fbpx
ಸಮಾಚಾರ

ಸರ್ಕಾರದಿಂದ ಸಾಲ ನೀಡೋ ಪ್ರಧಾನಮಂತ್ರಿ ಮುದ್ರಾ ಯೋಜನೆಲಿ ಯಾವ ಯೋಜನೆಗೆ ಎಷ್ಟು ಸಾಲ ಕೊಡ್ತಾರೆ ,ಇದರ ನಿಯಮಗಳೇನು ಸಂಪೂರ್ಣ ಮಾಹಿತಿ

ಪ್ರಧಾನಮಂತ್ರಿ ಮುದ್ರಾ ಯೋಜನೆ ಎಂದರೇನು ? ಇದರ ನಿಯಮಗಳೇನು ? ಇದರ ಅಡಿಯಲ್ಲಿ ಯಾರು ಬೇಕಾದರೂ ಸಾಲವನ್ನು ಪಡೆಯಬಹುದು ಆದರೆ ನಿಯಮಗಳನ್ನು ಪಾಲಿಸಬೇಕು ಆಷ್ಟೇ.

 

ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎನ್ನುವ ವಿಷಯ ನಿಮಗೆಲ್ಲ ಈಗಾಗಲೇ ಗೊತ್ತಿರುವ ವಿಚಾರವೇ. ಆದರೆ ಈ ಯೋಜನೆ ಏನು ? ಎಂಥದ್ದು ? ಈ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಇರುವ ನಿಯಮಗಳೇನು ? ಎನ್ನುವುದನ್ನು ಈಗ ತಿಳಿದುಕೊಳ್ಳೋಣ. ಜನರಿಗೆ ಈ ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ.

 

ಏನಿದು ಮುದ್ರಾ ಯೋಜನೆ ?
ಸ್ವಂತ ಉದ್ಯೋಗ ಮಾಡಬೇಕು ಎಂದು ಆಸಕ್ತಿ ಹೊಂದಿರುವವರು ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿದೆ. ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತದೆ.

ಈ ಸಾಲ ನೀಡುವ ಯೋಜನೆಯ ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.
1.ಶಿಶು ಸಾಲ – ಐವತ್ತು ಸಾವಿರ ರೂಪಾಯಿಯವರೆಗೆ ಸಾಲವನ್ನು ತೆಗೆದುಕೊಳ್ಳುವುದಕ್ಕೆ ಶಿಶು ಸಾಲ ಎಂದು ಕರೆಯಲಾಗುತ್ತದೆ .

 

2.ಕಿಶೋರ ಸಾಲ – ಐವತ್ತು ಸಾವಿರ ರೂಪಾಯಿಗಳಿಗಿಂತ ಮೇಲ್ಪಟ್ಟು ಐದು ಲಕ್ಷ ರೂಪಾಯಿಗಳ ತನಕ ಸಾಲವನ್ನು ಕಿಶೋರ ಸಾಲವೆಂದು ಕರೆಯಲಾಗುತ್ತದೆ .

3.ತರುಣ ಸಾಲ – ಐದು ಲಕ್ಷದಿಂದ ಹತ್ತು ಲಕ್ಷದವರೆಗಿನ ಸಾಲವನ್ನು ತರುಣ್ ಸಾಲ ಎಂದು ಕರೆಯಲಾಗುತ್ತದೆ .

ಫಲಾನುಭವಿಗಳ ಅರ್ಹತೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿ, ಇನ್ನಿತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಕನಿಷ್ಠ ಐವತ್ತು ಸಾವಿರದಿಂದ ಹತ್ತು ಲಕ್ಷ ಸಾಲದ ವರೆಗೆ ನೀಡಲಾಗುತ್ತದೆ ಮೊದಲೇ ಹೇಳಿದಂತೆ ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತದೆ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳ ಪ್ರಾದೇಶಿಕ, ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳು ಕೂಡ ಮುದ್ರಾ ಅಡಿಯಲ್ಲಿ ಬರುತ್ತವೆ.

