fbpx
ಮನೋರಂಜನೆ

ಹತ್ತು ವರ್ಷದ ಅಗರಬತ್ತಿ ಕೇಸಲ್ಲಿ ಕೊನೆಗೂ ಕೋರ್ಟ್ ನಲ್ಲಿ ನ್ಯಾಯ ದಕ್ಕಿಸಿಕೊಂಡ ಗಣೇಶ್!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಎಸ್.ನಾರಾಯಣ್ ನಡುವಿನ ಅಗರ್‌ಬತ್ತಿ ವಿವಾದ ಕೋರ್ಟ್ ಮೆಟ್ಟಿಲೇರಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಹತ್ತುವರ್ಷಗಳ ಹಿಂದಿನ ಈ
ಕೇಸಿಗೆ ಇಂದು ಸಿವಿಲ್ ಕೋರ್ಟ್‌ನ 15ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಟ ಗಣೇಶ್ ಅವರಿಗೆ ನ್ಯಾಯ ಸಿಕ್ಕಿದ್ದು ಅವರ ಪರವಾಗಿಯೇ ಪರವಾಗಿ ತೀರ್ಪು ಹೊರಬಿದ್ದಿದೆ. ಸುಮಾರು ವರ್ಷಗಳಿಂದ ಘನ ನ್ಯಾಯಾಲಯದಲ್ಲಿ ವಾದ -ವಿವಾದ ನಡೆದ ಬಳಿಕ ಇಂದು ಈ ಕೇಸಿಗೆ ಮುಕ್ತಿ ದೊರಕಿದೆ. ಮೋಕ್ಷ ಅಗರಬತ್ತಿ ಕಂಪನಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ 75 ಲಕ್ಷ ಕಟ್ಟಿಕೊಡುವಂತೆ ನ್ಯಾಯಾಲಯವು ಆದೇಶ ನೀಡಿದೆ.

 

 

ಏನಿದು ಕೇಸು?
ಆಗಷ್ಟೇ ಮುಂಗಾರುಮಳೆ ಅಭೂತಪೂರ್ವ ಗೆಲುವು ಕಂಡಿತ್ತು. ಹುಡುಗಾಟ ಚಿತ್ರ ಕೂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿತ್ತು ಇದನ್ನು ಕಂಡ ನಿರ್ದೇಶಕ ಎಸ್.ನಾರಾಯಣ್ ಗಣೇಶ್ ಅವರನ್ನು ಹಾಕಿಕೊಂಡು ಚೆಲುವಿನ ಚಿತ್ತಾರ ಸಿನಿಮಾ ಮಾಡಲು ಮುಂದಾದರು ಅದಾಗಲೇ ಮುಂಗಾರುಮಳೆ ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸಿ, ಗಣೇಶ್’ಗೆ ಒಳ್ಳೇ ರೇಟು ಕುದುರಿದ್ದ ಕಾಲ. ಆದರೆ, ಎಸ್ನಾಣಿ ಬರೀ ಹದಿನಾಲ್ಕು ಲಕ್ಷ ರುಪಾಯಿ ಸಂಭಾವನೆ ಕೊಟ್ಟು ಸುಮ್ಮನಾಗಿದ್ದರು. ಬಳಿಕ `ಚೆಲುವಿನ ಚಿತ್ತಾರ’ ಚಿತ್ರ ರಿಲೀಸ್ ಆಗಿ ಸಕ್ಕತ್ತಾಗಿ ಪ್ರದರ್ಶನ ಕಂಡು ನಾರಾಯಣ್’ಗೆ ಹತ್ತಾರು ಕೋಟಿಯ ಭರ್ತಿ ಲಾಭ ಮಾಡಿಕೊಟ್ಟಿತ್ತು. ಆದರೆ, ಕೊಟ್ಟ ಹದಿನಾಲ್ಕು ಲಕ್ಷದಲ್ಲಿ ಎಂಟು ಲಕ್ಷ ರುಪಾಯಿಯಯನ್ನು ಇಂಬ್ರಾಂಡಿಂಗ್ ಹೆಸರಲ್ಲಿ ಅಗರಬತ್ತಿ ಕಂಪೆನಿಯಿಂದ ವಸೂಲಿ ಮಾಡಿಕೊಂಡಿದ್ದರು.

