ತಿಂಡಿ ತೀರ್ಥ

ಮಜ್ಜಿಗೆ ಕೋಡುಬಳೆ ಮಾಡೋದು ತುಂಬಾ ಸಿಂಪಲ್

ಮಜ್ಜಿಗೆ ಕೋಡುಬಳೆ

ಸಾಮಗ್ರಿ:

ಕಡೆದ ಮಜ್ಜಿಗೆ-1 ಲೋಟ, ಅಕ್ಕಿಹಿಟ್ಟು-1 ಲೋಟ, ಮೈದಾ ಹಿಟ್ಟು-2 ಚಮಚ, ಎಳ್ಳು-1 ಚಮಚ, ಜೀರಿಗೆ-1 ಚಮಚ, ಕರಿಬೇವು-2 ಎಸಳು, ಒಣಮೆಣಸಿನ ಪುಡಿ-1 ಚಮಚ, ಉಪ್ಪು-ರುಚಿಗೆ, ಇಂಗು-ಸ್ವಲ್ಪ, ಕರಿಯಲು ಎಣ್ಣೆ.

 

ವಿಧಾನ:

ಒಲೆಯ ಮೇಲೆ ಬಾಣಲೆ ಇಟ್ಟು ಮಜ್ಜಿಗೆ, ಉಪ್ಪು ಹಾಕಿ ಕುದಿಯುವಾಗ ಹಿಟ್ಟುಗಳನ್ನು ಹಾಕಿ ತೊಳೆಸಿಕೊಳ್ಳಿ.

ಹೆಚ್ಚಿದ ಕರಿಬೇವು ಮತ್ತು ಉಳಿದ ಎಲ್ಲಾ ಪದಾರ್ಥಗಳನ್ನೂ ಬೆರೆಸಿ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಸವರಿ ಕೋಡುಬಳೆಗಳನ್ನು ಮಾಡಿ ಕಾದ ಎಣ್ಣೆಗೆ ಹಾಕಿ ಕೆಂಪಗೆ ಕರಿಯಿರಿ.

ಈಗ ಘಂ ಎನ್ನುವ ಮಜ್ಜಿಗೆ ಕೋಡುಬಳೆ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top