fbpx
ರಾಜಕೀಯ

ಎಲೆಕ್ಷನ್ ಪ್ರಚಾರಕ್ಕೆ ಬರ್ತಾರಾ ನಟಿ ರಾಧಿಕಾ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರನ್ನು ಎಲೆಕ್ಷನ್ ಪ್ರಚಾರಕ್ಕೆ ಬರ್ತೀರಾ ಎಲೆಕ್ಷನ್ನಲ್ಲಿ ಭಾಗಿಯಾಗುತ್ತೀರಿ ಎಂಬೆಲ್ಲ ಪ್ರಶ್ನೆಗಳನ್ನು ಕೇಳಲಾಯಿತು ಇದಕ್ಕೆ ಉತ್ತರ ಕೊಟ್ಟ ರಾಧಿಕಾ ಕುಮಾರಸ್ವಾಮಿ ನನಗೆ ರಾಜಕೀಯದಲ್ಲಿ ಅಷ್ಟು ಆಸಕ್ತಿಯಿಲ್ಲ ನನಗೆ ಸಿನಿಮಾ ಮುಖ್ಯ ಏಕೆಂದರೆ ನಾನು ಒಬ್ಬ ನಟಿಯಾಗಿ ಬೆಳೆದವಳು.

 

 

ಮೊದಲಿಗೆ ನಮ್ಮ ಪ್ರೊಡಕ್ಷನ್ ಹೌಸ್ ನಿಂದ ಅನೇಕ ಚಿತ್ರಗಳನ್ನು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಅದಕ್ಕೆ ನಮಗೆ ಸಮಯ ಸಾಕಾಗುತ್ತಿಲ್ಲ ಅದಲ್ಲದೇ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇದೆ ಹೀಗಿರುವಾಗ ನನ್ನನ್ನು ನಾನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಮಯವಿಲ್ಲ ಸದ್ಯಕ್ಕೆ ನಾನು ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದು ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟನೆ ಮಾಡುತ್ತಿದ್ದೇನೆ ಹೀಗಿರುವಾಗ ಸದ್ಯಕ್ಕೆ ನನಗೆ ಬಿಡುವಿಲ್ಲ ಇದರ ಬಗ್ಗೆ ಯೋಚನೆ ಮಾಡಲು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top