ತಿಂಡಿ ತೀರ್ಥ

ರುಚಿಕರವಾದ ಗರಿಗರಿಯಾದ ಪನೀರ್ ಪೆಪ್ಪರ್ ಫ್ರೈ ಮಾಡೋದು ಸಕ್ಕತ್ ಸಿಂಪಲ್.

ಪನೀರ್ ಪೆಪ್ಪರ್ ಫ್ರೈ

ಸಾಮಗ್ರಿ:

ಪನೀರ್ ತುಂಡುಗಳು-1 ಪ್ಯಾಕೆಟ್, ಈರುಳ್ಳಿ-4, ಹಸಿಮೆಣಸಿನಕಾಯಿ-3, ಕರಿಬೇವಿನಸೊಪ್ಪು-1 ಹಿಡಿ, ಪೆಪ್ಪರ್ ಪೌಡರ್-6 ಚಮಚ, ಮೊಸರು-6 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-6 ಟೀ ಚಮಚ.

ವಿಧಾನ:

ಮೊದಲಿಗೆ ಪನೀರನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿದ ರೆಡಿಮೇಡ್ ಪನೀರ್ ಆದಲ್ಲಿ ತೊಂದರೆಯಿಲ್ಲ.

ಕತ್ತರಿಸಿದ ಪನೀರ್‍ಗೆ ಮೊಸರು ಹಾಗೂ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ನಾಲ್ಕು ಚಮಚ ಪೆಪ್ಪರ್ ಪೌಡರ್ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ. ಈಗ ಬಾಣಲೆಯಲ್ಲಿ ಮೂರ್ನಾಲ್ಕು ಚಮಚ ಎಣ್ಣೆಯನ್ನು ಹಾಕಿ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ .

ಇದು ಹೊಂಬಣ್ಣಕ್ಕೆ ಬಂದಾಗ ಉಳಿದ ಪೆಪ್ಪರ್ ಪೌಡರ್ ಉದುರಿಸಿ ನಂತರ ಪೆಪ್ಪರ್‍ನಲ್ಲಿ ಮಿಕ್ಸ್ ಮಾಡಿದ ಪನೀರ್ ಮಿಶ್ರಣ ಮಾಡಿ ಒಂದೈದು ನಿಮಿಷ ಕಲೆಸಿಡಿ.

ಈಗ ಮತ್ತೊಮ್ಮೆ ಎಣ್ಣೆಯನ್ನು ಹಾಕಿ ಅದರ ಮೇಲೆ ಕರಿಬೇವು ಸೊಪ್ಪಿನ ಎಲೆಗಳನ್ನು ಹಾಕಿ. ಈಗ ಪನೀರ್ ಪೆಪ್ಪರ್ ಫ್ರೈ ರೆಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top