fbpx
ಆರೋಗ್ಯ

ಗೋರಿ ಕಾಯಿ ಅಂದ್ರೆ ಮೂಗು ಮುರಿಯೋರು ಅದರ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದ್ಮೇಲೆ ತಿನ್ನೋಕೆ ಶುರುಮಾಡ್ತೀರಾ!

ಗೋರಿ ಕಾಯಿ ಸಾಮಾನ್ಯವಾಗಿ ಒಂದು ಸೀಸನ್ ನಲ್ಲಿ ಮಾತ್ರವಲ್ಲದೆ ಎಲ್ಲ ಕಾಲದಲ್ಲೂ ಸಿಗುವ ಪಲ್ಯಕ್ಕಾಗಿ ಬಳಸುವ ತರಕಾರಿಯಾಗಿದೆ , ಹೆಚ್ಚು ಜನ ಈ ತರಕಾರಿಯನ್ನು ತಿನ್ನಲು ಇಷ್ಟ ಪಡುವುದಿಲ್ಲ ಆದರೆ ಇದರ ಈ 8 ಲಾಭಗಳು ತಿಳ್ಕೊಂಡ್ಮೇಲೆ ತಿಂದೆ ತಿನ್ನುತ್ತಿರಾ ..

 

ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

 

 

ಗೋರಿ ಕಾಯಿಯಲ್ಲಿರುವ ಫೈಬರ್ ಅಂಶವು ಹೊಟ್ಟೆಯ ಉಬ್ಬರ , ಮೂತ್ರ ಕಟ್ಟುವಿಕೆ ಸಮಸ್ಯೆ , ಕರುಳಿನ ಅಸ್ವಸ್ಥತೆ ತಡೆಯುತ್ತದೆ ,
ಬಹು ಮೂತ್ರ ಸಮಸ್ಯೆಯನ್ನು ಸಹ ತಡೆಯುತ್ತದೆ .ಮಲಬದ್ಧತೆಯನ್ನು ತೊಡೆದುಹಾಕಿ ದೇಹದಲ್ಲಿ ಪೌಷ್ಟಿಕಾಂಶದ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

 

ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

 

ಬೊಕ್ಕತಲೆಯಿಂದ ಬಳಲುತ್ತಿರುವ ಜನರಿಗೆ, ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ನಷ್ಟದಿಂದ ದುರ್ಬಲಗೊಳ್ಳುವ ಕೂದಲಿನ ಬುಡವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ .

ಕೆಲವು ಸಂಶೋಧನೆಗಳು ಪ್ರತಿಜೀವಕ ಗುಣಲಕ್ಷಣಗಳನ್ನು ಹೊಂದಿದ್ದು ವಿಟಮಿನ್ ಸಿ ಮಟ್ಟದಲ್ಲಿ ಸಮೃದ್ಧಿ ಹೊಂದಿದ್ದು ಒಟ್ಟಾರೆ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

 

ರಕ್ತ ಪರಿಚಲನೆ ಸುಧಾರಿಸುತ್ತದೆ

 

 

ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನಿಷಿಯಂ ಹೆಚ್ಚಾಗಿ ಇದ್ದು ಬಿಪಿ ನಿಯಂತ್ರಣದಲ್ಲಿರುತ್ತದೆ ಅಷ್ಟೇ ಅಲ್ಲದೆ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗಿದ್ದರೆ ಪೊಟ್ಯಾಷಿಯಂ ಅದನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ .

 

ಮಧುಮೇಹವನ್ನು ನಿಯಂತ್ರಿಸುತ್ತದೆ.

 

 

ಕಡಿಮೆ ಕ್ಯಾಲೋರಿ ಹೊಂದಿರುವ ಚಿಕಡಿ ಕಾಯಿ ಮಧುಮೇಹ ವಿರೋಧಿ ಆಹಾರದ ಮೂಲ , ಸ್ವಲ್ಪ ತಿಂದ ತಕ್ಷಣ ಹೊಟ್ಟೆ ತುಂಬಿದ ಅನುಭವವಾಗಿ ದೇಹದ ತೂಕದ ಮೇಲೆ ಕಡಿವಾಣ ಹಾಕುತ್ತದೆ ಆದ್ದರಿಂದ ಮಧುಮೇಹದ ಅಪಾಯ ಇರುವುದಿಲ್ಲ .

