fbpx
ಸಾಧನೆ

ಸೇನೆಯಲ್ಲಿ ದೇಶ ಸೇವೆ ಸಲ್ಲಿಸುತ್ತಿರುವ ಸಂಸದ, ಮಾಜಿ ಮುಖ್ಯಮಂತ್ರಿ ಮಗಳು

ಉತ್ತರಾಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗು ಪ್ರಸ್ತುತ ಸಂಸದ ಆಗಿರುವ ರಮೇಶ್ ಪೋಖ್ರಿಯಾಲ್ ಅವರು ಸೇನಾ ಸಮವಸ್ತ್ರದಲ್ಲಿರುವ ತಮ್ಮ ಮಗಳ ಜೊತೆಗೆ ನಿಂತಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಎಂದು ತಿಳಿದು ಬಂದಿದೆ.

 

 

ಸಂಸದ ರಮೇಶ್ ಪೋಖ್ರಿಯಾಲ್ “ನನ್ನ ಮಗಳು ಡಾ ಶ್ರೇಯಾಸಿ ನಿಶಾಂಕ್ ಸೇನೆ ಸೇರುವ ಮೂಲಕ ಉತ್ತರಾಖಂಡ್ ಸಂಸ್ಕೃತಿಯನ್ನು ಮುಂದುವರೆಸಿದ್ದಾಳೆ” ಎಂದು ತಿಳಿಸಿದ್ದಾರೆ. ಈ ಬಗ್ಗೆ ಅವ್ರು ಟ್ವೀಟ್ ಕೂಡ ಮಾಡಿದ್ದಾರೆ.

 

 

ಡಾ ಶ್ರೇಯಾಸಿ ನಿಶಾಂಕ್ ಅವರು ಎಂಬಿಬಿಎಸ್ ಪದವಿಯನ್ನು ಹಿಮಾಲಯನ್ ವೈದ್ಯಕೀಯ ಕಾಲೇಜ್ ನಲ್ಲಿ ಪಡೆದಿದ್ದಾರೆ. ಸೇನೆ ಸೇರಬೇಕೆಂಬ ಬಯಕೆ ಹೊಂದಿದ್ದ ಅವರು. ತಮ್ಮ ವೈದ್ಯಕೀಯ ಶಿಕ್ಷಣ ಮುಗಿದ ಬಳಿಕ ಸೇನೆಯಲ್ಲಿ ವೈದ್ಯೆ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಂಸದ ರಮೇಶ್ ಪೋಖ್ರಿಯಾಲ್ ಸಾಧನೆಗೆ ಮಾಜಿ ಸೇನಾ ಮುಖ್ಯಸ್ಥ, ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವ ಜನರಲ್ ವಿಕೆ ಸಿಂಗ್ ಕೂಡ ಶುಭಾಶಯ ತಿಳಿಸಿದ್ದಾರೆ. ದೇಶದ ಪರ ಜನ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top