ತಿಂಡಿ ತೀರ್ಥ

ನೂರಾರು ರೂಪಾಯಿ ಖರ್ಚು ಮಾಡಿ ಪಿಜ್ಜಾ ತಂದು ತಿನ್ನೋ ಬದ್ಲು ಮನೇಲೆ ಮಾಡ್ಕೋಬಹುದು.

ಮನೆಯಲ್ಲೇ ಪೀಜ್ಜಾ

ಸಾಮಗ್ರಿ:

ಅಂಗಡಿಯಲ್ಲಿ ದೊರೆಯುವ ಪೀಜ್ಜಾ ಬೇಸ್-2,

ಕೆಂಪು, ಹಳದಿ, ದಪ್ಪ ಮೆಣಸಿನಕಾಯಿ-ತಲಾ ಒಂದೊಂದು, ಈರುಳ್ಳಿ ಕಾವು (ಹೂವು) ಅಥವಾ ಈರುಳ್ಳಿ-2, ಗರಂ ಮಸಾಲೆ ಪುಡಿ-1/2 ಚಮಚ, ಧನಿಯಾ ಪುಡಿ-1/2 ಚಮಚ, ಜೀರಿಗೆ ಪುಡಿ-1/2 ಚಮಚ, ಸ್ವೀಟ್ ಕಾರ್ನ್-1/2 ಬಟ್ಟಲು, ಚೀಸ್-150 ಗ್ರಾಂ, ಉಪ್ಪು, ಎಣ್ಣೆ, ಟೊಮೆಟೊ ಸಾಸ್, ಅಲಂಕರಿಸಲು ಚೆರ್ರಿ ಹಣ್ಣುಗಳು, ಸ್ವಲ್ಪ ಎಣ್ಣೆ.

ವಿಧಾನ:

ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆಯನ್ನು ಬಾಣಲೆಗೆ ಹಾಕಿ ಹುರಿಯಿರಿ. ನಂತರ ಹೆಚ್ಚಿಟ್ಟ ದಪ್ಪಮೆಣಸಿನಕಾಯಿಗಳನ್ನು ಹಾಕಿ 5 ನಿಮಿಷ ಹುರಿದು ಕೆಳಗಿಳಿಸಿ ಉಪ್ಪು ಹಾಕಿ.

ಪೀಜ್ಜಾ ಬೇಸ್‍ನ್ನು ಬೆಣ್ಣೆ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ ಕೆಳಗಿಳಿಸಿ ತಟ್ಟೆಯಲ್ಲಿಟ್ಟು ಅದರ ಮೇಲೆ ಟೊಮೆಟೊ ಕೆಚಪ್‍ನ್ನು ಹರಡಿ ಅದರ ಮೇಲೆ ಹುರಿದ ಮೆಣಸಿನಕಾಯಿ ಮತ್ತು ಈರುಳ್ಳಿ ಮಿಶ್ರಣವನ್ನು ಹರಡಿ.

ನಂತರ ಅಲ್ಲಲ್ಲಿ ಸ್ವೀಟ್‍ಕಾರ್ನ್‍ನ್ನು ಉದುರಿಸಿ ಎಲ್ಲಾ ಮಸಾಲೆ ಪುಡಿಗಳನ್ನೂ ಬೆರೆಸಿ ಅಲ್ಲಲ್ಲಿ ಉದುರಿಸಿ.

ಅದರ ಮೇಲೆ ತುರಿಯುವ ಮಣೆಯಿಂದ ಚೀಸ್‍ನ್ನು ತುರಿದು ಸಿದ್ಧಗೊಳಿಸಿದ ಪೀಜ್ಜಾವನ್ನು 2 ನಿಮಿಷ ಓವನ್ನಲ್ಲಿಟ್ಟು ತೆಗೆದರೆ ಆಗ ತಾನೆ ಕರಗುತ್ತಿರುವ ಚೀಸ್‍ನ ಸುತ್ತಲೂ ಚೆರ್ರಿ ಹಣ್ಣುಗಳಿಂದ ಅಲಂಕರಿಸಿ. ಹೀಗೆ ಮನೆಯಲ್ಲೇ ಆರೊಗ್ಯಕರವಾದ ಪೀಜ್ಜಾ ಮಾಡಿ ಸವಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top