fbpx
ಸಿನಿಮಾ

ಮತ್ತೆ ಸುದ್ದಿಯಲ್ಲಿದ್ದಾರೆ ಕಾಂಟ್ರೊವರ್ಸಿ ಕ್ವೀನ್ ಪವಿತ್ರ ಗೌಡ

ಸ್ಯಾಂಡಲ್ ವುಡ್ ನಲ್ಲಿ ಈಗ ಇನ್ನೊಂದು ಸದಭಿರುಚಿ ಸಿನಿಮಾ ಬರಲು ಸಿದ್ದವಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಮಗ ನಾಯಕನಾಗಿ ನಟನೆ ಮಾಡುತ್ತಿರುವ ‘ಸಾಗುವ ದಾರಿಯಲ್ಲಿ’ ನಿರ್ದೇಶಕ ಶಿವಶಂಕರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

 

 

ಈ ಚಿತ್ರದಲ್ಲಿ ನಟಿ ಪವಿತ್ರ ಗೌಡ ನಟನೆ ಮಾಡಿದ್ದಾರೆ. ‘ಸಾಗುವ ದಾರಿಯಲ್ಲಿ’ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಅನೇಕ ಅಡೆತಡೆ ಅನುಭವಿಸಿ ಈ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಹೇಗೆ ಪ್ರದರ್ಶನ ಕಾಣಲಿದೆ.

 

 

ಪವಿತ್ರಾ ಗೌಡ ನಾಯಕಿ. ಕಾಲೇಜು ಹುಡುಗಿಯ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ . ನಾಯಕ ಹಾಗು ನಾಯಕಿ ಇಬ್ಬರೂ ಚಿತ್ರದಲ್ಲಿ ಇಂಜಿನಿಯರಿಂಗ್ ಸ್ಟೂಡೆಂಟ್. ಇಬ್ಬರೂ ಕಾಲೇಜು ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಪಕ್ಕಾ ಪ್ರೇಮಕಥನ ಚಿತ್ರ ಮಾಡಲು ಹೊರಟಿಲ್ಲ. ಸ್ವಲ್ಪ ಪ್ರೇಮಕತೆಯ ಲೇಪನ ಇದೆಯಂತೆ. ಬುಲೆಟ್ ಪ್ರಕಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಮೊದಲಾದ ಕಲಾವಿದರು ಅಭಿನಯ ಮಾಡಿದ್ದಾರೆ. ಪ್ರಕಾಶ್ ರೈ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಎಸ್.ನಾಗು ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿವೆ ಶ್ರೇಯಾ ಘೋಷಾಲ್, ವಿಜಯ ಪ್ರಕಾಶ್, ಟಿಪ್ಪು, ರಾಜೇಶ್ ಕೃಷ್ಣನ್ ಮೊದಲಾದವರು ಸಾಹಿತ್ಯಕ್ಕೆ ಧ್ವನಿಯಾಗಿದ್ದಾರೆ. ರಾಮ್‌ನಾರಾಯಣ್, ನಾಗೇಂದ್ರ ಪ್ರಸಾದ್ ಹಾಗು ನಿರ್ದೇಶಕರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top