fbpx
ದೇವರು

ರಾಮ – ಸೀತೆ ಲಕ್ಷ್ಮಣರ ವನವಾಸದ ಕಾಲದಲ್ಲಿ ಚಿತ್ರಕೂಟ ಪರ್ವತ ಸೇರಿ ಅಲ್ಲಿಯೇ ಕೆಲವು ವರ್ಷಗಳವರೆಗೆ ಕಾಲ ಹೇಗೆ ಕಳೆದರು ಗೊತ್ತಾ

ಚಿತ್ರಕೂಟ ಪರ್ವತದಲ್ಲಿ ರಾಮ – ಸೀತೆ ಲಕ್ಷ್ಮಣರ ವನವಾಸ .ಅಲ್ಲಿಯೇ ಕೆಲವು ವರ್ಷಗಳ ವರೆಗೆ ಕಾಲ ಕಳೆದರು.

 

ಪ್ರಯಾಗದ ಕಡೆಗೆ ಸೀತಾ ,ರಾಮ, ಲಕ್ಷ್ಮಣರು ಪ್ರಯಾಣವನ್ನು ಮುಂದುವರಿಸಿದರು. ರಾಮನು ಸೀತೆಯು ಕಾಡಿನಲ್ಲಿ ಕಷ್ಟದಿಂದ ಇರಬೇಕಾದ ಬಗ್ಗೆ ಶೋಕಪಟ್ಟನು .ರಾಜಕುಮಾರಿಯಾಗಿ ಇದ್ದವಳು. ಅರಮನೆಯಲ್ಲಿ ಸುಖದಿಂದ ಇರಬೇಕಾದವಳು, ಈಗ ಕಲ್ಲು ಮುಳ್ಳಿನ ಭಯಂಕರ ಅಡವಿಯಲ್ಲಿ ಸಂಚರಿಸಬೇಕಾಯಿತು. ಉತ್ತಮ ಭೋಜನ, ವಸತಿ ಅಲಂಕರಣಗಳಿಂದ ಸಂತೋಷದಿಂದ ಇರಬೇಕಾದವಳು, ಕಾಡಿನಲ್ಲಿ ಪ್ರಾಣಿಗಳೊಂದಿಗೆ ಪ್ರಾಣಿಗಳಂತೆಯೇ ಜೀವನ ಸಾಗಿಸಬೇಕಾಯಿತು  ಎಂದು ಮರುಗಿದರು.

 

 

ಆಗ ಸೀತೆಯೂ ರಾಮಚಂದ್ರ, ಕಾಲ ಒಂದೇ ರೀತಿ ಇರುವುದಿಲ್ಲ ಇಂದು ಇಲ್ಲದ ರಾಜ್ಯ ಮತ್ತು ಮುಂದೆ ಸಿಗಬಹುದಾಗಿದೆ. ನಮ್ಮ ಕೈಯಲ್ಲಿ ಇಲ್ಲದ ವಿಷಯದ ಬಗ್ಗೆ ಚಿಂತಿಸುವುದು ಬೇಡ. ನೀವಿರುವ ಸ್ಥಳವೇ ನನಗೆ ಅರಮನೆ. ಮಾನವನಿಗೆ ದುಃಖ ಸುಖಗಳ ಸ್ಥಿರವಾಗಿ ಇರಲಾರವು. ಆದುದರಿಂದ ಚಿಂತಿಸಬೇಡಿ ಎಂದು ಸಮಾಧಾನಪಡಿಸಿದಳು.

ಪ್ರಯಾಗ ಕ್ಷೇತ್ರ ಗಂಗಾ, ಯಮುನಾ ನದಿಗಳು ಸೇರುವ ಪುಣ್ಯ ಸ್ಥಳವಾಗಿರುವುದು. ಅದರಲ್ಲಿಯೇ ಮಹಾತ್ಮರಾದ ಭಾರದ್ವಾಜರ ಆಶ್ರಮವಿದೆ. ಅದೇ ನೋಡಿ ಎಂದು ರಾಮನು ಆಶ್ರಮದ ಕಡೆಗೆ ತೋರಿಸಿ ಹೇಳಿದನು. ಭಯಂಕರವಾದ ಶಬ್ದವು ಸಹ ಕೇಳಿಸುವುದಿಲ್ಲವೇ ? ಇದು ಗಂಗಾ ಯಮುನಾ ಪ್ರವಾಹಗಳು ಸೇರುವ ಶಬ್ದವು ಎಂದು ತಿಳಿಸಿದನು. ಮೂರು ಜನರು ಭಾರಧ್ವಜ ಆಶ್ರಮದ ಕಡೆಗೆ ನಡೆದರು .