 

 

ಈ ಸಿನಿಮಾ ಚಿತ್ರೀಕರಣದ ಹಂತದಲ್ಲೇ ಮೋಕ್ಷ್ ಚಂಪಾ ಅಗರಬತ್ತಿ ಸಂಸ್ಥೆ, ಎಸ್. ನಾರಾಯಣ್ ಅವರ ಚೆಲುವಾಂಬಿಕಾ ಪಿಕ್ಚರ್‍ಸ್ ಜೊತೆಗೆ “ಕ್ರಾಸ್ ಪ್ರಮೋಷನ್, ಸೆಲೆಬ್ರಿಟಿ ಎಂಡಾರ್‍ಸ್’ಮೆಂಟ್, ಇನ್ ಫಿಲ್ಮ್ ಬ್ರಾಂಡಿಂಗ್” ಹೆಸರಲ್ಲಿ ಅಗ್ರಿಮೆಂಟು ಮಾಡಿಸಿಕೊಂಡಿತ್ತು. ಅದೇನೆಂದರೆ, ಚೆಲುವಿನ ಚಿತ್ತಾರದ ಎಲ್ಲ ಪಬ್ಲಿಸಿಟಿಯಲ್ಲಿ ಮೋಕ್ಷ್ ಅಗರಬತ್ತಿಯ ಜಾಹೀರಾತು ನೀಡುವುದು. ತಮ್ಮ ಚಿತ್ರದ ಒಳಗೆ ತಮ್ಮ ಅಗಬತ್ತಿ ಬ್ರಾಂಡ್ ತೋರಿಸುವುದು, ಸಿನಿಮಾದ ಹೀರೋ ಕೈಲಿ ಅಗರಬತ್ತಿ ನೀಡಿ ಅದರ ಚಿತ್ರವನ್ನು ಪ್ರಮೋಟ್ ಮಾಡುವುದು ಮತ್ತು ಪರಸ್ಪರ ಪ್ರಾಡಕ್ಟುಗಳಲ್ಲಿ ಪಬ್ಲಿಸಿಟಿ ಮಾಡಿಕೊಳ್ಳುವುದು… ಈ ಇನ್ ಬ್ರಾಂಡಿಗ್ ಗಾಗಿ ನಾರಾಯಣ್ ಮೋಕ್ಷ್ ಚಂಪಾ ಅಗರಬತ್ತಿ ಸಂಸ್ಥೆಯಿಂದ ಹತ್ತು ಲಕ್ಷ ರುಪಾಯಿ ಹಣ ಪಡೆದಿದ್ದರು. ಈ ಹತ್ತು ಲಕ್ಷ ರುಪಾಯಿಗಳಲ್ಲಿ ಜಾಹೀರಾತಿನ ಕಾಂಟ್ರಾಕ್ಟ್ ಕೊಡಿಸಿದ್ದ ರೇನ್ ಬೋ ಮೀಡಿಯಾದ ಶ್ರೀಧರ್ ಅವರಿಗೆ ಎರಡು ಲಕ್ಷ ರುಪಾಯಿ ಸಂದಾಯವಾಗಿತ್ತು.

 

 

ಯವಾಗ ಸಿನಿಮಾ ರಿಲೀಸಿನ ಹೊತ್ತಿಗೆ ಮೋಕ್ಷ್ ಅಗರಬತ್ತಿಯ ಪ್ಯಾಕೆಟ್ಟಿಂದ ಹಿಡಿದು, ಪೋಸ್ಟರ್’ಗಳ ತನಕ ತಮ್ಮ ಫೋಟೋ ಬರಲು ಶುರುವಾಯ್ತೋ ಗಣೇಶ್ ಆಶ್ಚರ್ಯಗೊಂಡಿದ್ದರು. ಮೊದಲೇ ಬರೀ ಹದಿನಾಲ್ಕು ಲಕ್ಷ ರುಪಾಯಿ ಕೊಟ್ಟು ಇಪ್ಪತ್ತೆರಡು ದಿನ ಕಾಲ್ ಶೀಟ್ ಪಡೆದು, ನಾಣಿ ಕೋಟಿಕೋಟಿ ಲಾಭ ಮಾಡಿಕೊಂಡಿದ್ದರಿಂದ ಗಣೇಶ್ ಅಸಮಧಾನಗೊಂಡಿದ್ದರಲ್ಲಾ? ಅದು ಬೇರೆ ಸಿನಿಮಾ ಪ್ರಚಾರಕ್ಕಾಗಿ ಮೂರು ತಿಂಗಳ ಕಾಲ ಮಾತ್ರ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದ ಮೋಕ್ಷ ಅಗರಬತ್ತಿ ಮೂರು ತಿಂಗಳ ಬಳಿಕವೂ ಗಣೇಶ್ ಅವರ ಬೇರೆ ಭಾವಚಿತ್ರವನ್ನ ಬಳಕೆ ಮಾಡಿದ್ದರು. ಇದನೆಲ್ಲಾ ಗಮನಿಸಿದ ಗಣೇಶ್ ಅಗರಬತ್ತಿ ಸಂಸ್ಥೆಯ ಮೇಲೆ ಕೇಸು ಜಡಿಡಿದ್ದರು.

2008ರಲ್ಲಿ ಒಪ್ಪಿಗೆಯಿಲ್ಲದೆ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ತನ್ನ ಫೋಟೋಗನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚಿತ್ರನಟ ಗಣೇಶ್ ಮೋಕ್ಷ ಅಗರಬತ್ತಿ ಅಂಡ್ ಕಂಪೆನಿ ವಿರುದ್ಧ 75 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top