಿ ಸಮೇತ ಅಂದ್ರೆ ಶ್ರೀ ಮಹಾವಿಷ್ಣುವಿನೊಂದಿಗೆ ಇರುವಂತೆ ಮಹಾಲಕ್ಷ್ಮೀ ದೇವಿಯನ್ನು ದಿನವೂ ಪೂಜಿಸಬೇಕು. ಹೀಗೆ ಮಾಡಿದರೆ ಆ ತಾಯಿ ಕಣ್ಣು ತೆಗೆದು ನಮ್ಮನ್ನು ಅನುಗ್ರಹಿಸುತ್ತಾಳೆ. ತನ್ನ ಕರುಣಾ ಕಟಾಕ್ಷದಿಂದ ಆ ಮನೆಯನ್ನು ಸಿರಿ ಸಂಪತ್ತಿನಿಂದ ತೂಗುತ್ತಾಳೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top