 

 

ಪ್ರಕ್ರಿಯೆ ಏನು ?
ಶಿಶು ಸಾಲವೇ, ಕಿಶೋರ್ ಸಾಲವೇ, ಅಥವಾ ತರುಣ್ ಸಾಲವೇ ಎಂದು ನೋಡಲಾಗುತ್ತದೆ. ಅಂದರೆ ಫಲಾನುಭವಿಗೆ ಎಷ್ಟು ಸಾಲ ಬೇಕು ? ಅವರು ಮಾಡಲು ಹೊರಟಿರುವ ಉದ್ಯೋಗವೇನು ? ಎಂದು ತಿಳಿದು ಅದಕ್ಕೆ ಅನುಗುಣವಾಗಿ ಸಾಲವನ್ನು ನೀಡುವ ಪ್ರಕ್ರಿಯೆ ಶುರುವಾಗುತ್ತದೆ. ಫಲಾನುಭವಿಗಳು ತಮ್ಮ ಹತ್ತಿರದ ಬ್ಯಾಂಕ್ ಆನ್ನು ಸಂಪರ್ಕಿಸಿ ಅಲ್ಲಿಂದ ಮುದ್ರಾ ಸಾಲದ ಯೋಜನೆ ಯಲ್ಲಿ ಸಾಲ ಪಡೆಯಬಹುದು.

ಪುರಾವೆ ಗುರುತು (proof of identity) ಏನು ?
ಸೆಲ್ಫ್ ಐಡೆಂಟಿಟಿ ಅಂದರೆ ( ಸ್ವಯಂ ಸಹೀಕೃತ) ಚುನಾವಣಾ ಗುರುತಿನ ಚೀಟಿ ಅಥವಾ ಚುನಾವಣಾ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ ಆಗಬಹುದು.

 

 

ವಾಸಸ್ಥಳ ಪುರಾವೆಗಾಗಿ.
ಇತ್ತೀಚಿನ ಟೆಲಿಫೋನ್ ಬಿಲ್ ಅಥವಾ ಎಲೆಕ್ಟ್ರಿಕಲ್ ಬಿಲ್, ಕಂದಾಯ ರಸೀದಿ ಎರಡು ತಿಂಗಳಿಗಿಂತ ಹಳೆಯದಾಗಿರಬಾರದು. ಅಥವಾ ಚುನಾವಣಾ ಗುರುತಿನ ಚೀಟಿ ಅವರ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ವಸತಿ ಪ್ರಮಾಣ ಪತ್ರ ಅಥವಾ ಸ್ಥಳೀಯ ಅಧಿಕಾರಿಯಿಂದ ಕೊಡಲಾದ ಯಾವುದೇ ಗುರುತಿನ ಪತ್ರವು ಆಗಬಹುದು.
ಅರ್ಜಿದಾರನ ಇತ್ತೀಚೆಗಿನ ಭಾವಚಿತ್ರ.

ಕೊಂಡುಕೊಳ್ಳುವ ಯಂತ್ರೋಪಕರಣಗಳು ಅಥವಾ ವಸ್ತುವಿನ ಕೊಟೇಷನ್.
ಸರಬರಾಜುದಾರರ ಹೆಸರು ಮತ್ತು ವಿವರ.
ವ್ಯಾಪಾರ ಉದ್ಯಮದ ವಿಳಾಸ ( ಸಂಬಂಧಿಸಿದ ಪರವಾನಗಿ ಪತ್ರ).

 

ಮುದ್ರಾ ಕಾರ್ಡ್.
ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಮಂಜೂರಾದ ನಂತರ ಅಭ್ಯರ್ಥಿಯ ಮುದ್ರಾ ಕಾರ್ಡ ಅನ್ನು ಪಡೆಯುತ್ತಾರೆ. ಈ ಕಾರ್ಡ್ ಕ್ರೆಡಿಟ್ ಕಾರ್ಡ್ ರೀತಿಯದ್ದಾಗಿದೆ. ಈ ಕಾರ್ಡ್ ಮೂಲಕ ಅಭ್ಯರ್ಥಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಚ್ಚಾ ಸಾಮಗ್ರಿಗಳನ್ನು ಪಡೆಯಬಹುದು. ಆದರೆ ಇದರ ಮಿತಿ ಸಾಲದ ಶೇಖಡ ಹತ್ತರಷ್ಟು…. ಅಂದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿಗಳು ಮಾತ್ರ ಇರುತ್ತದೆ.
ಈ ಮುದ್ರಾ ಯೋಜನೆಯ ಲಾಭವನ್ನು ಪಡೆದುಕೊಂಡು ನೀವು ಕೂಡ ಸಾಧ್ಯವಾದಷ್ಟು ಸ್ವಯಂ ಉದ್ಯೋಗಿಗಳಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಊರಿನ ಹತ್ತಿರ ಇರುವ ಬ್ಯಾಂಕ್ ನಲ್ಲಿ ಮಾಹಿತಿ ಪಡೆಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top