fbpx
ಸಿನಿಮಾ

ತಮಿಳು ನಟ ಆರ್ಯಗೆ ಅಪ್ಪು ಜೊತೆ ಈ ಪಾತ್ರ ಮಾಡೋಕೆ ತುಂಬಾ ಇಷ್ಟ ಅಂತೇ

ಕನ್ನಡ ಖ್ಯಾತ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಮೋಘ ಅಭಿನಯನದಿಂದ ಅಪಾರವಾದ ಖ್ಯಾತಿ ಪಡೆದವರು. ಇವರ ನಟನೆಯನ್ನು ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್, ಮಹೇಶ್ ಬಾಬು, ಜೂನಿಯರ್ ಎಸ್ ಟಿ ಆರ್ ಹೊಗಳಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನೀಕಾಂತ್ ಕೂಡ ಪುನೀತ್ ಅಭಿನಯವನ್ನು ಮೆಚ್ಚಿದ್ದಾರೆ. ಈಗ ತಮಿಳು ಚಿತ್ರನಟ ನಟ ಕೂಡ ಪುನೀತ್ ಬಗ್ಗೆ ಮಾತನಾಡಿದ್ದಾರೆ.

 

 

ಇತ್ತೀಚಿಗೆ ಬಿಡುಗಡೆಯಾದ ರಾಜರಾಥ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ನಟ ಆರ್ಯ ಅವರು ಪುನೀತ್ ರವರ ಜತೆಗೆ ವಿಲನ್ ಪಾತ್ರದಲ್ಲಿ ಅಭಿನಯ ಮಾಡುವಾಸೆ ಇದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

 

 

ಶಿವರಾಜ್ ಕುಮಾರ ಅವರು ನಡೆಸಿಕೊಡುವ ಟಿವಿ ಷೋ ಆದ ‘ನಂ 1 ಯಾರಿ ವಿತ್ ಶಿವಣ್ಣ’ ದಲ್ಲಿ ಭಾವಹಿಸಿ ನಟ ಆರ್ಯ ಮಾತನಾಡಿದರು. ಶಿವನ ಕೇಳಿದ ಪ್ರಶೆಯಾದ “ನೀವು ಕನ್ನಡದಲ್ಲಿ ವಿಲನ್ ರೋಲ್ ಯಾರ್ ಜೊತೆ ಮಾಡಲು ಇಷ್ಟ ಪಡ್ತಿರಾ?” ಎಂದು ನಾಲ್ಕು ಆಯ್ಕೆ ಕೊಟ್ಟರು ” ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿ ಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್ ” ಆರ್ಯ ಇದಕ್ಕೆ ನಾನು ಪುನೀತ್ ಅವರ ಜೊತೆಗೆ ಅಭಿನಯ ಮಾಡುತ್ತೇನೆ ಎಂದು ಹೇಳಿದರು.

 

 

ಇನ್ನು ಪುನೀತ್ ತುಂಬಾ ಚೆನ್ನಾಗಿ ಫೈಟ್ ಮಾಡುತ್ತರೆ ಎಂದು ಆರ್ಯ ಕೇಳಿದರು. ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಪ್ರತಿ ವಾರ ವಿಶೇಷ ಅತಿಥಿಗಳು ಆಗಮಿಸಿ ಶಿವಣ್ಣ ಕೇಳುವ ಪ್ರಶೆಗಳಿಗೆ ಉತ್ತರ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top