 

ರಕ್ತದೊತ್ತಡ ಕಡಿಮೆಗೊಳಿಸುತ್ತದೆ

 

 

ಗೋರಿ ಕಾಯಿ ಹೃದಯ ಬಡಿತವನ್ನು ತಗ್ಗಿಸಲು ಮತ್ತು ಕಡಿಮೆ ರಕ್ತದೊತ್ತಡವನ್ನು ಕಡಿಮೆಗೊಳಿಸಿ ನರಮಂಡಲ ಶಮನಗೊಳಿಸಲು ಪೊಟ್ಯಾಸಿಯಮ್ ಭರಿತವಾದ ಈ ತರಕಾರಿ ಒಳ್ಳೆಯದು , ರಕ್ತನಾಳದ ವ್ಯವಸ್ಥೆಯನ್ನು ಉತ್ತಮಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.

 

ಹೃದಯದ ತೊಂದರೆ ನಿವಾರಿಸಲು

 

ಗೋರಿ ಕಾಯಿ ಹೃದಯ ಸಂರಕ್ಷಿಸುವ ಅಂಶಗಳನ್ನು ಹೊಂದಿದ್ದು ಹೃದಯ ರೋಗದ ಅಪಾಯ ಕಡಿಮೆ ಮಾಡುತ್ತದೆ,  ಕಡಿಮೆ ಸಾಂದ್ರತೆಯುಳ್ಳ ಲಿಪೊಪ್ರೋಟೀನ್ (LDL  -Low Density cholestrol ) ಅಂಶವನ್ನು ಕಡಿತಗೊಳಿಸಿ  ಮತ್ತು ಹೆಚ್ಚು ಸಾಂದ್ರತೆಯ ಲಿಪೋಪ್ರೋಟೀನ್ ( (HDL -high-density lipoprotein) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಉರಿಯೂತ ಮತ್ತು ಪ್ಲೇಟ್ಲೇಟ್ ಸಂಖ್ಯೆ ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ  ಇದು ಅಪಧಮನಿಗಳಲ್ಲಿ ಪ್ಲೇಕ್ ರಚನೆಯ ಕಡಿಮೆ ಮಾಡುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

 

ಗರ್ಭಿಣಿಯರಿಗೆ ಉತ್ತಮ ಆಹಾರ

 

 

ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಮಹಿಳೆಯರಲ್ಲಿ ಈ ಖನಿಜಗಳ ಕೊರತೆಯನ್ನು ನಿವಾರಿಸುತ್ತದೆ ಇದು ಭ್ರೂಣದ ಬೆಳವಣಿಗೆಗೆ ಸಹಾಯಕ ಅಷ್ಟೇ ಅಲ್ಲದೆ ಫೋಲಿಕ್ ಆಮ್ಲ ಹೆಚ್ಚಾಗಿದ್ದು ಇದು ಗರ್ಭಧಾರಣೆಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ದೂರ ಇರಿಸುತ್ತದೆ , ವಿಟಮಿನ್ ಕೆ ಮೂಳೆಗಳಿಗೆ ಒಳ್ಳೆಯದು ಮತ್ತು ಭ್ರೂಣದ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.

 

ಮೂಳೆ ಬಲಪಡಿಸುತ್ತದೆ

 

 

ಒಮ್ಮೆ ಬೆನ್ನುನೋವು ಕಾಣಿಸಿಕೊಂಡರೆ ಅದರಿಂದ ಆಗುವಂತಹ ನೋವು ಅಸಹನೀಯವಾಗಿರುತ್ತದೆ. ಯಾವುದೇ ಕೆಲಸ ಕಾರ್ಯವನ್ನು ಮಾಡಲು ಇದರಿಂದ ಸಾಧ್ಯವಾಗಲ್ಲ. ಆದರೆ ಗೋರಿ ಕಾಯಿಯನ್ನು ಸೇವಿಸುತ್ತಾ ಬಂದರೆ ಮೂಳೆ ಸವೆತ ,ಕೀಲು ನೋವಿನಂತಹ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top