fbpx
ಸಿನಿಮಾ

‘ರವಿಚಂದ್ರನ್ ಅವರ ಲೆವೆಲ್ ಗೆ ಒಂದು ಹಾಡು ತೆಗೆದ ದಿನ ನಾನೊಬ್ಬ ಡೈರೆಕ್ಟರ್ ಅಂತ ಹೇಳ್ಕೊಳ್ತೀನಿ’ ಬಾಹುಬಲಿ ನಿರ್ದೇಶಕ ರಾಜಮೌಳಿ 

ಕಳೆದ ಹದಿನೆಂಟು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರರಂಗವಲ್ಲ ಬೆಂಗಾಲಿ ಒರಿಯಾ ಮುಂತಾದ ಭಾಷೆಗಳಲ್ಲಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ  ಎಸ್ಎಸ್ ರಾಜಮೌಳಿ ಅವರಿಗೆ ಬಾಹುಬಲಿ ಚಿತ್ರ ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಖ್ಯಾತಿಯನ್ನು ತಂದುಕೊಟ್ಟಿತ್ತು .

 

ಎಸ್ ಎಸ್ ರಾಜಮೌಳಿ ಅವರನ್ನು ಅನೇಕ ಯುವ ನಿರ್ದೇಶಕರು ಇನ್ಸ್ಪಿರೇಶನ್ ಎಂದೇ ಭಾವಿಸುತ್ತಾರೆ ಹೀಗಿರುವಾಗ ಎಸ್ಎಸ್ ರಾಜಮೌಳಿ ಅವರು ರವಿಚಂದ್ರನ್ ಕುರಿತಾಗಿ ಒಂದು ಅದ್ಭುತ ಮಾತನ್ನು ಹೇಳುವ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ ಏನೆಂದರೂ ಹಾಗಾದ್ರೆ

ಸುದೀಪ್ ಅಭಿನಯದ ‘ಈಗ’ ಚಿತ್ರದ ಸಮಾರಂಭವೊಂದರಲ್ಲಿ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದ್ದಾರೆ ಎಸ್ ಎಸ್ ರಾಜಮೌಳಿ

 

ರಾಜಮೌಳಿ ಅವರ ಕೆರಿಯರ್ನ ಮೊದಲ ದಿನಗಳಲ್ಲಿ ಜರ್ಮನಿಯಲ್ಲಿ ಶೂಟ್ ಮಾಡುತ್ತಿದ್ದರಂತೆ ಆಗ ಶೂಟಿಂಗ್ ವೇಳೆ ರವಿಚಂದ್ರನ್ ಅವರು ಬಳಸಿದ್ದ ಕ್ಯಾಮೆರಾವನ್ನು ತಮ್ಮ ಚಿತ್ರಕ್ಕೆ ಶೂಟಿಂಗ್ ಮಾಡಲು ಬಳಸಿದ್ದಾರಂತೆ ಇದನ್ನು ಅದೃಷ್ಟವಾಗಿ ಭಾವಿಸುತ್ತಾರೆ ರಾಜಮೌಳಿ .

ಹಿಂದಿನ ದಶಕದಲ್ಲಿ ರವಿಚಂದ್ರನ್ ಅವರ ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ ಎಂದು ತಿಳಿದರೆ ಚಿತ್ರದ ಒಂದು ಪ್ರಿಂಟ್ ಅನ್ನು ಸ್ಮಗಲ್ ಮಾಡಿ ಚೆನ್ನೈಗೆ ತೆಗೆದುಕೊಂಡು ಹೋಗುತ್ತಿದ್ದರಂತೆ .

 

ಆಗ ದೊಡ್ಡ ಪರದೆಯ ಮುಂದೆ ಕೂತು ನಿರ್ದೇಶಕರು ಹಾಗೂ ದೊಡ್ಡ ದೊಡ್ಡ ನಿರ್ಮಾಪಕರು ರವಿಚಂದ್ರನ್ ಅವರ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರಂತೆ ಚಿತ್ರವನ್ನು ನೋಡಿ ಎಷ್ಟು ಸುಂದರವಾಗಿ ತೆಗೆದಿದ್ದಾರೆ ಆಗಿನ ಕಾಲದಲ್ಲಿ ಇಂತಹ ಚಿತ್ರಗಳು ಮೂಡಿ ಬರಲು ಸಾಧ್ಯವೇ ಎಂಬುವಷ್ಟು ಆಶ್ಚರ್ಯವಾಗುತ್ತಿದ್ದಂತೆ ರಾಜಮೌಳಿ ಅವರಿಗೆ ಎಂಟಿವಿ ಇನ್ನು ಜನಪ್ರಿಯತೆ ಗಳಿಸಿರಲಿಲ್ಲ ಆ ಕಾಲದಲ್ಲಿಯೇ ಇಂಟರ್ನ್ಯಾಷನಲ್ ಕ್ವಾಲಿಟಿ ಯಲ್ಲಿ ಚಿತ್ರಗಳನ್ನು ತೆರೆಯ ಮೇಲೆ ತರುತ್ತಿದ್ದರಂತೆ ರವಿಚಂದ್ರನ್

ರವಿಚಂದ್ರನ್ ಅವರ ಲೆವೆಲ್ಲಿಗೆ ಒಂದು ಹಾಡನ್ನು ರಾಜಮೌಳಿ ಮಾಡಿದರೆ ಆ ದಿನ ರಾಜಮೌಳಿ ತಾವು ನಿರ್ದೇಶಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಇಷ್ಟು ಅಭಿಮಾನವನ್ನು ರಾಜಮೌಳಿ ರವಿಚಂದ್ರನ್ ಅವರ ಬಗ್ಗೆ ಹೊಂದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top