fbpx
ಸಿನಿಮಾ

ಕಾಂಡೊಮ್ ಜಾಹಿರಾತು ಮಾಡಿ ಏಕ್ ಧಮ್ ಸ್ಟಾರ್ ಆಗ್ಬಿಟ್ಟಳು ಗಣೇಶ್ ಫಿಲಂ ಹೀರೊಯಿನ್

ಕನ್ನಡ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜತೆಗೆ ಸರ್ಕಸ್ ಚಿತ್ರದಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡ ನಟಿ ಅರ್ಚನಾ ಗುಪ್ತಾ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆದ್ರೆ ಈ ಬರಿ ಸಿನಿಮಾ ದಲ್ಲಿ ಅಲ್ಲ ಬದಲಾಗಿ ಜಾಹಿರಾತಿನಲ್ಲಿ. ಹೌದು ಅರ್ಚನಾ ಗುಪ್ತಾ ಕಾಂಡೊಮ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮುಖೇನ ಈಗ ಸುದ್ದಿಯಲ್ಲಿದ್ದಾರೆ.

 

 

ಕೇವಲ ಬೆರಳಣಿಯಷ್ಟೇ ಚಿತ್ರಗಳಲ್ಲಿ ಅಭಿನಯ ಮಾಡಿ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಈಗ ಕಾಂಡೊಮ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸುದ್ದಿಯಲ್ಲಿರುವ ಇವರಿಗೆ ಮತ್ತೆ ಅವಕಾಶಗಳು ಸಿಕ್ಕಿವೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

 

ಕನ್ನಡ ಹಾಗು ಮಳೆಯಾಳಿ ಚಿತ್ರದಲ್ಲಿ ಅಭಿನಯ ಮಾಡಿದ್ದ ಇವರ ಮೂಲತಃ ದೆಹಲಿ ಸಮೀಪದ ಆಗ್ರಾದವರಾಗಿದ್ದಾರೆ. ಇವರಿಗೆ ಈಗ ಮೂರ್ನಾಲ್ಕು ಆಫರ್ ಗಳು ಹುಡುಕಿಕೊಂಡು ಬಂದಿವೆ ಎಂದು ತಿಳಿದು ಬಂದಿದೆ.

 

 

ಈ ಮೊದಲು ಅರ್ಚನಾ ಗುಪ್ತ ಅವರು ಅಶೋಕ್ ಕಶ್ಯಪ್ ನಿರ್ದೇಶನ ಮಾಡಿರುವ , ಸಿ.ಎಂ.ಆರ್ ಶಂಕರ್ ನಿರ್ಮಾಣದ ಜಗ್ಗೇಶ್ ಮತ್ತು ಕೋಮಲ್ ನಾಯಕ ನಟರಾಗಿ ಅಭಿನಯಿಸಿದ ಲಿಫ್ಟ್ ಕೊಡ್ಲಾ? ಚಿತ್ರದಲ್ಲಿ ಅಭಿನಯ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top