fbpx
ಸಮಾಚಾರ

ಬಿಲ್ಡ್ ಅಪ್ ರಾಜ ಪ್ರಥಮ್ ಚಾಲೆಂಜಿಂಗ್ ಸ್ಟಾರ್ ನ ಮೀಟ್ ಮಾಡಿದ್ದು ಯಾಕ್ಗೊತ್ತಾ

ಬಿಗ್‌ಬಾಸ್ ವಿನ್ನರ್ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದರ ಬೆನ್ನಿಗೇ ಇದಿಗ ಅವರ ‘ಎಮ್‌ಎಲ್‌ಎ’ ಚಿತ್ರವೂ ಬಿಡುಗಡೆಯ ಹೊಸ್ತಿಲಲ್ಲಿದೆ. ವಿಶೇಷವೆಂದರೆ, ಈ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಸಾಕ್ಷಾತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೆ ಪ್ರತಮ್ ಒಪ್ಪಿಸಿದ್ದಾರೆ!

 

 

ಮಾತಲ್ಲೇ ಎಂಥವರನ್ನೂ ಮರುಳು ಮಾಡೋ ಕಲೆ ಪ್ರಥಮ್‌ಗೆ ಕರಗತ. ಆ ಬಲದಿಂದಲೇ ಬಿಗ್‌ಬಾಸ್‌ನಂಥಾ ಶೋವನ್ನು ಗೆದ್ದುಕೊಂಡಿದ್ದ ಪ್ರಥಮ್ ಇದೀಗ ದರ್ಶನ್ ಅವರ ಮನ ಗೆಲ್ಲುವಲ್ಲಿಯೂ ಗೆದ್ದಿದ್ದಾರೆ. ದರ್ಶನ್ ಅವರನ್ನು ಆಡಿಯೋ ರಿಲೀಸ್ ಮುಂತಾದ ಕಾರ್ಯಕ್ರಮಗಳಿಗೆ ಬರಲು ಒಪ್ಪಿಸೋದೇ ಒಂದು ಸಾಹಸ. ಆದರೆ ಅವರೇ ಖುಷಿಯಾಗಿ ಎಂಎಲ್‌ಎ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರಂತೆ.

ಕೆಲ ದಿನಗಳ ಹಿಂದೆ ದರ್ಶನ್ ಯಜಮಾನ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿದ್ದರಲ್ಲಾ? ಅಂದು ಪ್ರಥಮ್ ದರ್ಶನ್ ಅವರಿಗೆ ಕಾಲ್ ಮಾಡಿದರಂತೆ. ತಕ್ಷಣ ಅವರು ರಿಸೀವ್ ಮಾಡಿದಾಗ ‘ಬಾಸ್ ಇಲ್ಲೇ ಪಕ್ಕದಲ್ಲಿ ನಮ್ಮನೆ. ಈಗ ಬರ‍್ತಾ ಇದೀನಿ ಬಾಸ್..’ ಅಂದರಂತೆ. ಆ ಕಡೆ ದರ್ಶನ್ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೇ ಪ್ರಥಮ್ ಯಜಮಾನ ಸೆಟ್‌ನಲ್ಲಿ ಹಾಜರಾಗಿದ್ದಾರೆ. ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ದರ್ಶನ್ ದೂರದಿಂದಲೇ ಎರಡು ಬಾರಿ ಹಾಯ್ ಎಂದರಂತೆ. ಆ ನಂತರ ಇಬ್ಬರು ಹುಡುಗರನ್ನು ಕಳಿಸಿ ‘ಪ್ರಥಮ್‌ನ ಕರೆದುಕೊಂಡುಬನ್ನಿ’ ಅಂತಾ ಹೇಳಿ ಕಳಿಸಿದರಂತೆ. ‘ನೋಡ್ತಾಇದ್ದೀನಿ ನಿಮ್ಮ ಸಿನಿಮಾಗಳ ಬಗ್ಗೆ.. ಎಲ್ಲಾ ಒಳ್ಳೇದಾಗ್ಲಿ ಅಂದರಂತೆ’. ಅದೇ ಹೊತ್ತಿಗೆ ‘ಒಂದು ಬೈಟ್ಸ್ ಕೊಡಿ ನನ್ನ ಸಿನಿಮಾ ಬಗ್ಗೆ’ ಅಂಥಾ ಪ್ರಥಮ್ ವಿನಂತಿಸಿದಾಗ ‘ಈಗ ಬೈಟ್ಸ್ ಬೇಡ. ನಾನು ಬೇರೆ ಮೇಕಪ್ ನಲ್ಲಿದ್ದೀನಿ. ಆಡಿಯೋ ರಿಲೀಸ್‌ಗೇ ಬರ‍್ತೀನಿ ಬಿಡು…’ ಅಂದರಂತೆ ಚಾಲೆಂಜಿಂಗ್ ಸ್ಟಾರ್.

 

 

ಹೀಗೆ ದರ್ಶನ್ ಅವರು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬರಲು ಒಪ್ಪಿಕೊಂಡು ಈ ಸಿನಿಮಾ ಗೆಲುವು ಕಾಣಲೆಂದು ಹಾರೈಸಿ ಕಳಿಸಿರೋದು ಪ್ರಥಮ್ ಪಾಲಿಗೆ ಶ್ಯಾನೆ ಖುಷಿ ಉಂಟು ಮಾಡಿದೆ.

ಯುವ ಸಮುದಾಯಕ್ಕೆ ಒಲಿತಾಗುವಂಥಾ ಒಂದೊಳ್ಳೆ ಸಂದೇಶ ಹೊಂದಿರುವ ಈ ಚಿತ್ರದಲ್ಲಿ ಸಾರಿಗೆ ಸಚಿವ ರೆವಣ್ಣನವರೂ ಕೂಡಾ ನಟಿಸಿದ್ದಾರೆ. ಇದಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ಈ ಚಿತ್ರದ ಆಡಿಯೋ ಹಕ್ಕು ಪಡೆಯುವ ಮೂಲಕ ಪ್ರಥಮ್‌ಗೆ ಬೆಂಬಲ ಸೂಚಿಸಿದ್ದಾರೆ.

 

 

ಪ್ರಥಮ್ ನಟನೆಯ ಮೊದಲ ಚಿತ್ರ ದೇವ್ರಂಥಾ ಮನುಷ್ಯ ನಿರೀಕ್ಷಿತ ಗೆಲುವು ಕಂಡಿಲ್ಲ. ಹೀಗಾಗಿ ವೈಯುಕ್ತಿಕವಾಗಿ ಎಂ.ಎಲ್.ಎ ಸಿನಿಮಾ ಗೆಲ್ಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಪ್ರಥಮ್ ಮತ್ತು ತಂಡ ಸತತ ಪರಿಶ್ರಮದಿಂದ ಸಿನಿಮಾ ಮುಗಿಸಿದೆ. ಈ ತಂಡದ ಮೊದಲ ಗೆಲುವು ಎಂಬತೆ ಅಪ್ಪು ಅವರ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಆಡಿಯೋ ಅತಿ ಶೀಘ್ರದಲ್ಲೇ ಬರಲಿದೆ.

 

 

ಇದರ ಮುಂದಿನ ಹೆಜ್ಜೆ ಎಂಬಂತೆ ದರ್ಶನ್ ಅವರಿಗೆ ಸಿನಿಮಾ ತೋರಿಸಲೇಬೇಕೆಂದು ಪ್ರಥಮ್ ಶತ ಪ್ರಯತ್ನ ಮಾಡುತ್ತಿದ್ದಾರೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top