ಭಾರದ್ವಾಜರು ಇವರನ್ನು ಸ್ವಾಗತಿಸಿ ಸತ್ಕರಿಸಿದರು. ರಾಮನಿಗೆ ಈ ಆಶ್ರಮದಲ್ಲಿಯೇ ವಾಸ ಮಾಡಿ ಬಿಡು. ಇದು ಕಾಡೇ ಆಗಿರುವುದು. ನಿಮಗೆ ಇಲ್ಲಿ ಯಾವುದೇ ಕಷ್ಟ ಉಂಟಾಗುವುದಿಲ್ಲ ಎಂದು ಹೇಳಿದಾಗ ರಾಮನು ಅವರಿಗೆ ವಂದಿಸಿ ಈ ಪ್ರದೇಶವು ಅಯೋಧ್ಯೆಗೆ ಹತ್ತಿರದಲ್ಲಿದೆ. ನಾಗರಿಕರು ನಾನು ಇಲ್ಲಿ ಇರುವ ವಿಷಯವನ್ನು ತಿಳಿದಾಗ ಬರಲು ಆರಂಭಿಸುವರು.ಆಶ್ರಮದ ಶಾಂತಿಗೆ ಸಹ ಭಂಗ ಉಂಟಾಗುವುದು. ನಾವು ದೂರದ ಆಶ್ರಮದಲ್ಲಿ ಇರಲು ಬಯಸಿದ್ದೇವೆ. ಎಂದು ಹೇಳಿದನು ಮತ್ತು ವಾಸಕ್ಕೆ ಯೋಗ್ಯವಾದ ಸ್ಥಳವನ್ನು ತಿಳಿಸಿ ಎಂದು ಕೇಳಿದನು.

 

 

ಭಾರದ್ವಾಜರು ಇಲ್ಲಿಂದ ಹತ್ತು ಹರಿದಾರಿ ದೂರದಲ್ಲಿ ಚಿತ್ರಕೂಟ ಪರ್ವತವಿದೆ. ಮಂದಾಕಿನಿ ತೀರದಲ್ಲಿ ಅಲ್ಲಿ ನದಿ, ಗಿರಿ, ಅಡವಿ, ಬಯಲು ಎಲ್ಲ  ಇವೆ. ಹೀಗೆ ಅನೇಕ ಋಷಿಗಳು ತಪಸ್ಸು ಮಾಡುತ್ತಿದ್ದಾರೆ. ಜಿಂಕೆ, ನವಿಲು, ಕರಡಿ, ಮಂಗಗಳು ಅಲ್ಲಿವೆ. ಸುಂದರವಾದ ಆ ಪ್ರದೇಶದಲ್ಲಿ ನೀವು ಕೂಡ ವಾಸ ಮಾಡಿರಿ ಎಂದು ಸ್ಥಳದ ಬಗ್ಗೆ ವಿವರಿಸಿದರು.

ಮರುದಿನದ ಅವರ ಪ್ರಯಾಣವು ಚಿತ್ರಕೂಟ ಪರ್ವತದ ಕಡೆಗೆ ಸಾಗಿತ್ತು. ಕಟ್ಟಿಗೆಯನ್ನು ಸೇರಿಸಿ ತೆಪ್ಪವನ್ನು ಮಾಡಿಕೊಂಡು ಯಮುನಾ ನದಿಯನ್ನು ದಾಟಿದರು. ಭಾರದ್ವಾಜರು ತಿಳಿಸಿದಂತಹ ಪ್ರದೇಶಕ್ಕೆ ಬಂದಾಗ ಮೂವರಿಗೂ ಸಂತಸವಾಯಿತು. ಹೂವು, ಹಣ್ಣುಗಳಿಂದ ಕೂಡಿದ ಸುಂದರ ನದಿ ತೀರವನ್ನು ಕಂಡರು. ಅಡವಿಯ ಸೌಂದರ್ಯ, ನೀರಿನ ಸೌಂದರ್ಯ, ಎಲ್ಲವೂ ಚಿತ್ರಕೂಟದಲ್ಲಿ ಇತ್ತು.

 

 

ಆ ಪ್ರದೇಶದಲ್ಲಿ ಸಮನಾದ ಸ್ಥಳವನ್ನು ಆರಿಸಿಕೊಂಡು, ಲಕ್ಷ್ಮಣನು ಸೀತಾರಾಮರಿಗಾಗಿ ಪರ್ಣ ಕುಟೀರವನ್ನು ನಿರ್ಮಿಸಿದನು. ಸೀತಾ, ರಾಮ ,ಲಕ್ಷ್ಮಣರು ಚಿತ್ರಕೂಟ ಪರ್ವತ ಪ್ರದೇಶದ ಆಶ್ರಮದಲ್ಲಿ ಅನೇಕ ಕಾಲದವರೆಗೆ ವಾಸ ಮಾಡಿದರು. ಆ ಪ್ರದೇಶವು ಉತ್ತಮ ಜಾತಿಯ ಮರಗಳನ್ನು ಹೊಂದಿತ್ತು. ಹೂ ಬಿಟ್ಟ ಮರಗಳಿದ್ದವು. ಸಮೀಪದಲ್ಲಿಯೇ  ನದಿ ಹರಿಯುತ್ತಿತ್ತು. ಹೀಗೆ ಚಿತ್ರ, ವಿಚಿತ್ರವಾದ ವಸ್ತುಗಳಿಂದ ಸುಂದರವಾದ ಪ್ರದೇಶ ಚಿತ್ರಕೂಟ ಪರ್ವತವಾಗಿತ್ತು.ಇಲ್ಲಿಯೇ ಕೆಲವು ಕಾಲ ನೆಮ್ಮದಿಯಿಂದ ಶಾಂತಯುತವಾಗಿ ಜೀವನ ಸಾಗಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top