fbpx
ಸಿನಿಮಾ

ಮತ್ತೆ ಒಟ್ಟಾಗಿ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲಿರುವ ಅಮಿತಾಬ್ – ತಾಪ್ಸಿ

2016 ರಲ್ಲಿ ತೆರೆ ಕಂಡು ರಾಷ್ಟ ಪ್ರಶಸ್ತಿ ಗೆದ್ದಿದ್ದ ವಿಭಿನ್ನ ಚಿತ್ರ “ಪಿಂಕ್” ನಲ್ಲಿ ಒಟ್ಟಾಗಿ ಅಭಿನಯ ಮಾಡಿದ್ದ ಬಾಲಿವುಡ್ ನಟಿ ಅಮಿತಾಬ್ ಬಚ್ಚನ್ ಹಾಗು ತಾಪ್ಸಿ ಈಗ ಮತ್ತೆ ತೆರೆ ಮೇಲೆ ಒಟ್ಟಾಗಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಬಾಲಿವುಡ್ ಖ್ಯಾತ ನಿರ್ದೇಶಕ ಸುಜಯ್ ಘೋಷ್‌ ನಿರ್ದೇಶನ ಮಾಡಿರುವ ಕ್ರೈಂ ಥ್ರಿಲ್ಲರ್ ಇರುವ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗು ತಾಪ್ಸಿ ಜೊತೆಯಾಗಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕೆ ‘ಬಾದ್ಲಾ’ ಎಂದು ಹೆಸರಿಡಲಾಗಿದ್ದು. ಅಮಿತಾಬ್ ಅಹ್ಗೂ ತಾಪ್ಸಿ ಈಗಾಗಲೇ ಸಹಿ ಹಾಕಿದ್ದಾರೆ. ಚಿತ್ರ ಈಗ ಪ್ರಿ ಪ್ರೊಡಕ್ಷನ್ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಮೂಲಗಳ ಪ್ರಕಾರ ಜೂನ್ ತಿಂಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ.

 

 

ಪಿಂಕ್ ಚಿತ್ರದಲ್ಲಿ 13 ಪುಟದ ದೃಶ್ಯದ ಡೈಲಾಗ್ ಅನ್ನು ಕೇವಲ ಒಂದೇ ಟೆಕ್ ನಲ್ಲಿ ಅದ್ಭುತವಾಗಿ ಮಾಡಿದ್ದ ನಟಿ ತಾಪ್ಸಿ ಅವರು ಅಮಿತಾಬ್ ಬಚ್ಚನ್ ರವರಿಂದ ಪ್ರಶಂಸೆ ಪಡೆದಿದ್ದರು. ಅಭಿಮಾನಿಗಳಿಂದ ಕೂಡ ಪ್ರಶಂಸೆಯ ಸುರಿಮಳೆ ಆಗಿತ್ತು.

 

ಸದ್ಯ ಅಮಿತಾಬ್ ಬಚ್ಚ ‘102 Not Out’ ಚಿತ್ರದ ಚಿತ್ರೀಕರಣ ಮುಗಿದಿದ್ದು ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇನ್ನು ತಾಪ್ಸಿ ‘ಮನ್‌ಮರ್ಜಿಯಾನ್‌‌‌‌’ ಸಿನಿಮಾ ಶೂಟಿಂಗ್ ನಲ್ಲಿ ಸಕತ್ ಬ್ಯುಸಿ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top