fbpx
ಕಿರುತೆರೆ

ಕಿರುತೆರೆಗೆ ಬಂದೇ ಬಿಡ್ತು ನೋಡಿ ಸೂಪರ್ ಹಿಟ್ ‘ಮಫ್ತಿ’ ಸಿನಿಮಾ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಂಬಿನೇಷನ್ ಕಾರಣದಿಂದಲೇ ಕೌತುಕ ಹುಟ್ಟುಹಾಕಿದ್ದ ಚಿತ್ರ ಮಫ್ತಿ. ಈ ಚಿತ್ರ ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನು ಆಚರಿಸಿಕೊಂಡಿತ್ತು, ಇದೀಗ ನಿಮ್ಮ ಮನೆಯಂಗಳಕ್ಕೆ ಲಗ್ಗೆ ಇಡುತ್ತಿದ್ದು ಕಿರುತೆರೆಯಲ್ಲಿ ಪ್ರಸಾರವಾಗಲು ರೆಡಿಯಾಗಿದೆ. ಚಿತ್ರ ರಿಲೀಸ್ ಆಗಿ ಮೂರ್ನಾಲ್ಕು ತಿಂಗಳುಗಳಷ್ಟೇ ಆಗಿದ್ದು ಆಗಲೇ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀಧಿಸಿದ್ದ ಝೀ ಕನ್ನಡ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಹಾಗಾಗಿ ಥಿಯೇಟರ್ ನಲ್ಲಿ ಚಿತ್ರವನ್ನು ನೋಡಲು ಮಿಸ್ ಮಾಡಿಕೊಂಡವರಿಗೆ ಚಿತ್ರವನ್ನು ನೋಡಲು ಒಳ್ಳೆಯ ಅವಕಾಶ ಸಿಗುತ್ತಿದೆ.

 

 

ಮಫ್ತಿ ಚಿತ್ರ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದ್ದು ಇನ್ನೂ ದಿನಾಂಕ ಹಾಗೂ ಸಮಯವನ್ನು ಚಾನೆಲ್ ಬಹಿರಂಗಗೊಳಿಸಿಲ್ಲ. ಆದ್ರೆ, ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಎಂಬ ಪ್ರೋಮೋಗಳನ್ನ ಪ್ರಸಾರ ಮಾಡುತ್ತಿದೆ. ಮೂಲಗಳ ಪ್ರಕಾರ ಏಪ್ರಿಲ್ ಕೊನೆ ವಾರದಲ್ಲಿ ಚಿತ್ರವಾಗಲಿದೆಯಂತೆ.

 

 

ಎಲ್ಲಿಯೂ ಬೋರು ಹೊಡೆಸದಂತೆ ಮಫ್ತಿಯನ್ನು ರೂಪಿಸುವಲ್ಲಿ ನಿರ್ದೇಶಕ ನರ್ತನ್ ಗೆದ್ದಿದ್ದು. ಇನ್ನುಳಿದಂತೆ ನಾಯಕಿ ಶಾನ್ವಿ ಶ್ರೀವಾತ್ಸವ್, ಶಿವಣ್ಣನ ತಂಗಿ ಪಾತ್ರ ಮಾಡಿರೋ ಛಾಯಾ ಸಿಂಗ್, ರಾಜಕಾರಣಿಯ ಪಾತ್ರದಲ್ಲಿ ಮಿಂಚಿರೋ ದೇವರಾಜ್, ಪರಿಸರವಾದಿಯಾಗಿ ಕಾಣಿಸಿಕೊಂಡಿರೋ ಪ್ರಕಾಶ್ ಬೆಳವಾಡಿ ಸೇರಿದಂತೆ ಎಲ್ಲ ಕಲಾವಿದರದ್ದೂ ಮಾಗಿದ ನಟನೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಕಾಮಿಡಿ ಟ್ರ್ಯಾಕೂ ಕಥೆಗೆ ಭಂಗ ಮಾಡದಂತೆ ವರ್ಕೌಟ್ ಆಗಿತ್ತು. ಮೊದಲ ಭಾಗದಲ್ಲಿ ಶ್ರೀ ಮುರಳಿ ಬಿಲ್ಡಪ್ಪು ಜೋರು. ಸೆಖೆಂಡ್ ಹಾಫ್‌ನಲ್ಲಿ ಶಿವಣ್ಣ ರಿಯಲ್ ಹೀರೋ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top